ರದ್ದಾಗಿದ್ದ ದೇವನಹಳ್ಳಿ ಭೂಸ್ವಾಧೀನಕ್ಕೆ ಮರು ಜೀವ, ಜಮೀನು ಕೊಡಲು ಮುಂದಾದ ರೈತರು

ಬೆಂಗಳೂರು :  ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿ ವಿರೋಧಿಸಿ ವಿಪಕ್ಷಗಳು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಿರುವ ವೇಳೆಯಲ್ಲೇ  ರೈತರ ವಿರೋಧದಿಂದ  ಸರ್ಕಾರ ಕೈಬಿಟ್ಟಿದ್ದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ  ಹೋಬಳಿಯ ಕೈಗಾರಿಕಾ ವಲಯ ಸ್ಥಾಪನೆಗೆ ಮತ್ತೆ ಜೀವ ಬಂದಿದೆ.

ಈಗ ರೈತರೇ ಹೆಚ್ಚು ಮೊತ್ತದ ಪರಿಹಾರ ನೀಡಿದರೆ ಜಮೀನು ಕೊಡುವುದಾಗಿ  ಕೆಐಎಡಿಬಿ ಮುಂದೆ ಬಂದಿದ್ದಾರೆ. ಸರ್ಕಾರ ಪ್ರತಿ ಎಕರೆಗೆ 2.70  ಕೋಟಿ ರೂ. ಪರಿಹಾರ ನೀಡಲು ಚಿಂತಿಸುತ್ತಿದೆ.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ಕೈಗಾರಿಕೆಗೆ ಸ್ವಯಂ ಪ್ರೇರಿತವಾಗಿ ಭೂಮಿ ಕೊಡಲು ಮುಂದೆ ಬಂದಿದ್ದು ಕೆಐಎಡಿಬಿ ಪ್ರತಿ ಎಕರೆಗೆ 2.70  ಕೋಟಿ ರೂ. ಪರಿಹಾರ ನೀಡಲು ಮುಂದಾಗಿದೆ.

ಬಿಡದಿ ಟೌನ್‌ ಶಿಪ್‌ಗೆ ಸರ್ಕಾರ ಪ್ರತಿ ಎಕರೆಗೆ 2.30  ಕೋಟಿ ರೂ. ಪರಿಹಾರ ನಿಗದಿಪಡಿಸಿದೆ. ಆದರೆ ಚನ್ನರಾಯಪಟ್ಟಣ ಕೈಗಾರಿಕಾ ವಲಯಕ್ಕೆ ಪ್ರತಿ ಎಕರೆಗೆ 40  ಲಕ್ಷ ರೂ. ಅಧಿಕ ದರ ನಿಗದಿ ಮಾಡಿದೆ. ಇದು ಬಿಡದಿ ಟೌನ್‌ಶಿಪ್‌ ರೈತರು ಕೂಡ ಇಷ್ಟೇ ಪರಿಹಾರಕ್ಕೆ ಒತ್ತಡ ಹಾಕುವ ಸಾಧ್ಯತೆ ಇದೆ.

ಬಿಡದಿ ಟೌನ್‌ಶಿಪ್‌ಗೆ ಕೆಲವು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹೆಚ್ಚು ಪರಿಹಾರ ಕೊಡುವಂತೆ ಕೋರಿದ್ದಾರೆ. ಹೀಗಾಗಿ ದೇವನಹಳ್ಳಿ ರೀತಿಯ ಪರಿಹಾರಕ್ಕಾಗಿ ರೈತರು ಸರ್ಕಾರವನ್ನು ಒತ್ತಾಯಿಸಬಹುದು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ 120 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರ ಮುಂದಾಗಿತ್ತು. ಆದರೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ರೈತರ ವಿರೋಧಕ್ಕೆ ಮಣಿದ ಸರ್ಕಾರ ಭೂಸ್ವಾಧೀನ ಕೈಬಿಟ್ಟಿತ್ತು. ಈಗ ರೈತರೇ ಜಮೀನು ನೀಡಲು ಮುಂದೆ ಬಂದಿದ್ದಾರೆ.

 ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳಲ್ಲಿ ವಶಪಡಿಸಿಕೊಳ್ಳುವ ಪ್ರತಿ ಕೆರೆ 2.70 ಕೋಟಿ ಪರಿಹಾರ ನಿಗದಿಪಡಿಸುವಂತೆ   ಭೂದರ ನಿರ್ಧಾರಣಾ ಸಲಹಾ ಸಮಿತಿ  ಕೆಐಎಡಿಬಿ ಶಿಫಾರಸು ಮಾಡಿದೆ. ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್.ರಘುನಂದನ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಅರವಿಂದ ಭವನದಲ್ಲಿ ನಡೆದ ಅಧಿಕಾರಿಗಳು ಹಾಗೂ ಭೂಮಾಲೀಕರ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ತೀರ್ಮಾನವನ್ನು ಕೆಐಎಡಿಬಿ ಮಂಡಳಿಯ ಅನುಮೋದನೆಗಾಗಿ ಕಳಿಸಿ ಕೊಡಲಾಗುವುದು. ಪರಿಹಾರವನ್ನು ಹಣದ ರೂಪದಲ್ಲಿ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಪ್ರತೀ ಎಕರೆ ಕೃಷಿ ಜಮೀನಿಗೆ ಅಭಿವೃದ್ಧಿ ಪಡಿಸಿದ ಕೈಗಾರಿಕಾ ಬಡಾವಣೆಯಲ್ಲಿ 10,781 ಚದರ ಅಡಿ ಜಾಗವನ್ನು ಪಡೆದುಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ರಘುನಂದನ್ ತಿಳಿಸಿದ್ದಾರೆ.

ಈ ಜಮೀನುಗಳನ್ನು ರೈತರು ತಾವಾಗಿಯೇ ಬಿಟ್ಟುಕೊಡುತ್ತಿದ್ದು, ಈ ಸಂಬಂಧ ಕೆಐಎಡಿಬಿ ಕಾಯ್ದೆಯನುಸಾರ ಇದೇ ತಿಂಗಳ 16ರಂದು ಅಂತಿಮ ಅಧಿಸೂಚನೆ ಹೊರಡಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಈಗ ನಿಗದಿಪಡಿಸಿರುವ ಪರಿಹಾರ ದರವು ದೇವನಹಳ್ಳಿ ಭಾಗದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಸಂತ್ರಸ್ತ ರೈತರಿಗೆ ನ್ಯಾಯಯತ ಪರಿಹಾರ ಕೊಡಬೇಕೆಂಬುದು ಸರಕಾರದ ಆಶಯವಾಗಿದೆ ಎಂದು ಹೇಳಿದ್ದಾರೆ.

ತೀವ್ರ ವಿರೋಧದಿಂದ ಸರ್ಕಾರ ಯೋಜನೆ ರದ್ದುಪಡಿಸಿತ್ತು

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ 120 ಎಕರೆ ಜಮೀನು ವಶಪಡಿಸಿಕೊಳ್ಳಲು ಸರ್ಕಾರ ನೋಟಿಸು ಜಾರಿ ಮಾಡಿತ್ತು. ಆದರೆ ಇದನ್ನು ರೈತರು ವಿರೋಧಿಸಿ ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ಧರಣಿ ನಡೆಸಿದ್ದರು. ಕೊನೆಗೆ ಪ್ರತಿಭಟನೆಗೆ ಖ್ಯಾತ ನಟ ಪ್ರಕಾಶ್‌ ರಾಜ್‌ ಧುಮುಕಿದ್ದರು. ಸರ್ಕಾರ ಕೂಡಲೇ ಯೋಜನೆ ಕೈಬಿಟ್ಟು ಭೂ ಸ್ವಾಧೀನ ರದ್ದುಪಡಿಸಿತ್ತು. ಈಗ ರೈತರೇ ಸ್ವತಃ ಜಮೀನು ಕೊಡಲು ಮುಂದಾಗಿದ್ದಾರೆ.

ಬಿಡದಿಯಲ್ಲೂ ಕೂಡ ರೈತರು ಇದೇ ರೀತಿ ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ದೇವನಹಳ್ಳಿ ರೈತರಿಗೆ ನೀಡಿದ ಪರಿಹಾರವನ್ನು ಅವರು ಕೋರಬಹುದು ಎಂಬ ಸುದ್ದಿ ಹರಡಿದೆ.

More articles

Latest article

Most read