ಪೋಕ್ಸೋ ಪ್ರಕರಣದ ಯಡಿಯೂರಪ್ಪನವರಿಗೆ ಅಭಿಮಾನೋತ್ಸವ

ಅಧಿಕಾರಕ್ಕಾಗಿ ಇಷ್ಟೆಲ್ಲಾ ಅನೈತಿಕ ರಾಜಕಾರಣದಲ್ಲಿ ತೊಡಗಿ, ಕೊನೆಗೆ ಪೋಕ್ಸೋ ಹಗರಣದಲ್ಲೂ ಸಿಲುಕಿರುವ ಯಡಿಯೂರಪ್ಪನವರು ಅದ್ಯಾವ ಮುಖಹೊತ್ತು ಅಭಿಮಾನೋತ್ಸವ ಸಮಾವೇಶ ಮಾಡಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಆದರೂ ‘ಜನ ಮರುಳೋ ಜಾತ್ರೆ ಮರುಳೋ’ ಎನ್ನುವಂತೆ ಸಮಾವೇಶಕ್ಕೆ ಜನರೂ ಬರುತ್ತಾರೆ, ವೈಭವೀಕರಣಗೊಳ್ಳುವ ವ್ಯಕ್ತಿಯ ಅನೈತಿಕತೆಯನ್ನು ಮರೆಯುತ್ತಾರೆ. ಮಾರಿಕೊಂಡ ಸುದ್ದಿ ಮಾಧ್ಯಮಗಳು ಇದನ್ನೊಂದು ಐತಿಹಾಸಿಕ ಸಮಾವೇಶ ಎಂಬಂತೆ ಬಿಂಬಿಸಿ ಚಾರಿತ್ರ್ಯ ಹೀನ ವ್ಯಕ್ತಿಯನ್ನು ಚಾರಿತ್ರಿಕ ಶಕ್ತಿ ಎಂಬಂತೆ ಹೊಗಳುತ್ತವೆ. ಇಲ್ಲಿಗೆ ಸುಳ್ಳಿನ ಮೆರವಣಿಗೆಯಲ್ಲಿ ಸತ್ಯ ಮರೆಯಾಗುತ್ತದೆ –ಶಶಿಕಾಂತ ಯಡಹಳ್ಳಿ,

ವಾಮಮಾರ್ಗಗಳ ಮೂಲಕ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಆಪರೇಶನ್ ಕಮಲದ ರೂವಾರಿ ಮಾನ್ಯ ಬಿ.ಎಸ್ ಯಡಿಯೂರಪ್ಪನವರು ರಾಜಕೀಯಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದವಂತೆ. ಈ ಸುವರ್ಣ ಮಹೋತ್ಸವವನ್ನು “ಬಿಎಸ್ ವೈ ಅಭಿಮಾನೋತ್ಸವ” ಹೆಸರಲ್ಲಿ ಇಂದು (ಮೇ 9 ರಂದು ) ಚಿತ್ರದುರ್ಗದಲ್ಲಿ ಐತಿಹಾಸಿಕ ಬೃಹತ್ ಸಮಾವೇಶದ ಮೂಲಕ ಆಚರಿಸಲಾಗುತ್ತಿದೆ. ಈ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರವರನ್ನು ಕರೆಸಲಾಗುತ್ತಿದೆ.

ಈಗ ಕರ್ನಾಟಕದ ರಾಜಕೀಯದಲ್ಲಿ ಯಡಿಯೂರಪ್ಪನವರು ನೇಪಥ್ಯಕ್ಕೆ ಸೇರಿಯಾಗಿದೆ. ಬಹುಷಃ ಇದು ಅವರ ನಿರ್ಗಮನದ ವಿದಾಯೋತ್ಸವ ಇರಬಹುದು. ಅವರ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಈ ಸಮಾವೇಶ ಮೆಟ್ಟಿಲಾಗಬಹುದು ಎಂಬುದೇ ಈ ಅಭಿಮಾನೋತ್ಸವದ ಹಿಂದಿರುವ ಉದ್ದೇಶವಾದಂತಿದೆ.

