ಸೌರವ್, ವಿಜೇತಾ, ಆಶುತೋಷ್- ಯಾರೀ ಕೋಕ್ರೋಚ್‌ ಸಾರಥಿಗಳು?

ಕಾಕ್ರೋಚ್ ಗಳಿಗೆ ಮೀಸೆ ನುಸುಳಿಸಲು ಅವಕಾಶ ಸಿಕ್ಕರೆ ಸಾಕು, ಅವು ಇಡೀ ಮನೆಯನ್ನೇ ಆವರಿಸಿಕೊಳ್ಳುತ್ತವೆ. ಕೆಟ್ಟು ಹೋದ ದೇಶದ ವ್ಯವಸ್ಥೆಯೊಳಗೆ ಈ ಕಾಕ್ರೋಚ್ ಗಳು ನುಗ್ಗಲಿ. CJP ಯ ಮುಂದಿನ ಹೆಜ್ಜೆ ಧರ್ಮ ದ್ವೇಷಗಳ ವಿರುದ್ಧವಾಗಿರಲಿ. ಭಾರತ ಬದಲಾವಣೆ ಬಯಸುತ್ತಿದೆ ರೋಶ್ನಿ ಅನಿಲ್‌ ರೊಸಾರಿಯೊ, ಹವ್ಯಾಸಿ ಬರಹಗಾರ್ತಿ.

ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ  ವ್ಯಾಸಂಗ ಮಾಡುತ್ತಿರುವ Political Communications Strategist ಅಪ್ಪಟ ಭಾರತೀಯ ಹಿಂದೂ ನೌಜವಾನ್ ಮಹಾರಾಷ್ಟ್ರದ ಅಭಿಜಿತ್ ದೀಪ್ಕೇ, ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಇಂದು ಭಾರತಕ್ಕೆ ಬಂದಿದ್ದಾರೆ.

ಆಕ್ಚುವಲಿ, ಕಾಕ್ರೋಚ್ ಗಳೆಂದರೆ ನನಗೆ ಭಯಕ್ಕಿಂತಲೂ ಜಾಸ್ತಿ ಅಸಹ್ಯವಿತ್ತು. ಆದರೆ ಈ ದೇಶದ ನಿರುದ್ಯೋಗಿ ಯುವಜನರನ್ನು ಹೀಯಾಳಿಸಿ ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ‘ಕಾಕ್ರೋಚ್ ಗಳು, ಪ್ಯಾರಾಸೈಟ್ ಗಳು’ ಅಂದರೆ ಜಿರಳೆಗಳು ಮತ್ತು ಪರಾವಲಂಬಿ ಜೀವಿಗಳು ಎಂದು ಹಣೆಪಟ್ಟಿ ಕೊಟ್ಟ ಆಕ್ರೋಶಕ್ಕೆ ಅವರಿಗೆ ಕೌಂಟರ್ ಕೊಡಲು  ಅಭಿಜಿತ್ ದೀಪ್ಕೇ ಎಂಬ ಯುವಕ ಆರಂಭಿಸಿದ ‘ಕಾಕ್ರೋಚ್ ಜನತಾ ಪಾರ್ಟಿ’ ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಮೇಲೆ ಅದೇಕೋ ಏನೋ ನನಗೆ ಕಾಕ್ರೋಚ್ ಎಂಬ ಪದ ಬಹು ಅಪ್ಯಾಯಮಾನವಾಗತೊಡಗಿತು.

ಆರಂಭದಲ್ಲಿ ಇದೇನೋ ಲಾಟ್ಪೋಟ್ ಇರಬಹುದು ಎಂದು ನಾನಂದುಕೊಂಡಿದ್ದೆ. ಆದರೆ ಅಭಿಜಿತ್ ದೀಪ್ಕೇ ರೂಪಿಸಿದ ಕಾರ್ಯತಂತ್ರ, ಕಾರ್ಯವೈಖರಿ ಸ್ವಲ್ಪಮಟ್ಟಿಗೆ ತಿಳಿದ ಮೇಲೆ, ಇದು ಹಾಗಲ್ಲ ಅಂತನಿಸಿತು.

