ಆಡಳಿತ ವಿರೋಧಿ ಅಲೆಗೆ ಪಿಣರಾಯಿ ವಿಜಯನ್ ‘ಹ್ಯಾಟ್ರಿಕ್’ ಕನಸು ಭಗ್ನ, ‘ಕೈ’ಹಿಡಿದ ಮತದಾರ

ತಿರುವನಂತಪುರಂ : ದೇವರ ಸ್ವಂತ ನಾಡು, ಬುದ್ದಿವಂತರ ರಾಜ್ಯ ಎಂದು ಹೆಸರಾದ ಕೇರಳದಲ್ಲಿ ಈ ಬಾರಿ ಮತದಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ (ಯುಡಿಎಫ್)ಗೆ ಅಧಿಕಾರ ನೀಡಿದ್ದಾನೆ. ಸದಾ ಬದಲಾವಣೆಗೆ ಬಯಸಿ ಮತ ಹಾಕುವ ಕೇರಳ ಮತದಾರರು ಈ ಮೂಲಕ ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಆಳ್ವಿಕೆಯಲ್ಲಿದ್ದ ಎಲ್‌ಡಿಎಫ್‌ನ ಹ್ಯಾಟ್ರಿಕ್ ಕನಸು ಭಗ್ನಗೊಳಿಸಿದ್ದಾರೆ. ದಶಕದಿಂದ ಅಧಿಕಾರ ಇಲ್ಲದ ಯುಡಿಎಫ್‌ಗೆ ಮತ್ತೆ ಅಧಿಕಾರದ ಗದ್ದುಗೆ ಸಿಕ್ಕಿದೆ.

ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ 71 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಸುಮಾರು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸ್ಪಷ್ಟ ಬಹುಮತ ಪಡೆದಿದೆ. ಆಡಳಿತಾರೂಢ ಎಲ್‌ಡಿಎಫ್ ಕೇವಲ 36  ಕ್ಷೇತ್ರಗಳಲ್ಲಿ ಗೆಲ್ಲುವಲ್ಲಿ ಶಕ್ತವಾಗಿದೆ. ಇತ್ತ ಕೇರಳಲ್ಲಿ ಪ್ರವೇಶ ಪಡೆಯಲು ಭಾರಿ ಹರಸಾಹಸ ನಡೆಸಿದ್ದ ಬಿಜೆಪಿ ಕೇವಲ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಈ ಮೂಲಕ ಕಳೆದ ನಾಲ್ಕು ಚುನಾವಣೆಗಳಿಂದ ಗಂಭೀರ ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಈ ಬಾರಿಯೂ ಹಿನ್ನಡೆಯಾಗಿದೆ.

ಎಲ್‌ಡಿಎಫ್‌ಗೆ ಹಿನ್ನಡೆ
2016ರ ಮೇ ತಿಂಗಳಿಂದ ಅಂದರೆ ಬರೋಬ್ಬರಿ ಒಂದು ದಶಕದಿಂದ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿದ್ದರು. ಮೂರನೇ ಬಾರಿಗೂ ಅವಕಾಶಕ್ಕಾಗಿ ಅವರು ತೀವ್ರ ಹೋರಾಟವನ್ನೇ ಮಾಡಿದ್ದರು. ಅದರೆ, ದಶಕದಿಂದಲೂ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಯಿಸುತ್ತಾ ಬಂದಿರುವ ಕೇರಳ ಮತದಾರ 2021ರಲ್ಲಿ ಅಪರೂಪಕ್ಕೆ ಎಲ್‌ಡಿಎಫ್‌ಗೆ ಮತ್ತೆ ಅಧಿಕಾರ ನೀಡಿದ್ದ. ಈಗ ಹತ್ತು ವರ್ಷ ಆಗಿರುವುದರಿಂದ ಮತ್ತು ಆಡಳಿತ ವಿರೋಧಿ ಅಲೆಯೂ ತೀವ್ರವಾಗಿದ್ದರಿಂದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.

