ಸಾರಾ ಗೋವಿಂದು ಸಿಟ್ಟಿನ ಗುಟ್ಟು!

ರಾಜಣ್ಣನ ಪರಮ ಅಭಿಮಾನಿಯಾಗಿ ಸಾ ರಾ ಗೋವಿಂದ್‌ ಅವರಿಗೆ ಚೇತನ್‌ ಹೇಳಿಕೆಯಿಂದ ಬೇಸರವಾಗಿರೋದನ್ನು ತಳ್ಳಿಹಾಕಲಾಗದು. ಮೊದಲೇ ಹೇಳಿದಂತೆ ಎಂಬತ್ತು-ತೊಂಬತ್ತರ ದಶಕದ ಸಾರಾ ಗೋವಿಂದು ಆಗಿದ್ದಿದ್ದರೆ, ಅವರ ಹೀಗೆಯೇ ವರ್ತಿಸುತ್ತಿದ್ದರು. ಆದರೆ, ಇತ್ತೀಚಿನ ಇಂತದ್ದೇ ಹಲವು ಪ್ರಕರಣಗಳಲ್ಲಿ ಬಹಳ ಸೌಮ್ಯವಾಗಿ, ಸಾವಧಾನದಿಂದ, ಸಂಧಾನಗಳ ಮಾತಿನ ಮೂಲಕ ಪ್ರತಿಕ್ರಿಯಿಸಿದ್ದ ಸಾರಾ ಗೋವಿಂದು ಅವರು ಚೇತನ್‌ ವಿಚಾರದಲ್ಲಿ ಮಾತ್ರ, ಇತ್ತೀಚೆಗಷ್ಟೆ ತಮಗಾದ ಸರ್ಜರಿಯ ಪರಿಣಾಮವನ್ನೂ ಲೆಕ್ಕಿಸದೆ ವರ್ತಿಸಿದ್ದು ಸಹಜವಾದುದಂತೂ ಆಗಿರಲಿಲ್ಲಮಾಚಯ್ಯ ಎಂ ಹಿಪ್ಪರಿಗಿ.

ಅಕಸ್ಮಾತ್‌ ತೊಂಬತ್ತರ ದಶಕದ ಆಸುಪಾಸಿನಲ್ಲಿ ಸಾರಾ ಗೋವಿಂದು ಹೀಗೆ ವರ್ತಿಸಿದ್ದರೆ, ಅದನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯವಿರಲಿಲ್ಲ. ಆಗ ಸಾರಾ ಗೋವಿಂದು ಇದ್ದುದೇ ಹಾಗೆ. ಬಿಸಿಬಿಸಿ ರಕ್ತದ ಆಕ್ರೋಶದ ಅಧ್ಯಕ್ಷನಾಗಿ ರಾಜಣ್ಣನ ವಿಚಾರಕ್ಕೆ ಸಂಬಂಧಿಸಿ ಯಾವುದೇ ಇಂಥಾ ವಿಚಾರ ನಡೆದರೂ ಅವರು ಹೀಗೆಯೇ ಪ್ರತಿಕ್ರಿಯಿಸುತ್ತಿದ್ದುದುಂಟು. ಒಮ್ಮೆ ಲಂಕೇಶ್‌ ಪತ್ರಿಕೆ ಕಚೇರಿಗೆ ನುಗ್ಗಿ ರಾದ್ದಾಂತ ಮಾಡಿಕೊಂಡು, ಆಮೇಲೆ ಸ್ವತಃ ಅಣ್ಣನವರೇ ಲಂಕೇಶ್‌ ಮೇಷ್ಟ್ರ ಬಳಿ ಸಾರಾ ಗೋವಿಂದಣ್ಣನ ಪರ ಕ್ಷಮೆ ಕೇಳಿದ್ದರಂತೆ. ಜಿ.ಮುರಳೀಧರ್ ಅವರ ನಂತರ ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಅವರು ಆ ಸಂಘಕ್ಕೆ ಹೊಸ ಬಿರುಸು ತಂದುಕೊಟ್ಟರು. ಆಗ ಸಾರಾ ಗೋವಿಂದರ ವಯಸ್ಸು ಮತ್ತು ಹುಮ್ಮಸ್ಸು ಹಾಗೆ ಇತ್ತು.