ಪತ್ರಿಕೆಗಳಲ್ಲಿ ಪೂರ್ಣ ಪುಟಗಳ ಬಣ್ಣಬಣ್ಣದ ಜಾಹೀರಾತುಗಳನ್ನು ಕೊಡಲಾಗುತ್ತಿದೆ, ಯಡಿಯೂರಪ್ಪನವರಿಂದ ಫಲಾನುಭವಿಗಳಾದ ಕೆಲವು ಬಿಜೆಪಿ ನಾಯಕರು ಸಮಾವೇಶದ ಯಶಸ್ಸಿಗೆ ತಮ್ಮ ತನು ಮನ ಧನ ಗಳನ್ನು ಸಮರ್ಪಿಸಿ ಓಡಾಡುತ್ತಿದ್ದಾರೆ. ಕೋಟಿಗಳನ್ನು ಖರ್ಚು ಮಾಡಿ ಕೋಟೆ ನಾಡಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಜಾತ್ರೆ ಮಾಡುತ್ತಿದ್ದಾರೆ.

ಇಷ್ಟಕ್ಕೂ ಯಡಿಯೂರಪ್ಪನವರು ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳಾದರೂ ಏನು? ಅವರ ಸಾಧನೆಗಳ ಪಟ್ಟಿ ಹೀಗಿದೆ.

* ಲಿಂಗಾಯತ ಜಾತಿಯ ಟ್ರಂಪ್ ಕಾರ್ಡ್ ಚಲಾಯಿಸಿ ಜಾತಿ ರಾಜಕೀಯ ಮಾಡಿದವರು.

* ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಅನೈತಿಕ ಪಕ್ಷಾಂತರ ರಾಜಕಾರಣವನ್ನು ಆರಂಭಿಸಿ ʼಆಪರೇಶನ್ ಕಮಲದ ಜನಕ’ ಎಂಬ ಬಿರುದು ಪಡೆದರು.

* ಕರ್ನಾಟಕದಲ್ಲಿ ನೆಲೆ ಇಲ್ಲದ ಕೋಮುವಾದಿ ಪಕ್ಷವಾದ ಬಿಜೆಪಿಗೆ 2008 ರಲ್ಲಿ ಆಪರೇಶನ್ ಕಮಲದ ಮೂಲಕ ಮೊದಲ ಬಾರಿಗೆ ಬಿಜೆಪಿ ಸರಕಾರ ರಚಿಸಿ ಕಮಲ ಪಕ್ಷಕ್ಕೆ ಗಟ್ಟಿಯಾದ ತಳಹದಿ ಒದಗಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದರು.

* 2018 ರಲ್ಲಿ ಬೇರೆ ಪಕ್ಷದ ಶಾಸಕರನ್ನು ಆಪರೇಶನ್ ಕಮಲದ ಮೂಲಕ ಪಕ್ಷ ಭ್ರಷ್ಟರನ್ನಾಗಿಸಿ ವಾಮಮಾರ್ಗದಿಂದ ರಾಜ್ಯಾಧಿಕಾರ ದಕ್ಕಿಸಿಕೊಂಡರು.

* 2019 ರಲ್ಲಿ ಒಂದು ಸಂದರ್ಶನದಲ್ಲಿ ‘ಆಪರೇಶನ್ ಕಮಲ ತಪ್ಪಲ್ಲ, ನಮಗೆ ಪಶ್ಚಾತ್ತಾಪವಿಲ್ಲ’ ಎಂದು ಹೇಳಿ ತಮ್ಮ ಅನೈತಿಕ ಕಾರ್ಯಾಚರಣೆಯನ್ನೂ ಸಮರ್ಥಿಸಿಕೊಂಡರು.

