ತಮಿಳುನಾಡಿನಲ್ಲಿ ದಳಪತಿ ವಿಜಯ್‌ ಕಮಾಲ್, ತಲೆಕೆಳಗಾದ ಡಿಎಂಕೆ ಲೆಕ್ಕಾಚಾರ

ಚೆನ್ನೈ : ತಮಿಳುನಾಡಿನಲ್ಲಿ ಆರಂಭದಲ್ಲಿ 1 ಸ್ಥಾನದಿಂದ ಮುನ್ನಡೆ ಸಾಧಿಸುತ್ತಾ ಬಂದ ನಟ ವಿಜಯ್‌ ಟಿವಿಕೆ ಪಕ್ಷ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತಮಿಳುನಾಡಿನಲ್ಲಿ ಹೊಸ ಅಧ್ಯಾಯ ಸೃಷ್ಟಿ ಮಾಡಿದೆ.

50 ವರ್ಷಗಳಿಗೂ ಹೆಚ್ಚು ಕಾಲ ದ್ರಾವಿಡ ರಾಜಕಾರಣದ ಭದ್ರಕೋಟೆಯಾಗಿದ್ದ ತಮಿಳುನಾಡು, ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯ  ಹೊಂದಿತ್ತು. ಬದಲಾವಣೆಯ ಗಾಳಿ ಬೀಸಿದ್ದು,  ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿಎಂಕೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅದರ ಪ್ರಮುಖ ಪ್ರತಿಸ್ಪರ್ಧಿ ಎಐಎಡಿಎಂಕೆ ಮತ್ತು ಹೊಸ ಅಭ್ಯರ್ಥಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಡುವೆ ರಾಜ್ಯವು ತೀವ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿದೆ.

ವಿಜಯ್ ಅವರ ಟಿವಿಕೆ ರಾಜ್ಯದಲ್ಲಿ ಡಿಎಂಕೆಯನ್ನು ಹಿಂದಿಕ್ಕಿ, ಮುನ್ನುದ್ದಿದೆ.  ಟಿವಿಕೆ ರಾಜ್ಯದ 234 ಸ್ಥಾನಗಳಲ್ಲಿ ಸುಮಾರು 100 ಸ್ಥಾನಗಳನ್ನು ಗೆಲ್ಲುವ ಮೂಲಕ ಕಿಂಗ್‌ಮೇಕರ್ ಆಗಬಹುದು ಎಂದು ಊಹಿಸಿದೆ – ಅಲ್ಲಿ ಬಹುಮತದ ಗುರುತು 118.

ಆಡಳಿತ ಡಿಎಂಕೆ ಪಕ್ಷಕ್ಕೆ ಭಾರೀ ಹಿನ್ನಡೆ ಆಗಿದೆ. ಡಿಎಂಕೆ ಭದ್ರಕೋಟೆ ಎಂದು ಪರಿಗಣಿಸಲಾದ ಉದಯನಿಧಿ ಸ್ಟಾಲಿನ್‌ ಪ್ರತಿನಿಧಿಸಿರುವ ಚೆಪಾಕ್-ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರ ಹಾಗೂ ಎಂ.ಕೆ ಸ್ಟಾಲಿನ್‌ ಪ್ರತಿನಿಧಿಸಿರುವ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಮುನ್ನಡೆ ಕಾಯ್ದುಕೊಂಡಿದೆ. ಅಪ್ಪ-ಮಗ ಹಿನ್ನಡೆ ಅನುಭವಿಸುತ್ತಿದ್ದಾರೆ. ಆದ್ರೆ ತಿರುಚಿ ಪೂರ್ವ, ಪೆರಂಬೂರು ಎರಡೂ ಕ್ಷೇತ್ರಗಳಲ್ಲಿ ನಟ ವಿಜಯ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

More articles

Latest article

Most read