ನವದೆಹಲಿ: ಜಾಗತಿಕ ಇಂಧನ ಪೂರೈಕೆ ವ್ಯತ್ಯಯ ಮತ್ತು ಸ್ಥಳೀಯ ಕೊರತೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಡೀಸೆಲ್ ಮಾರಾಟದ ಮೇಲೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದೆ.
ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಮಾರಾಟ ಮಾಡಬಹುದು. ಡೀಸೆಲ್ ಅನ್ನು ವಾಹನದ ಟ್ಯಾಂಕ್ಗೆ ಅಥವಾ PESO (Petroleum and Explosives Safety Organisation) ಅನುಮೋದಿತ ಕಂಟೇನರ್ಗಳಿಗೆ ಮಾತ್ರ ತುಂಬಲು ಅನುಮತಿ ಇದೆ. ಒಬ್ಬ ಗ್ರಾಹಕ ಅಥವಾ ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್ಗಿಂತ ಹೆಚ್ಚು ಡೀಸೆಲ್ ನೀಡಬಾರದು.
ಬಂಕ್ಗಳಿಂದ ಖರೀದಿಗೆ ನಿರ್ಬಂಧ
ಈ ಹೊಸ ಆದೇಶದ ಪ್ರಕಾರ, ಕೈಗಾರಿಕೆಗಳು, ವಾಣಿಜ್ಯ ಬಳಕೆದಾರರು, ಸಂಸ್ಥೆಗಳು, ಇವರು ಸಾಮಾನ್ಯ ಪೆಟ್ರೋಲ್ ಬಂಕ್ಗಳಿಂದ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಲು ಸಾಧ್ಯವಿಲ್ಲ.
ಏಕೆ ಈ ಕ್ರಮ?
ದೇಶದಲ್ಲಿ ಇಂಧನದ ಕೃತಕ ಕೊರತೆಯನ್ನು ತಡೆಯುವುದು. ಅಗತ್ಯ ಸೇವೆಗಳು ಮತ್ತು ಸಾಮಾನ್ಯ ವಾಹನ ಬಳಕೆದಾರರಿಗೆ ಇಂಧನ ಲಭ್ಯತೆಯನ್ನು ಖಚಿತಪಡಿಸುವುದು. ಜಾಗತಿಕ ಪೂರೈಕೆ ಅಡಚಣೆಗಳ ಪರಿಣಾಮವನ್ನು ಕಡಿಮೆ ಮಾಡುವುದು.
ಈ ಕ್ರಮದಿಂದ ಸಾಮಾನ್ಯ ಕಾರು, ಬೈಕ್ ಮತ್ತು ಲಾರಿ ಬಳಕೆದಾರರ ಮೇಲೆ ಹೆಚ್ಚಿನ ಪರಿಣಾಮ ಬೀಳುವ ಸಾಧ್ಯತೆ ಕಡಿಮೆ ಇದ್ದರೂ, ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಬಳಸುವ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಬಹುದು.