ಆದರೆ ಯಾವಾಗ ಅವರು 2015ರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದರೋ ಅಲ್ಲಿಂದಾಚೆಗೆ, ಅವರ ವ್ಯಕ್ತಿತ್ವ ಫೋರ್ಸು ತುಂಬಾ ಬದಲಾಗುತ್ತಾ ಬಂತು. ಯಜಮಾನಿಕೆಯ ಹೊಣೆ ಅವರ ಹೆಗಲೇರಿದ್ದು ಅದಕ್ಕೆ ಕಾರಣ. ಕನ್ನಡ ಚಲನಚಿತ್ರರಂಗವನ್ನು ಕಾಡುತ್ತಿದ್ದ ಡಬ್ಬಿಂಗ್‌, ಪರಭಾಷಾ ಸಿನಿಮಾಗಳ ಹಾವಳಿ, ಸಿನಿಮಾರಂಗದವರ ಸಣ್ಣಪುಟ್ಟ ಈಗೋ ಕ್ಲಾಶುಗಳನ್ನು ಬಗೆಹರಿಸುತ್ತಾ ಅವರೊಳಗಿದ್ದ ರೆಬೆಲ್‌ ವ್ಯಕ್ತಿತ್ವ, ತಣ್ಣಗಾಗುತ್ತಾ ಬಂತು. ಎಲ್ಲದಕ್ಕೂ ಆಕ್ರೋಶದಿಂದಲೇ ಪ್ರತಿಕ್ರಿಯಿಸುತ್ತಿದ್ದ ಅವರು, ಸಮಾಧಾನದ-ಸಂಧಾನದ, ಕೆಲವೊಮ್ಮೆ ನಿರ್ಲಕ್ಷ್ಯದ ದಾರಿಗಳನ್ನೂ ತುಳಿಯುತ್ತಾ ಬಂದರು. ಬಹುಶಃ ವಯಸ್ಸು ಕೂಡಾ ಅವರ ಬದಲಾವಣೆಯಲ್ಲಿ ದೊಡ್ಡ ಕಾಣಿಕೆ ಕೊಟ್ಟಿರಬಹುದು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕೈಕೊಟ್ಟ ನಂತರ ತುಂಬಾನೇ ತಣ್ಣಗಾಗಿದ್ದರು.

ಚೇತನ್‌, ಸಾ ರಾ ಗೋವಿಂದು

ಹಾಗಾಗಿ ಮೊನ್ನೆ, ನಟ ಚೇತನ್‌ ಮನೆ ಮುಂದೆ ಅವರು ಆ ಪರಿ ಅಬ್ಬರಿಸಿ, ಬೊಬ್ಬಿರಿದು, ವಯಸ್ಸನ್ನೂ ಮೀರಿ ವರ್ತಿಸಿದ್ದು ಸಹಜವಾಗಿಯಂತೂ ಕಾಣಿಸುವುದಿಲ್ಲ. ಹಳೇ ಸಾರಾ ರೂಪದಿಂದ ಹೊಸ ಸಾರಾ ರೂಪಕ್ಕೆ ಬದಲಾಗಿ ತುಂಬಾ ಕಾಲವಾಗಿತ್ತು. ಆದರೂ, ಅವತ್ತು ಯಾಕೆ ಹಳೆಯ ಸಾರಾ ಥರದಲ್ಲೆ ರೊಚ್ಚಿಗೆದ್ದು, ಡಾ.ರಾಜಣ್ಣನ ಸಂಘದ ಘನತೆಗೆ ತಕ್ಕುದಲ್ಲದ ಭಾಷೆಗಳನ್ನೆಲ್ಲ ಬಳಸಿದರು?

ಇದಕ್ಕೆ ಉತ್ತರ, 2018ರಲ್ಲಿ ನಟ ಚೇತನ್‌ ಮುನ್ನಡೆಸಿದ್ದ ಮೀಟೂ ಅಭಿಯಾನದಲ್ಲಡಗಿದೆ!

ಹೌದು, ಸಾರಾ ಗೋವಿಂದಣ್ಣ ಅವತ್ತು ತಮ್ಮ ಇಳಿವಯಸ್ಸಿನಲ್ಲಿ ಆ ಪರಿ ರೊಚ್ಚಿಗೆದ್ದಿದ್ದರ ಹಿಂದೆ ಒಂದು ಪರ್ಸನಲ್‌ ಸೇಡು ಕಾರಣವಿದೆ.

