ನವದೆಹಲಿ : ಐಎನ್ಎ (INA) ಮಾರುಕಟ್ಟೆಯ ಬಳಿ ನೇಹಾ ಬೋರಾ, ಯೋಗೇಂದ್ರ ಯಾದವ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನ್ೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ದೆಹಲಿಯ ಐಎನ್ಎ ಮಾರುಕಟ್ಟೆಯ ಬಳಿ AISA ಅಧ್ಯಕ್ಷೆ ನೇಹಾ, CPI(ML) ಲಿಬರೇಶನ್ನ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹಾಗೂ ಕಾರ್ಯಕರ್ತರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ವಶಕ್ಕೆ ಪಡೆಯಲಾಯಿತು.
ದಕ್ಷಿಣ ಅವೆನ್ಯೂನಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ನಾಯಕರಾದ ಡೆರೆಕ್ ಓ’ಬ್ರಿಯನ್, ಡೋಲಾ ಸೇನ್ ಮತ್ತು ಇತರರೊಂದಿಗೆ ವಶಕ್ಕೆ ಪಡೆಯಲಾಯಿತು.
ಈ ಕಾರ್ಯಕರ್ತರು ಮತ್ತು ಹಲವಾರು AISA ಸದಸ್ಯರು, CEC ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಫ್ದರ್ಜಂಗ್ ಮೇಲ್ಸೇತುವೆಯ (Flyover) ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಅವರನ್ನು ಬೇರೆ ಬೇರೆ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿದೆ ಎಂದು CPI(ML) L ನಾಯಕ ಬಾಲಾಜಿ ತಿಳಿಸಿದ್ದಾರೆ.