* ಮುಖ್ಯ ಮಂತ್ರಿಗಳಾಗಿದ್ದಾಗ ಸರಕಾರಿ ಭೂಮಿ ಡಿನೋಟಿಫೈ ಮಾಡಿ ಕುಟುಂಬಸ್ಥರಿಗೆ ಅನುಕೂಲ ಮಾಡಿಕೊಟ್ಟ ಆರೋಪಕ್ಕೆ ಒಳಗಾದರು. (ಕೇಸ್ ಇನ್ನೂ ಪೆಂಡಿಂಗ್ ಇವೆ)

* 2011 ರಲ್ಲಿ ಅಕ್ರಮ ಗಣಿಗಾರಿಕೆ ಭ್ರಷ್ಟಾಚಾರದ ಕೇಸಿನಲ್ಲಿ ಜೈಲುವಾಸ ಅನುಭವಿಸಿದರು.

* 2011 ರಲ್ಲಿ ಗಣಿ ಹಗರಣದಲ್ಲಿ ಲೋಕಾಯುಕ್ತ ರಿಪೋರ್ಟಿನಲ್ಲಿ ಆರೋಪಿಯಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟರು.

* 2013 ರಲ್ಲಿ ಮಾತೃ ಪಕ್ಷಕ್ಕೆ ದ್ರೋಹ ಮಾಡಿ “ಕರ್ನಾಟಕ ಜನತಾ ಪಾರ್ಟಿ” ಪಕ್ಷ ಕಟ್ಟಿ, ಸ್ಥಾನ ಮಾನ ಕೊಟ್ಟಿದ್ದ ಬಿಜೆಪಿಯನ್ನೇ ನಿಂದಿಸಿದರು. ಚುನಾವಣೆಯಲ್ಲಿ ಬಿಜೆಪಿಯನ್ನೂ ಹೀನಾಯವಾಗಿ ಸೋಲಿಸಿ, ತಮ್ಮ ಪಕ್ಷವೂ ಸೋತು ಕೊನೆಗೆ ಮತ್ತೆಂದೂ ಬಿಜೆಪಿಗೆ ಸೇರುವುದಿಲ್ಲ ಎಂದವರು ಮತ್ತೆ ಬಿಜೆಪಿ ಪಕ್ಷಕ್ಕೆ ಮರಳಿದರು.

* ಇದೆಲ್ಲವುಗಳಿಗಿಂತ ಹೀನಾತಿ ಹೀನ ಕೃತ್ಯವಾದ ಅಪ್ರಾಪ್ತೆಯ ಲೈಂಗಿಕ ಹಗರಣದ ಪೋಕ್ಸೋ ಪ್ರಕರಣದಲ್ಲಿ ಸಿಕ್ಕಾಕಿಕೊಂಡರು.

ಇವುಗಳಲ್ಲದೇ ಬೇಕಾದಷ್ಟು ಆರೋಪಗಳು ಮಾನ್ಯ ಯಡಿಯೂರಪ್ಪನವರ ಮೇಲಿವೆ. ಆದರೆ ಎಲ್ಲದಕ್ಕಿಂತಲೂ ಗಂಭೀರವಾಗಿರುವುದು ಪೋಕ್ಸೋ ಪ್ರಕರಣ.