ಅಭಿಜಿತ್ ದೀಪ್ಕೇ

ಅದರ ಸಂಸ್ಥಾಪಕ ಅಭಿಜಿತ್ ದೀಪ್ಕೇ ತಾನು ವಿದೇಶದಲ್ಲಿರುವಾಗಲೇ ತನ್ನ ಸಾರ್ವಜನಿಕ ಸಂಪರ್ಕ ಮತ್ತು ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಭಾರತದಲ್ಲಿ ತನ್ನ ಅಧಿಕೃತ ವಕ್ತಾರರಾಗಿ  ಮೂವರು ಪ್ರಮುಖ ಡಿಜಿಟಲ್ ಸೃಜನಶೀಲರನ್ನು ಮತ್ತು ಪತ್ರಕರ್ತರನ್ನಾಗಿ ʼಅಪ್ಪಟ ಹಿಂದೂಗಳನ್ನೇʼ ನೇಮಿಸಿದ್ದಾರೆ. ನಾವು ಯಾವಾಗಲೂ ಭಾರತದ ಹಿಂದೂಗಳನ್ನು ಗೌರವಿಸುವವರು.

ಅಭಿಜಿತ್ ದೀಪ್ಕೇ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ಹಾಗಾಗಿ ಹೇಳಬೇಕಾಗೇನೂ ಇಲ್ಲ.  ಅವರ ಮೂವರು ವಕ್ತಾರರ ಬಗ್ಗೆ ನಾನು ಸ್ವಲ್ಪ ಸ್ಟಡಿ ಮಾಡಿದೆ.

ಸೌರವ್ ದಾಸ್‌ – CJP ಮುಖ್ಯ ವಕ್ತಾರ

ದೆಹಲಿ ಮೂಲದ ಸ್ವತಂತ್ರ ತನಿಖಾ ಪತ್ರಕರ್ತರಾಗಿರುವ ಸೌರವ್, ಮಾನವ ಹಕ್ಕುಗಳು, ಕಾನೂನು ಮತ್ತು ಆಡಳಿತದ ವಿಷಯಗಳ ಬಗ್ಗೆ ಬಹು ಚೆನ್ನಾಗಿ ಬರೆಯುತ್ತಾರೆ. ಮಾಹಿತಿ ಹಕ್ಕು ಆಯೋಗದ ಕಾರ್ಯಕರ್ತರಾಗಿ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿ ಪಾರದರ್ಶಕತೆಗಾಗಿ ಹೋರಾಡಿದವರಾಗಿದ್ದಾರೆ.

ಮೋದಿ ಸರಕಾರ ಸುಳ್ಳು ಆರೋಪಗಳ ಅಡಿಯಲ್ಲಿ ಸೆಪ್ಟೆಂಬರ್ 2020 ರಿಂದ ನಿರಂತರವಾಗಿ 5 ವರ್ಷ 8 ತಿಂಗಳಿನಿಂದ ಅಮಾನವೀಯವಾಗಿ ಬಂಧನದಲ್ಲಿರುವ ಉಮರ್ ಖಾಲಿದ್ ಬಂಧನದ ವಿರುದ್ಧ CJP ಯ ವಕ್ತಾರರಾಗಿ ನೇಮಕಗೊಂಡ ನಂತರ ಸೌರವ್ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.

ತನ್ನ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಮೋದಿ ಸರಕಾರ ದೇಶದ ಅತ್ಯಂತ ಕಠಿಣ ಕಾನೂನುಗಳಲ್ಲೇ ಮೊದಲ ಪ್ರಮುಖ ಕಾನೂನು ಮತ್ತು ಜಾಮೀನು ಸಿಗಲು ಅತ್ಯಂತ ಕಷ್ಟಕರವಾಗಿರುವ UAPA ಕಾಯ್ದೆಯ ದುರ್ಬಳಕೆ ಮಾಡುತ್ತಿದೆ.