2015 ರಿಂದ 2018ರವರೆಗೆ ಸಾರಾ ಗೋವಿಂದು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದರು. ಇನ್ನೇನು ಅವರ ಅಧ್ಯಕ್ಷಾವಧಿ ಮುಗಿಯಬೇಕೆನ್ನುವ ಸಮಯಕ್ಕೆ ಸರಿಯಾಗಿ ಕನ್ನಡ ಚಿತ್ರರಂಗದಲ್ಲೊಂದು ಭೀಕರ ಸುದ್ದಿ ಹೊರಬಿತ್ತು. ದೇಶಾದ್ಯಂತ ಚರ್ಚೆಯಲ್ಲಿದ್ದ ಲೈಂಗಿಕ ಶೋಷಣೆಯ ಸಂತ್ರಸ್ತೆಯರ #MeToo ಅಭಿಯಾನದ ಭಾಗವಾಗಿ ನಟಿ ಶ್ರುತಿ ಹರಿಹರನ್‌, ನಟ ಅರ್ಜುನ್‌ ಸರ್ಜಾರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಟ ಚೇತನ್‌ ‘Fire’ (Female Interlocutors for Rights and Equality) ಎಂಬ ಸಂಘಟನೆ ಹುಟ್ಟುಹಾಕಿ ಮೀಟೂ ಸಂತ್ರಸ್ತೆಯರ ಪರ ನಿಂತರು. ಅದು ದೊಡ್ಡ ಚರ್ಚೆಯಾಗಿ ಕನ್ನಡ ಚಿತ್ರರಂಗವನ್ನೆ ಇಬ್ಭಾಗ ಮಾಡಿತ್ತು. ಅದನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ಮುಂದಾದ ಸಾರಾ ಗೋವಿಂದು ಅವರು ಸಂಧಾನಕ್ಕೆ ಮುಂದಾದರು.

ಸಂಧಾನವೆಂದರೆ, ಸಾಮಾನ್ಯವಾಗಿ ಸಂತ್ರಸ್ತರನ್ನು ಮನವೊಲಿಸಿ ಶೋಷಕರ ಘನತೆ ಕಾಪಾಡುವುದೇ ಆಗಿರುತ್ತದಲ್ಲವೇ? ಅವತ್ತು ಸಾರಾ ಗೋವಿಂದು ಸಂಧಾನ ಕೂಡಾ ಅದೇ ರೀತಿ ಸಾಗಿತ್ತು. ಆಗ ನಟ ಚೇತನ್‌, “ವಾಣಿಜ್ಯ ಮಂಡಳಿಯು ಸಂತ್ರಸ್ತೆಯರ ಪರ ನಿಲ್ಲುವುದರ ಬದಲು, ಪುರುಷಾಧಿಪತ್ಯದ ವಕ್ತಾರನಂತೆ ವರ್ತಿಸುತ್ತಿದೆ. ತಪ್ಪಿತಸ್ಥರನ್ನು ರಕ್ಷಿಸಲು ಯತ್ನಿಸುತ್ತಿದೆ” ಅಂತೆಲ್ಲಾ ಸಾರಾ ಗೋವಿಂದು ಅವರ ಮೇಲೆ ಆರೋಪ ಮಾಡಿದ್ದರು. ಕೊನೆಗೆ ಸಂಧಾನ ಮುರಿದುಬಿದ್ದು, ಕೇಸು ಕೋರ್ಟು ಮೆಟ್ಟಿಲೇರಿತು.

ಆದರೆ ಆ ವಾಗ್ವಾದದಲ್ಲಿ ಸಾರಾ ಗೋವಿಂದು ಅವರು ನಟ ಚೇತನ್‌ ಬಗ್ಗೆ ಮನಸು ಕಹಿ ಮಾಡಿಕೊಂಡರು. ತನ್ನ ಮಧ್ಯಸ್ಥಿಕೆಗೆ ಬೆಲೆ ಕೊಡದೆ, ತನ್ನ ಮೇಲೆಯೇ ಆರೋಪಗೈದು, ಸಂಧಾನ ಮುರಿದುಹಾಕಿ ಅವಮಾನಿಸಿದ ಚೇತನ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆತ ಹೊರಗಿನಿಂದ ಬಂದವನು, ಕನ್ನಡ ಸಿನಿಮಾ ರಂಗವನ್ನು ಒಡೆಯಲು ಯತ್ನಿಸುತ್ತಿದ್ದಾನೆ ಅಂತೆಲ್ಲಾ ತಮ್ಮ ಸಿಟ್ಟು ಹೊರಹಾಕಿದ್ದರು. ಆ ಸೇಡೇ ಮೊನ್ನೆಯ ಆರ್ಭಟದ ಅಸಲಿ ಕಾರಣ ಎಂಬ ಸುದ್ದಿ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

(https://www.youtube.com/watch?v=yZ6flWHWt1Q)

