ಸುವೇಂದ್ರು ಅಧಿಕಾರಿ ಆಪ್ತ ಚಂದ್ರನಾಥ್‌ ಹತ್ಯೆ ಆಗಿದ್ದು ಹೇಗೆ?

ಕೊಲ್ಕತ್ತ : ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಮಧ್ಯಮ ಗ್ರಾಮದಲ್ಲಿ ಬುಧವಾರ ತಡರಾತ್ರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದ  ಎರಡು ದಿನಗಳ ನಂತರ ಈ ಹತ್ಯೆ ನಡೆದಿದೆ.  

ನಂದಿಗ್ರಾಮ್ ಮತ್ತು ಭಬಾನಿಪುರ ಎರಡರಲ್ಲೂ ಅಧಿಕಾರಿಯ ಚುನಾವಣಾ ನಿರ್ವಹಣೆಯಲ್ಲಿ ಚಂದ್ರನಾಥ್‌ ರಥ್ ಪ್ರಮುಖ ಪಾತ್ರ ವಹಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಅಧಿಕಾರಿ ಗೆದ್ದಿದ್ದರು. ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭವಾನಿಪುರದಲ್ಲಿ ಸೋತಿದ್ದರು.  

ದಾಳಿ ಹೇಗೆ ನಡೆಯಿತು :  ಬಿಜೆಪಿ ನಾಯಕ ಕೌಸ್ತವ್ ಬಾಗ್ಚಿ ಅವರ ಪ್ರಕಾರ, ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ರಥ್‌ ಬಿಳಿ ಸ್ಕಾರ್ಪಿಯೋ ಎಸ್‌ಯುವಿಯನ್ನು ಹಿಂಬಾಲಿಸಿದರು ಮತ್ತು ಮಧ್ಯಗ್ರಾಮ್‌ನ ದೋಹರಿಯಾ ಬಳಿ ಅದನ್ನು ಅಡ್ಡಗಟ್ಟಿ ಅವರು ವಾಹನದೊಳಗೆ ಇದ್ದಾಗಲೇ ಗುಂಡು ಹಾರಿಸಿದರು.

ಎಸ್‌ಯುವಿಯಲ್ಲಿದ್ದ ಮತ್ತೊಬ್ಬ ಚಾಲಕ ಕೂಡ ಗಾಯಗೊಂಡರು ಮತ್ತು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾ ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಮಧ್ಯಗ್ರಾಮ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರೋಪಿಯು ಬಿಳಿ ಎಸ್‌ಯುವಿಯ ಎರಡೂ ಬದಿಗಳಿಂದ ಗುಂಡು ಹಾರಿಸಿದನು. ರಥ್‌ ಅವರ ಬಲ ಹೊಟ್ಟೆ ಮತ್ತು ಎಡ ಎದೆಗೆ ಗುಂಡು ಹಾರಿಸಲಾಯಿತು. ಗುಂಡುಗಳು ಹೃದಯವನ್ನು  ಹೊಕ್ಕಿದವೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಈ ಕೊಲೆಯನ್ನು ವೃತ್ತಿಪರರೇ ಮಾಡಿದ್ದಾರೆಂದು ತೋರುತ್ತದೆ. ಚಾಲಕನ ಪಕ್ಕದಲ್ಲಿ ಕುಳಿತಿದ್ದ ಚಂದ್ರನಾಥ್ ರಥ್ ಅವರೇ ಗುರಿಯಾಗಿದ್ದರು ಗುಂಡುಗಳನ್ನು ಗುರಿಯಾಗಿಸಿಕೊಂಡೆ ಹೊಡೆಯಲಾಗಿದೆ.  ಒಂದು ಗುಂಡು ಕೂಡ ಎಸ್‌ಯುವಿಯ ದೇಹ ಅಥವಾ ಮುಂಭಾಗದ ವಿಂಡ್‌ಶೀಲ್ಡ್‌ಗೆ ತಾಗಲಿಲ್ಲ.  ಚಾಲಕನಿಗೆ ಒಂದೆರಡು ಗುಂಡುಗಳು ತಗುಲಿದವು. ಉಳಿದವು ರಥ್‌ನ ಪ್ರಮುಖ ಅಂಗಗಳಿಗೆ ತಗುಲಿವೆ ಎಂದು ಅಧಿಕಾರಿ ಹೇಳಿದರು.

ಎರಡು-ಮೂರು ದಿನಗಳಿಂದ ಸಂಚು :
ತಮ್ಮ ಆಪ್ತ ಸಹಾಯಕರನ್ನು ಕಳೆದುಕೊಂಡ ಆಘಾತದಲ್ಲಿರುವ ಸುವೇಂದು ಅಧಿಕಾರಿ, ಇದೊಂದು ನಿರ್ದಯ ಮತ್ತು ಪೂರ್ವ ಯೋಜಿತ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಹಂತಕರು ಕಳೆದ 2-3 ದಿನಗಳಿಂದ ರಥ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು . ಕೊಲೆಗೆ ಸಂಪೂರ್ಣ ಸ್ಕೆಚ್ ಹಾಕಲಾಗಿತ್ತು. ಬಂಗಾಳ ಪೊಲೀಸ್ ಮಹಾನಿರ್ದೇಶಕರು ಕೂಡ ಇದು ಯೋಜಿತ ಕೃತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

More articles

Latest article

Most read