ಆದಿವಾಸಿ ಮತ್ತು ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ನಮ್ಮ ಕ್ರೈಸ್ತ ಸಮುದಾಯದ ತಮಿಳುನಾಡು ಮೂಲದ ಫಾದರ್ ಸ್ಟ್ಯಾನ್ ಸ್ವಾಮಿ ಎಂಬ ಜೆಜ್ವಿತ್ ಫಾದರ್ ಸತ್ತದ್ದು…. ಆ 86 ರ ಹರೆಯದ ವಯೋವೃದ್ಧ ಹಣ್ಣುಹಣ್ಣು ಮುದುಕ ಪ್ರಧಾನಿ ಮೋದಿ ಕೊಲೆಗೆ ಸಂಚು ರೂಪಿಸುತ್ತಿದ್ದಾರೆ ಎಂಬ ಸುಳ್ಳು ಆರೋಪದಡಿ ಇದೇ UAPA ಕಾಯಿದೆಯಡಿ ಜೈಲು ಸೇರಿದ್ದನ್ನು ಎಂದೂ ನಾನು ಮರೆಯಲಾರೆ. ಅವರೊಂದಿಗೆ ಹಲವು ಹಿಂದೂ ಹಿರಿಯ ಜೀವಗಳು ಜೈಲು ಸೇರಿದ್ದರು. ಅಷ್ಟು ವಯೋವೃದ್ದರು ಮೋದಿ ಕೊಲೆಗೆ ಸ್ಕೆಚ್‌ ಹಾಕೋದೇ…. ಇದೆಂಥಾ ನಾನ್ಸೆನ್ಸ್. ಮೋದಿ ಯಾಕೆ ಅಷ್ಟು ಹೆದರು ಪುಕ್ಕಲು? ಅಂತ ನನ್ನ ಪ್ರಶ್ನೆ.

ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ

ದೇಶದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು 1967 ರಲ್ಲಿ ಇಂದಿರಾ ಗಾಂಧಿ ಜಾರಿಗೆ ತಂದ ಕಾನೂನಿನ ದುರ್ಬಳಕೆ ಮಾಡಿಕೊಂಡು ಈಗಿನ ಕೇಂದ್ರ ಸರಕಾರ JNU ನ ಸಂಶೋಧನಾ ವಿದ್ಯಾರ್ಥಿ, ವಿದ್ಯಾರ್ಥಿ ನಾಯಕ ಮತ್ತು ಯುವ ಹೋರಾಟಗಾರ ಉಮರ್ ಖಾಲಿದ್ ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿರಿಸಿದೆ.

ಉತ್ತರ ಭಾರತದಲ್ಲಿ ಹೆಚ್ಚುತ್ತಿದ್ದ ದ್ವೇಷದ ಅಪರಾಧಗಳನ್ನು ವಿರೋಧಿಸಿ United Against Hate ಅಭಿಯಾನ ಪ್ರಾರಂಭಿಸಿ ಮೋದಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಉಮರ್, ಮೋದಿ ಸರಕಾರ ತಂದ CAA ವಿರುದ್ಧ ಹೋರಾಟ ಮಾಡುವಾಗ ಯಾರೋ ಕಿಡಿಗೇಡಿಗಳಿಂದ ಭುಗಿಲೆದ್ದ ಹಿಂಸಾಚಾರಕ್ಕಾಗಿ ಜೈಲು ಸೇರಿದ್ದ.

ಅವರ ಬಿಡುಗಡೆಗಾಗಿ ಅಂದಿನಿಂದ ಸಹಸ್ರಾರು ಹೋರಾಟಗಾರರು ಹೋರಾಡುತ್ತಿದ್ದಾರೆ.

ವಿಜೇತಾ ದಹಿಯಾ…. CJP ಅಧಿಕೃತ ವಕ್ತಾರ

ಹರಿಯಾಣದ ವಿಜೇತಾ, ಚಲನಚಿತ್ರ ನಿರ್ಮಾಪಕರು ಮಾತ್ರವಲ್ಲದೆ ರಾಜಕೀಯ ಸಂಶೋಧಕರು, ಬರಹಗಾರರು ಹಾಗೂ Content Creator ಕೂಡಾ ಆಗಿದ್ದಾರೆ. Power of Universe ಮತ್ತು To Hell With That Job ಎಂಬ 2 ಜನಪ್ರಿಯ ಪುಸ್ತಕಗಳ ಲೇಖಕರಾಗಿದ್ದಾರೆ. ಮೋದಿ ಸರಕಾರ ಭಯಪಡುವ ನಿರ್ಭೀತ ಯೂಟ್ಯೂಬರ್ ಧ್ರುವ ರಾಠೀ ಅವರ ಸಂಶೋಧನೆ ಮತ್ತು ಬರವಣಿಗೆ ತಂಡದ ಸದಸ್ಯರೂ ಆಗಿದ್ದಾರೆ.