ಅವತ್ತಿನಿಂದಲೂ ಚೇತನ್‌ಗೆ ತಕ್ಕ ತಿರುಗೇಟು ನೀಡಲು ಅವಕಾಶಕ್ಕಾಗಿ ಕಾಯುತ್ತಲೇ ಇದ್ದಂತಿತ್ತು ಅವರ ಮೊನ್ನೆಯ ವರ್ತನೆ. ಅಸಂಬದ್ಧ, ಅಪ್ರಾಯೋಗಿಕ, ಅರೆಬರೆ ತಿಳಿವಳಿಕೆಯ ಹೇಳಿಕೆ ಕೊಡುವುದನ್ನೇ ತನ್ನ `ಇಂಟಲೆಕ್ಚುಯೆಲಿಸಂ’ ಎಂದು ಭ್ರಮಿಸಿಕೊಂಡಿರುವ ನಟ ಚೇತನ್‌ ಅಂತದ್ದೊಂದು ಅವಕಾಶವನ್ನು ಸೃಷ್ಟಿಸಿಕೊಟ್ಟರು. ರಾಜಣ್ಣನವರ ಸಮಾಧಿ ಜಾಗದ ಕುರಿತು ಅನಗತ್ಯ ಹೇಳಿಕೆ ಕೊಟ್ಟರು. ಆ ರಾದ್ಧಾಂತ ಇಲ್ಲಿಗೆ ಬಂದು ತಲುಪಿದೆ

ಮೊದಲೇ ಮೀಟೂ ಪ್ರಕರಣದಿಂದಾಗಿ ಚೇತನ್‌ ವಿರುದ್ಧ ಮನಸ್ಸು ಕಹಿ ಮಾಡಿಕೊಂಡಿದ್ದ ಸಾರಾ ಗೋವಿಂದ್ ಅವರು, ಸಿಕ್ಕಿದ್ದೇ ಛಾನ್ಸ್‌ ಅಂತ ತಮ್ಮ ವಯಸ್ಸು ಮತ್ತು ರಾಜ್‌ ಅಭಿಮಾನಿ ಸಂಘದ ಅಧ್ಯಕ್ಷ ಪದವಿ, ಎರಡೂ ದಂಗಾಗುವಂತೆ ವರ್ತಿಸಿದ್ದಾರೆ ಎನ್ನಲಾಗುತ್ತಿದೆ.

ನೋ ಡೌಟ್‌, ರಾಜಣ್ಣನ ಪರಮ ಅಭಿಮಾನಿಯಾಗಿ ಸಾ ರಾ ಗೋವಿಂದ್‌ ಅವರಿಗೆ ಚೇತನ್‌ ಹೇಳಿಕೆಯಿಂದ ಬೇಸರವಾಗಿರೋದನ್ನು ತಳ್ಳಿಹಾಕಲಾಗದು. ಮೊದಲೇ ಹೇಳಿದಂತೆ ಎಂಬತ್ತು-ತೊಂಬತ್ತರ ದಶಕದ ಸಾರಾ ಗೋವಿಂದು ಆಗಿದ್ದಿದ್ದರೆ, ಅವರ ಹೀಗೆಯೇ ವರ್ತಿಸುತ್ತಿದ್ದರು. ಆದರೆ, ಇತ್ತೀಚಿನ ಇಂತದ್ದೇ ಹಲವು ಪ್ರಕರಣಗಳಲ್ಲಿ ಬಹಳ ಸೌಮ್ಯವಾಗಿ, ಸಾವಧಾನದಿಂದ, ಸಂಧಾನಗಳ ಮಾತಿನ ಮೂಲಕ ಪ್ರತಿಕ್ರಿಯಿಸಿದ್ದ ಸಾರಾ ಗೋವಿಂದು ಅವರು ಚೇತನ್‌ ವಿಚಾರದಲ್ಲಿ ಮಾತ್ರ, ಇತ್ತೀಚೆಗಷ್ಟೆ ತಮಗಾದ ಸರ್ಜರಿಯ ಪರಿಣಾಮವನ್ನೂ ಲೆಕ್ಕಿಸದೆ ವರ್ತಿಸಿದ್ದು ಸಹಜವಾದುದಂತೂ ಆಗಿರಲಿಲ್ಲ.

ಮಾಚಯ್ಯ ಎಂ ಹಿಪ್ಪರಿಗಿ

ಇದನ್ನೂ ಓದಿ- ಚೇತನ್ ಅನಿಸಿಕೆ ಮತ್ತು ಡಾ.ರಾಜ್ ಅಭಿಮಾನಿಗಳ ಆಕ್ರೋಶ

More articles

Latest article

Most read