ಏನಿದು ಪೋಕ್ಸೋ ( POCSO Act)ಪ್ರಕರಣ

2024 ಫೆಬ್ರವರಿ 2 ರಂದು ಅಪ್ರಾಪ್ತ ಬಾಲಕಿಯ ತಾಯಿಯೊಬ್ಬರು “ಯುವಕನೊಬ್ಬನಿಂದ ತನ್ನ ಮಗಳ ಮೇಲೆ ಲೈಂಗಿಕ ಕಿರುಕುಳವಾಗಿದೆ, ಪೊಲೀಸರು  ತನಿಖೆ ಮಾಡುತ್ತಿಲ್ಲ, ನೀವು ಸಹಾಯ ಮಾಡಿ” ಎಂದು ಕೇಳಿಕೊಂಡು ಯಡಿಯೂರಪ್ಪನವರ ಮನೆಗೆ ಹೋಗಿದ್ದರು. “ತನ್ನನ್ನು ಕೋಣೆಯೊಳಗೆ ಕರೆದುಕೊಂಡು ಹೋಗಿ ನನ್ನ ಬಟ್ಟೆಯೊಳಗೆ ಕೈ ಹಾಕಿ ಸ್ತನಗಳನ್ನು ಹಿಚುಕಿದರು” ಎಂದು ಅಳುತ್ತಾ ಬಂದ ಆ ಬಾಲಕಿ ತನ್ನ ತಾಯಿಗೆ ತಿಳಿಸಿದಳಂತೆ. ಯಾಕೆಂದು ತಾಯಿ ಕೇಳಿದಾಗ “ಆಕೆಯ ಮೇಲೆ ರೇಪ್ ಆಗಿದೆಯೋ ಇಲ್ಲವೊ ಎಂದು ಪರೀಕ್ಷಿಸಿದೆ” ಎಂದು ತಮ್ಮ ಕೃತ್ಯವನ್ನು ಯಡಿಯೂರಪ್ಪ ಸಮರ್ಥಿಸಿಕೊಂಡರಂತೆ. ಇದನ್ನೇ ಆ ಬಾಲಕಿ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಹಾಗೂ ಸಿಐಡಿ ಡಿವೈಎಸ್ಪಿ ಮುಂದೆ ಹಾಜರಾಗಿ 161ಸಿಆರ್ ಪಿಸಿ ಅಡಿಯಲ್ಲಿ ಹೇಳಿಕೆ ಕೊಟ್ಟಿದ್ದಾಳೆ. ಪ್ರಕರಣದ ತೀವ್ರತೆ ಜಾಸ್ತಿಯಾಗುತ್ತಿದ್ದಂತೆ ರುದ್ರೇಶ್ ಎಂಬಾತನ ಮೂಲಕ ಹಣದ ಕಂತೆಗಳನ್ನು ತಾಯಿಗೆ ನೀಡಲು ಮುಂದಾಗಿದ್ದು ಅದೂ ಕೂಡಾ ವಿಡಿಯೋದಲ್ಲಿ ರೆಕಾರ್ಡ್ ಆಗಿದೆಯಂತೆ.

ಅಭಿಮಾನೋತ್ಸವಕ್ಕೆ ಸಿದ್ಧತೆ

ಮೊದಲು ಕೇಸ್ ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರು ಪತ್ರಕರ್ತ ಶ್ರೇಯಸ್ ಮಧ್ಯ ಪ್ರವೇಶಿಸಿದ ಮೇಲೆ 2024 ಮಾರ್ಚ್ 14 ರಂದು ಎಫ್ ಐ ಆರ್ ದಾಖಲಿಸುತ್ತಾರೆ. ನಂತರ ಈ ಪ್ರಕರಣವನ್ನು ಸಿಐಡಿ ಗೆ ವರ್ಗಾಯಿಸಲಾಗುತ್ತದೆ. ಸಿಐಡಿ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದಾಗ ಸಂತ್ರಸ್ತೆಯ ತಾಯಿ ಜನವಾದಿ ಮಹಿಳಾ ಸಂಘಟನೆಯ ಸಹಾಯ ಪಡೆಯುತ್ತಾರೆ. ಹಿರಿಯ ವಕೀಲ ಎಸ್.ಬಾಲನ್ ರವರು ಪೋಕ್ಸೋ ಪ್ರಕರಣದ ತನಿಖೆಗೆ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತಾರೆ. ಈ ಅರ್ಜಿ ಸಲ್ಲಿಸಿದ ಎರಡು ದಿನಗಳ ನಂತರ ದೂರುದಾರೆ ತಾಯಿ ನಿಗೂಢವಾಗಿ ಸಾವನ್ನಪ್ಪುತ್ತಾರೆ. ಈ ಸಾವಿನ ಕುರಿತೂ ಜನವಾದಿ ಮಹಿಳಾ ಸಂಘಟನೆಯವರು ದೂರು ದಾಖಲಿಸುತ್ತಾರೆ.

