ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ನವೆಂಬರ್ 1ರಿಂದ ಕರವೇ ಅಭಿಯಾನ

ರಾಜ್ಯದ ಐಟಿ-ಬಿಟಿ ಕಂಪೆನಿಗಳಿಗೆ ಭೇಟಿ, ಉದ್ಯೋಗಾವಕಾಶಗಳ ಕುರಿತು ಮಾಹಿತಿ ಸಂಗ್ರಹ, ಕನ್ನಡಿಗರಿಗೆ ಉದ್ಯೋಗ ಖಾತರಿಪಡಿಸಲು ಆಗ್ರಹ

ಬೆಂಗಳೂರು, ಅ.29 : ಕರ್ನಾಟಕದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಐಟಿ-ಬಿಟಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಸಮರ್ಪಕ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಕನ್ನಡಿಗ ಐಟಿ ಉದ್ಯೋಗಿಗಳು ತಮ್ಮ ಉದ್ಯೋಗದ ಸಂಕಷ್ಟ, ನೇಮಕಾತಿಯಲ್ಲಿನ ತಾರತಮ್ಯ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಬಹಿರಂಗವಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭವನ್ನು ನಾವು ನಿರೀಕ್ಷಿಸಿದ್ದೆವು. ಅನಿಯಂತ್ರಿತ ವಲಸೆಯ ಪರಿಣಾಮವಾಗಿ ಕನ್ನಡಿಗರೇ ಈಗ ಅತಂತ್ರರಾಗುವ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರ ಉದ್ಯೋಗದ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್‌ ಅಭಿಯಾನವನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಿಂದ ಒಂದು ತಿಂಗಳ ಕಾಲ ರಾಜ್ಯದ ಐಟಿ-ಬಿಟಿ ಕಂಪೆನಿಗಳಿಗೆ ಭೇಟಿ ನೀಡಿ, ಕನ್ನಡಿಗರ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಸಂಗ್ರಹಿಸುವ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ನ್ಯಾಯಯುತ ಅವಕಾಶ ಖಾತರಿಪಡಿಸುವಂತೆ ಆಗ್ರಹಿಸುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಈ ಅಭಿಯಾನಕ್ಕಾಗಿ ಕರವೇಯ ಹಲವಾರು ತಂಡಗಳನ್ನು ರಚಿಸಲಾಗುವುದು. ಪ್ರತಿ ತಂಡದಲ್ಲಿ ಹತ್ತು ಮಂದಿ ಕರವೇ ಮುಖಂಡರು ಮತ್ತು ಕಾರ್ಯಕರ್ತರು ಇರಲಿದ್ದಾರೆ. ಈ ತಂಡಗಳು ಐಟಿ-ಬಿಟಿ ಕಂಪೆನಿಗಳ ಮುಖ್ಯಸ್ಥರು, ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜವಾಬ್ದಾರಿಯುತ ವ್ಯಕ್ತಿಗಳನ್ನು ಭೇಟಿ ಮಾಡಿ, ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ತಮ್ಮ ಆಗ್ರಹ ಪತ್ರವನ್ನು ಸಲ್ಲಿಸಲಿವೆ.

ಅಭಿಯಾನದ ಪ್ರಮುಖ ಉದ್ದೇಶಗಳು

ಈ ಅಭಿಯಾನದ ಮೂಲಕ ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯುವ ವಿಚಾರದಲ್ಲಿ ಕೇಳಿಬರುತ್ತಿರುವ ದೂರುಗಳ ಕುರಿತು ಸಮಗ್ರ ಪರಿಶೀಲನೆ, ಮಾಹಿತಿ ಸಂಗ್ರಹ ಮಾಡುವುದು ನಮ್ಮ ಪ್ರಮುಖ ಉದ್ದೇಶ.

ಕಂಪೆನಿಗಳಲ್ಲಿ ಕನ್ನಡಿಗರ ನೇಮಕಾತಿಯ ಸ್ಥಿತಿ ಏನು? ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವಾಗ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ? ಅರ್ಹತೆ ಇದ್ದರೂ ಕನ್ನಡಿಗರಿಗೆ ಅವಕಾಶಗಳು ನಿರಾಕರಿಸಲ್ಪಡುತ್ತಿರುವುದು ಯಾಕೆ? ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತಾರತಮ್ಯವಾಗುತ್ತಿರುವುದಕ್ಕೆ ಕಾರಣಗಳೇನು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕರವೇ ಪ್ರಯತ್ನಿಸಲಿದೆ.

ಕಂಪೆನಿಗಳಿಂದ ಲಭ್ಯವಾಗುವ ಮಾಹಿತಿಯನ್ನು ಪರಿಶೀಲಿಸುವುದರ ಜೊತೆಗೆ, ಕನ್ನಡಿಗ ಉದ್ಯೋಗಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಅಹವಾಲುಗಳನ್ನೂ ಸಂಗ್ರಹಿಸಲಾಗುವುದು. ಈ ಮೂಲಕ ಸಮಸ್ಯೆಯ ಸ್ವರೂಪ, ವ್ಯಾಪ್ತಿ ಹಾಗೂ ಪರಿಹಾರದ ಅಗತ್ಯವನ್ನು ವಾಸ್ತವಾಂಶಗಳ ಆಧಾರದ ಮೇಲೆ ಗುರುತಿಸಲು ಕ್ರಮ ಕೈಗೊಳ್ಳಲಾಗುವುದು.

ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಅವಕಾಶ ಸಿಗಲೇಬೇಕು

ಕರ್ನಾಟಕದ ನೆಲ, ನೀರು, ವಿದ್ಯುತ್‌, ರಸ್ತೆ, ಇಲ್ಲಿನ ಮೂಲಸೌಕರ್ಯ, ಸಾರ್ವಜನಿಕ ಸಂಪನ್ಮೂಲಗಳು ಮತ್ತು ಸರ್ಕಾರದ ಉದಾರ ನೀತಿಗಳ ಪ್ರಯೋಜನ ಪಡೆದು ಕಾರ್ಯನಿರ್ವಹಿಸುವ ಕಂಪೆನಿಗಳು ಈ ನಾಡಿನ ಜನರ ಉದ್ಯೋಗದ ಆಶೋತ್ತರಗಳಿಗೂ ಸ್ಪಂದಿಸಬೇಕು. ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಯಾವುದೇ ಅನ್ಯಾಯವನ್ನೂ ನಾವು ಸಹಿಸುವುದಿಲ್ಲ.

ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಪ್ರತಿಭಾವಂತ ವೃತ್ತಿಪರರು ಮತ್ತು ಐಟಿ-ಬಿಟಿ ಕ್ಷೇತ್ರದಲ್ಲಿ ದುಡಿಯುವ ಸಾಮರ್ಥ್ಯ ಹೊಂದಿರುವವರು. ಅವರ ಪ್ರತಿಭೆಗೆ ತಕ್ಕ ಉದ್ಯೋಗಾವಕಾಶ ದೊರೆಯಬೇಕು. ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.

ಅಭಿಯಾನದ ಸಂದರ್ಭದಲ್ಲಿ ಕಂಪೆನಿಗಳಲ್ಲಿ ಕನ್ನಡಿಗರ ನೇಮಕಾತಿ ಪ್ರಮಾಣ, ಸ್ಥಳೀಯ ಅಭ್ಯರ್ಥಿಗಳಿಗೆ ಲಭ್ಯವಿರುವ ಅವಕಾಶಗಳು, ನೇಮಕಾತಿಯ ಮಾನದಂಡಗಳು ಹಾಗೂ ಕನ್ನಡಿಗ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ಕರವೇ ಪ್ರಯತ್ನಿಸಲಿದೆ.

ಕಂಪೆನಿಗಳ ಆಡಳಿತ ಮಂಡಳಿಗಳು ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳು ಈ ಅಭಿಯಾನಕ್ಕೆ ಸಹಕರಿಸಬೇಕು. ಕನ್ನಡಿಗರ ಉದ್ಯೋಗದ ಕುರಿತ ಪ್ರಶ್ನೆಗಳಿಗೆ ಪಾರದರ್ಶಕವಾಗಿ ಸ್ಪಂದಿಸಬೇಕು. ಉದ್ಯೋಗಾವಕಾಶಗಳ ಬಗ್ಗೆ ಸ್ಪಷ್ಟತೆ ಮೂಡಿಸಬೇಕು. ಕನ್ನಡಿಗರಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಸಂಗ್ರಹಿಸಿದ ಮಾಹಿತಿ ಮತ್ತು ಅಹವಾಲುಗಳ ಆಧಾರದ ಮೇಲೆ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಕಂಪೆನಿಗಳು ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು.

ಕನ್ನಡಿಗರ ಉದ್ಯೋಗದ ಹಕ್ಕಿನ ರಕ್ಷಣೆಗೆ ಕರವೇ ಬದ್ಧ

ಕನ್ನಡಿಗರ ಭಾಷೆ, ನೆಲ, ಜಲ ಮತ್ತು ಉದ್ಯೋಗದ ಹಕ್ಕುಗಳ ರಕ್ಷಣೆ ಕರ್ನಾಟಕ ರಕ್ಷಣಾ ವೇದಿಕೆಯ ಮೂಲಭೂತ ಬದ್ಧತೆಯಾಗಿದೆ. ರಾಜ್ಯದ ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಲೇಬೇಕು. ಯಾವುದೇ ರೀತಿಯ ಸಬೂಬುಗಳನ್ನು ನಾವು ಒಪ್ಪುವುದಿಲ್ಲ. ಕನ್ನಡಿಗರಿಗೆ ಆಗುತ್ತಿರುವ ಎಲ್ಲ ಬಗೆಯ ಅನ್ಯಾಯಗಳ ವಿರುದ್ಧ ನಾವು ಹೋರಾಟ ರೂಪಿಸುತ್ತೇವೆ ಎಂದಿದ್ದಾರೆ.

ಕನ್ನಡಿಗರ ಉದ್ಯೋಗದ ಹಕ್ಕಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡಿಗರಿಗೆ ಉದ್ಯೋಗಾವಕಾಶ ದೊರೆಯುವವರೆಗೆ, ಉದ್ಯೋಗದಲ್ಲಿ ತಾರತಮ್ಯವಾಗುತ್ತಿದೆ ಎಂಬ ದೂರುಗಳು ನಿಲ್ಲುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದ್ದಾರೆ.

More articles

Latest article

Most read