ಅಶುತೋಷ್ ರಾಂಕಾ – CJP ಅಧಿಕೃತ ವಕ್ತಾರ

ಅಶುತೋಷ್ ರಾಜಸ್ಥಾನದವರು.  IIT ಕಾನ್ಪುರದಲ್ಲಿ ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿರುವ ಇವರು, ವಿದ್ಯಾರ್ಥಿಗಳ ಜಿಮ್ಖಾನಾದ ಅಂದರೆ ಭಾರತೀಯ ಐಐಟಿ ಮತ್ತು ಐಐಎಸ್ಸಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಇರುವ ಕ್ರೀಡೆ, ಸಾಂಸ್ಕೃತಿಕ ಮತ್ತು ತಾಂತ್ರಿಕ ಚಟುವಟಿಕೆಗಳ  ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.ಲಂಡನ್ ನಲ್ಲಿ ಉದ್ಯೋಗದಲ್ಲಿದ್ದರೂ ಆ ಕಾರ್ಪೊರೇಟ್ ಜಗತ್ತನ್ನು ತೊರೆದು ಭಾರತಕ್ಕೆ ಮರಳಿ ಸಾರ್ವಜನಿಕ ನೀತಿ, ಆಡಳಿತ ಮತ್ತು  ಸಾಮಾಜಿಕ ವಕಾಲತ್ತು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶಿಕ್ಷಣ ಸುಧಾರಣೆ, ಪರಿಸರ ಸಂರಕ್ಷಣೆ ಮತ್ತು ಯುವ ಕಲ್ಯಾಣಕ್ಕೆ ಸಂಬಂಧಿಸಿದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.  ಸಿದ್ಧಾಂತದಲ್ಲಿ ಮಾತ್ರವಲ್ಲದೆ ಆಚರಣೆಯಲ್ಲಿಯೂ ಸಹ ತಳಮಟ್ಟದಿಂದ ಕಾರ್ಯನಿರ್ವಹಿಸುವ ಅವರು ಕ್ರಿಯಾಶೀಲತೆಯ ಜೊತೆಗೆ, ವಿವಿಧ ಮಾಧ್ಯಮ ವೇದಿಕೆಗಳಿಗಾಗಿ ಆಡಳಿತ, ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿಯ ಕುರಿತು ಅಭಿಪ್ರಾಯ ಲೇಖನಗಳನ್ನು ಬರೆದಿದ್ದಾರೆ.

ಕೋಕ್ರೋಚ್‌ ಜನತಾ ಪಾರ್ಟಿಯ ಪತ್ರಿಕಾ ಗೋಷ್ಠಿ

ಈಗಾಗಲೇ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ತಮ್ಮ ಮೊದಲ ಅಧಿಕೃತ ಪತ್ರಿಕಾಗೋಷ್ಠಿಯನ್ನು ನಡೆಸಿದ ಕಾಕ್ರೋಚ್ ಜನತಾ ಪಾರ್ಟಿ, ಪರೀಕ್ಷಾ ಅಕ್ರಮಗಳ ಬಗ್ಗೆ ದೊಡ್ಡದಾಗಿ ಧ್ವನಿ ಎತ್ತಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ದೇಶಮಟ್ಟದ ಪ್ರಮುಖ ಪರೀಕ್ಷೆ NEET ನಲ್ಲಿ ಪೇಪರ್ ಲೀಕ್ ಆದರೂ  ಅವ್ಯವಹಾರಗಳ ವಿರುದ್ಧ  ಶಿಕ್ಷಣ ಸಚಿವಾಲಯದ ಮಂತ್ರಿಯಾದ ಇವರು ಇಂದಿಗೂ ಕ್ರಮ ಕೈಗೊಳ್ಳಲೇ ಇಲ್ಲ.