ಯಾವಾಗ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆ ಆಯ್ತೋ ಆಗ ಎಚ್ಚೆತ್ತ ಸಿಐಡಿ ಪೊಲೀಸರು ಯಡಿಯೂರಪ್ಪನವರಿಗೆ ನೋಟೀಸ್ ಜಾರಿಗೊಳಿಸುತ್ತಾರೆ. ಕೂಡಲೇ ಪ್ರಕರಣ ರದ್ದು ಕೋರಿ ಯಡಿಯೂರಪ್ಪನವರು ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ. ಹೈಕೋರ್ಟ್ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದರೂ ಪೋಕ್ಸೋ ಪ್ರಕರಣ ರದ್ದು ಮಾಡಲು ನಿರಾಕರಿಸಿ 2025 ರಲ್ಲಿ ರದ್ದು ಅರ್ಜಿಯನ್ನು ವಜಾಗೊಳಿಸುತ್ತದೆ. ಆನಂತರ 2025 ನವೆಂಬರ್ 24 ರಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ವಿಚಾರಣೆಗೆ ಹಾಜರಾಗುವುದಕ್ಕೆ ಯಡಿಯೂರಪ್ಪ ತಡೆಯಾಜ್ಞೆ ಪಡೆದುಕೊಳ್ಳುತ್ತಾರೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸಂತ್ರಸ್ತ ಬಾಲಕಿಯ ಪರವಾಗಿ ವಕೀಲ ಬಾಲನ್ ರವರು ಸುಪ್ರೀಂ ಕೋರ್ಟಿನಲ್ಲಿ ವಕಾಲತ್ತು ಸಲ್ಲಿಸಿದ್ದಾರೆ. ಅಭಿಮಾನೋತ್ಸವದ 11 ದಿನಗಳ ನಂತರ ಅಂದರೆ ಮೇ 20 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆಯಂತೆ. ಯಡಿಯೂರಪ್ಪನವರ ವಿರುದ್ಧ ಬೇಕಾದಷ್ಟು ಪುರಾವೆಗಳು ಇರುವುದರಿಂದ ಈ ವಿಚಾರಣೆ ಯಡಿಯೂರಪ್ಪನವರು ಹಾಗೂ ಅವರ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಅಧಿಕಾರಕ್ಕಾಗಿ ಇಷ್ಟೆಲ್ಲಾ ಅನೈತಿಕ ರಾಜಕಾರಣದಲ್ಲಿ ತೊಡಗಿ, ಕೊನೆಗೆ ಪೋಕ್ಸೋ ಹಗರಣದಲ್ಲೂ ಸಿಲುಕಿರುವ ಯಡಿಯೂರಪ್ಪನವರು ಅದ್ಯಾವ ಮುಖಹೊತ್ತು ಅಭಿಮಾನೋತ್ಸವ ಸಮಾವೇಶ ಮಾಡಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ನೀತಿಗೆಟ್ಟ ರಾಜಕಾರಣದ ನಗ್ನತೆಯ ಪ್ರದರ್ಶನ ಇದು. ಆದರೂ ‘ಜನ ಮರುಳೋ ಜಾತ್ರೆ ಮರುಳೋ’ ಎನ್ನುವಂತೆ ಸಮಾವೇಶಕ್ಕೆ ಜನರೂ ಬರುತ್ತಾರೆ, ವೈಭವೀಕರಣಗೊಳ್ಳುವ ವ್ಯಕ್ತಿಯ ಅನೈತಿಕತೆಯನ್ನು ಮರೆಯುತ್ತಾರೆ. ಮಾರಿಕೊಂಡ ಸುದ್ದಿ ಮಾಧ್ಯಮಗಳು ಇದನ್ನೊಂದು ಐತಿಹಾಸಿಕ ಸಮಾವೇಶ ಎಂಬಂತೆ ಬಿಂಬಿಸಿ ಚಾರಿತ್ರ್ಯ ಹೀನ ವ್ಯಕ್ತಿಯನ್ನು ಚಾರಿತ್ರಿಕ ಶಕ್ತಿ ಎಂಬಂತೆ ಹೊಗಳುತ್ತವೆ. ಇಲ್ಲಿಗೆ ಸುಳ್ಳಿನ ಮೆರವಣಿಗೆಯಲ್ಲಿ ಸತ್ಯ ಮರೆಯಾಗುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಮರ್ಶಕರು

More articles

Latest article

Most read