ಎಡ ಸತ್ತಾತ್ಮಕ ರಂಗ ಏಕೈಕ ರಾಜ್ಯ ಕಳೆದುಕೊಳ್ಳುವುದರೊಂದಿಗೆ ಭಾರತ ಇದೀಗ ಎಡರಂಗ ಮುಕ್ತ ದೇಶವಾಗಿದೆ. ದೇಶದ ಯಾವ ರಾಜ್ಯದಲ್ಲೂ ಎಡರಂಗ ಆಡಳಿತದಲ್ಲಿಲ್ಲ. ಲಾಲ್‌ಸಲಾಂ ಈ ಮೂಲಕ ಭಾರತದ ರಾಜಕೀಯ ಭೂಪಟದಲ್ಲಿ ಮಕಾಡೆ ಮಲಗಿದ್ದು ಪಕ್ಷದ ಪುನಶ್ಚೇತನ ಕನಸು ದೂರ‌ ಸರಿದಂತಿದೆ.ಈ ಮೂಲಕ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಕಮ್ಯೂನಿಸ್ಟ್ ಚಳುವಳಿಯ ದನಿ ರಾಜಕೀಯವಾಗಿ ಉಡುಗಿ ಹೋಗುವಂತಾಗಿದೆ.

ಪದೇ ಪದೇ ಸರ್ಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳು ಎಲ್‌ಡಿಎಫ್ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದವು. ಶಬರಿಮಲೆ ಚಿನ್ನ ಕಳವು ಆರೋಪವು ಆಡಳಿತ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಿತ್ತು.

ನಿರಂತರ ತೆರಿಗೆ ಏರಿಕೆತೆರಿಗೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಯುಡಿಎಫ್‌ ವಿರುದ್ಧ ಜನಾಕ್ರೋಶ ರೂಪುಗೊಳ್ಳುವಂತೆ ಮಾಡಿದ್ದವು. ಕೇರಳದಲ್ಲಿ ಸಾಂಪ್ರದಾಯಿಕವಾಗಿ ಎಡಪಕ್ಷಗಳತ್ತ ಒಲವಿದ್ದ ಅಲ್ಪಸಂಖ್ಯಾತ ಮತಗಳು ಈ ಬಾರಿ ಯುಡಿಎಫ್ ಹಾಗೂ ಎನ್‌ಡಿಎ ಕಡೆಗೆ ಹಂಚಿ ಹೋಗಿದ್ದು ಪಿಣರಾಯಿ ಸರ್ಕಾರಕ್ಕೆ ಹಿನ್ನಡೆಯಾಯಿತು. ಯುವಜನರಿಗೆ ಉದ್ಯೋಗ ಸೃಷ್ಟಿಸಲು ವಿಫಲವಾಗಿರುವುದು ಮತದಾರರಲ್ಲಿ ಯುಡಿಎಫ್‌ಗೆ ಮಣೆ ಹಾಕಲು ಕಾರಣವಾಯಿತು. ಇದಲ್ಲದೆ ಬಂಡಾಯ ನಾಯಕರು ಸ್ಥಳೀಯವಾಗಿ ಎಲ್‌ಡಿಎಫ್ ಮತಗಳು ಕಡಿಮೆಯಾಗುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದ ಎಡರಂಗ ಮೈತ್ರಿಕೂಟಕ್ಕೆ ಆಡಳಿತ ವಿರೋಧಿ ಅಲೆ ತೀವ್ರವಾಗಿ ತಟ್ಟಿದೆ. ಪ್ರಮುಖವಾಗಿ ಯುವಜನರಿಗೆ ಉದ್ಯೋಗಾವಕಾಶಗಳ ಕೊರತೆ ಮತ್ತು ಕೇರಳ ಕಾಂಗ್ರೆಸ್ ನಾಯಕ ಜೋಸ್ ಕೆ. ಮಾಣಿ ಅವರಂತಹ ಹಿರಿಯ ನಾಯಕರ ಸೋಲು ಎಲ್‌ಡಿಎಫ್‌ಗೆ ಭಾರೀ ಆಘಾತ ನೀಡಿದೆ.

ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಸಂಪ್ರದಾಯವನ್ನು ಈ ಫಲಿತಾಂಶ ಮತ್ತೆ ನೆನಪಿಸಿದೆ. ಕಾಂಗ್ರೆಸ್ ಮೈತ್ರಿಕೂಟದ ಸಂಘಟಿತ ಹೋರಾಟ ಮತ್ತು ಜನಕಲ್ಯಾಣ ಯೋಜನೆಗಳ ಭರವಸೆಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಯುಡಿಎಫ್‌ ಕೇಂದ್ರ ಕಚೇರಿಗಳಲ್ಲಿ ಈಗ ವಿಜಯೋತ್ಸವದ ಸಂಭ್ರಮ ಮನೆಮಾಡಿದೆ.

ಕಾಂಗ್ರೆಸ್ ಗೆಲುವಿನ ಕಾರಣಗಳು:
ಕೇರಳದಲ್ಲಿ ಈ ಬಾರಿ ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಿಂದಲೇ ಪ್ರಯತ್ನ ಆರಂಭಿಸಿತ್ತು. ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕೇರಳದ ವಯನಾಡಿನಿಂದಲೂ ಕಣಕ್ಕಿಳಿದಿದ್ದರು. ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ ಬಳಿಕ ರಾಯ್‌ಬರೇಲಿ ಉಳಿಸಿಕೊಂಡು ವಯನಾಡಿನಿಂದ ಅವರ ಸಹೋದರಿ, ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲಾಯಿತು. ಅವರೂ ಸಹ ಭಾರಿ ಅಂತರದಿಂದ ಜಯಗಳಿಸಿ ಯುಡಿಎಫ್‌ ಅಧಿಕಾರಕ್ಕೆ ಮುನ್ನುಡಿ ಬರೆದಿದ್ದರು.

ಇದಲ್ಲದೆ, ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯವನ್ನು ದೂರ ಮಾಡಿ ಒಮ್ಮತ ಮೂಡುವಂತೆ ಮಾಡಲಾಗಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಲ್ಲ ನಾಯಕರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿದರು. ಕಾಂಗ್ರೆಸ್ ಮತ್ತು ಪ್ರಮುಖ ಮಿತ್ರಪಕ್ಷಗಳಾದ ಐಯುಎಂಎಲ್ ನಡುವೆ ಉತ್ತಮ ಸಮನ್ವಯ ಕಂಡುಬಂತು. ಸತತ ಸೋಲಿನ ನಂತರ ಈ ಬಾರಿ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದು ಗೆಲುವಿಗೆ ಪೂರಕವಾಯಿತು.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಭಾರೀ ಸದ್ದು ಮಾಡುವ ಮೂಲಕ ಬಹುತೇಕ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಇದೇ ಲಹರಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಕೇರಳದ ಮತದಾರರ ನಾಡಿಮಿಡಿತ ಅರಿಯುವಲ್ಲಿ ಸಫಲವಾಗಿದ್ದಲ್ಲದೇ ಚುನಾವಣೆ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟಿತ್ತು. ಅಲ್ಪಸಂಖ್ಯಾತರು ನಿರ್ಣಾಯಕ ಮತದಾರರಾಗಿದ್ದು ಅವರ ಒಲವು ಕೂಡ ತಮ್ಮಕಡೆಗೆ ಕ್ರೋಢೀಕರಣಗೊಳ್ಳುವಂತೆ ಮಾಡಿಕೊಂಡಿರುವುದು ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಸ್ಥಾನಗಳ ಸಂಖ್ಯೆ ಸೆಂಚುರಿ ಹೊಸ್ತಿಲಿಗೆ ತಂದು ನಿಲ್ಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಶಾಸಕರಾದ ರಾಜೀವ್‌ ಚಂದ್ರಶೇಖರ್
ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯಸಭಾ ಮಾಜಿ ಸದಸ್ಯ ರಾಜೀವ್‌ ಚಂದ್ರಶೇಖರ್ ಅವರು ತಿರುವನಂತಪುರಂನ ನೆಮಮ್ ಕ್ಷೇತ್ರದಿಂದ ವಿಜಯಿಯಾಗಿದ್ದು ಅವರೂ ಸೇರಿ ಮೂವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜೀವ್ ಚಂದ್ರಶೇಖರ್ ಅವರು ಮೊದಲ ಬಾರಿಗೆ ಕೇರಳ ವಿಧಾನಸಭೆ ಪ್ರವೇಶ ಮಾಡಿದ್ದಾರೆ.

More articles

Latest article

Most read