CBSE ಮಂಡಳಿಯ On-Screen Marking ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ವೈಫಲ್ಯಗಳು ಕಂಡುಬಂದರೂ, ಸಚಿವರು ಕ್ರಮ ಕೈಗೊಳ್ಳಲಿಲ್ಲ.

ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ಪದೇ ಪದೇ ನಡೆಯುತ್ತಿರುವ ಪರೀಕ್ಷಾ ಸೋರಿಕೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿನ ವಿಳಂಬಗಳು ಲಕ್ಷಾಂತರ ಯುವಕರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿವೆ. ‘ವಿಕಸಿತ ಭಾರತ’ ಎಂದು ಬಾಯಲ್ಲಿ  ಬಂಬಡಾ ಬಾರಿಸುವ ಮೋದಿಯವರ ಸರ್ಕಾರದಲ್ಲಿ ಮೌಲ್ಯಮಾಪನ ವ್ಯವಸ್ಥೆಯ ವಿಶ್ವಾಸಾರ್ಹತೆಯೇ ಕುಸಿದು ಹೋಗಿ ಯುವ ಸಮುದಾಯದಲ್ಲಿ ಆಕ್ರೋಶ ಎದ್ದಿದೆ.

ನವದೆಹಲಿಯ ಜಂತರ್ ಮಂತರ್‌ನಲ್ಲಿ ಇಂದು ಪ್ರತಿಭಟನೆ ನಡೆಯಿತು. ಮೋದಿ ನೇತೃತ್ವದ ನೀತಿಗಳ ವಿರುದ್ಧ ಹೋರಾಟ ಮಾಡಿ ಬಂಧನಕ್ಕೊಳಗಾಗಿದ್ದ ಪ್ರಸಿದ್ಧ ಪರಿಸರವಾದಿ ಮತ್ತು ಲಡಾಖ್‌ನ ಶಿಕ್ಷಣ ಸುಧಾರಕ ಸೋನಂ ವಾಂಗ್‌ಚುಕ್ ಕೂಡಾ ಕಾಕ್ರೋಚ್ ಜನತಾ ಪಾರ್ಟಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಸಾಮಾಜಿಕ ಹೋರಾಟಗಾರರು, ಚಿಂತಕರು ಬುದ್ಧಿಜೀವಿಗಳು, ಪ್ರಗತಿಪರರು, ಯುವ ಸಮುದಾಯ ಇಂದು ಜಂತರ್ ಮಂತರ್ ನಲ್ಲಿ  ಒಂದಾಗಿ ದೇಶದ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದರು.

ಕಾಕ್ರೋಚ್ ಗಳಿಗೆ ಮೀಸೆ ನುಸುಳಿಸಲು ಅವಕಾಶ ಸಿಕ್ಕರೆ ಸಾಕು, ಅವು ಇಡೀ ಮನೆಯನ್ನೇ ಆವರಿಸಿಕೊಳ್ಳುತ್ತವೆ.

ಕೆಟ್ಟು ಹೋದ ದೇಶದ ವ್ಯವಸ್ಥೆಯೊಳಗೆ ಈ ಕಾಕ್ರೋಚ್ ಗಳು ನುಗ್ಗಲಿ. CJP ಯ ಮುಂದಿನ ಹೆಜ್ಜೆ ಧರ್ಮ ದ್ವೇಷಗಳ ವಿರುದ್ಧವಾಗಿರಲಿ. ಭಾರತ ಬದಲಾವಣೆ ಬಯಸುತ್ತಿದೆ.

ರೋಶ್ನಿ ಅನಿಲ್‌ ರೊಸಾರಿಯೊ

ಹವ್ಯಾಸಿ ಬರಹಗಾರ್ತಿ.

ಇದನ್ನೂ ಓದಿ- ಕೆಪಿಸಿಸಿ ಅಧ್ಯಕ್ಷರಾದ ‘ಸೈದ್ಧಾಂತಿಕ ಅಹಿಂದ ಪ್ರಜ್ಞೆ’ ಬಿ.ಕೆ. ಹರಿಪ್ರಸಾದ್! https://kannadaplanet.com/b-k-hariprasad-ideologically-unhindered-consciousness/

More articles

Latest article

Most read