ಐದು ಬಾರಿ ಶಾಸಕರಾಗಿ ಆಯ್ಕೆ, ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಮಾಗಡಿ ಬಾಲಕೃಷ್ಣ

ಬೆಂಗಳೂರು : ಐದು ಬಾರಿ ಶಾಸಕರಾಗಿ ಗೆದ್ದು ಮೊದಲ ಬಾರಿಗೆ ಸಚಿವರಾಗಿ ಆಯಕೆಯಾಗಿರುವ ಮಾಗಡಿ ಬಾಲಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇನೆ. ಕ್ಷೇತ್ರದ ಜನತೆ ಐದು ಬಾರಿ ನನ್ನನ್ನ ಗೆಲ್ಲಿಸಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಮಾಗಡಿ ರಂಗನಾಥಸ್ವಾಮಿ ಕೃಪೆಯಿಂದ ಸಚಿವ ಸ್ಥಾನ ಸಿಕ್ಕಿದೆ. ಸಿಎಂ ಹಾಗೂ ಹೈಕಮಾಂಡ್ ನಾಯಕರಿಗೆ ಧನ್ಯವಾದ ಎಂದು ಮಾಗಡಿ ಬಾಲಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ : ಮಂಡ್ಯ ಜಿಲ್ಲೆಯ ರೈತರು, ಕಬ್ಬು ಬೆಳೆಗಾರರು ಮತ್ತು ಜನರ ಆಶೀರ್ವಾದವೇ ಈ ಸ್ಥಾನಕ್ಕೆ ಕಾರಣ. ನನ್ನನ್ನು ಆಯ್ಕೆ ಮಾಡಿದ ಹಿಂದೆ ಮಂಡ್ಯ ಜಿಲ್ಲೆಯ ಜನತೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಕೊಟ್ಟ ಬೆಂಬಲವಿದೆ. ಅವರೆಲ್ಲರಿಗೂ ನನ್ನ ನಮನಗಳು. ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ನೀಡಿದ ಕಾಂಗ್ರೆಸ್ ಹೈಕಮಾಂಡ್, ಸಿಎಂ ಮತ್ತು ಹಿರಿಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಚಲುವರಾಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

More articles

Latest article

Most read