ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ ಸಿಎಸ್ ಭೇಟಿ, ಮತದಾರರ ಪಟ್ಟಿ, ಎಸ್‌ಐಆರ್‌ ಗಣತಿ ಕುರಿತು ಚರ್ಚೆ

ಬೆಂಗಳೂರು :  ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು,  ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ಕರ್ನಾಟಕದ ಎಸ್‌ಐಆರ್‌  ಕುರಿತು ವಿವರವಾದ ಚರ್ಚೆ ನಡೆಸಿದರು.

ಮತಗಳ ಎಣಿಕೆ ಹಾಗೂ ಗಣತಿಗೆ ಸಂಬಂಧಿಸಿದ ಸಾರ್ವಜನಿಕರ ಎಲ್ಲಾ ಅನುಮಾನಗಳನ್ನು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಮತದಾರರ ಅಂಕಿ-ಅಂಶಗಳು ಮತ್ತು ಮ್ಯಾಪಿಂಗ್, ಇತ್ಯಾದಿ ಬಗ್ಗೆ ಮಾಹಿತಿಯನ್ನು ಒದಗಿಸಿರುತ್ತಾರೆ.  ರಾಜ್ಯದಲ್ಲಿ 2025ರ ಒಟ್ಟು ಮತದಾರರ ಸಂಖ್ಯೆ 5,54,32,314 ಆಗಿದೆ. 2026 ನೇ ಜೂನ್ 29 ರ ವೇಳಗೆ ಒಟ್ಟು 5,06,77,343 ಮತದಾರರನ್ನು ಯಶಸ್ವಿಯಾಗಿ ಮ್ಯಾಪ್ ಮಾಡಲಾಗಿದೆ.

ಚುನಾವಣಾ ಆಯೋಗವು ಈಗಾಗಲೇ  ರಾಜ್ಯದಲ್ಲಿ ಶೇ. 91.42 ಮತದಾರರನ್ನು ಮ್ಯಾಪಿಂಗ್ ಮಾಡಿದ್ದು, ಈ ಪ್ರಕ್ರಿಯೆಯು ಜುಲೈ 27 ರವರೆಗೆ ಮುಂದುವರೆಯುತ್ತದೆ. ಎಸ್‌ಐಆರ್‌  ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರನ್ನು ಕೈಬಿಡುವುದಿಲ್ಲ ಮತ್ತು ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ನೀಡುವುದಿಲ್ಲ ಎಂಬ ಭರವಸೆ ಸಿಕ್ಕಿದೆ. 

ಬಿಎಲ್‍ಓ ನಿಂದ ಒದಗಿಸಲಾಗುವ ಗಣತಿಯ ನಮೂನೆಯು ಕನ್ನಡ ಭಾಷೆಯಲ್ಲಿ ಮಾತ್ರ ಇರುತ್ತದೆ ಮತ್ತು ಅದನ್ನು ರಾಜ್ಯದ ಅಧಿಕೃತ ಭಾಷೆಯಾದ ಕನ್ನಡದಲ್ಲಿಯೇ ಭರ್ತಿ ಮಾಡಬೇಕು. ಗಣತಿ ನಮೂನೆಯನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಡೆದ ಮಾರ್ಗದರ್ಶನ ವೀಡಿಯೊವನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧಿಕೃತ ವೆಬ್‍ಸೈಟ್ www.kmc.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ.

ಹೊಸ ನೋಂದಣಿ: 01.10.2026 ಕ್ಕೆ 18 ವರ್ಷ ತುಂಬುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ. ಕುಟುಂಬದ ದೃಢೀಕರಣ: ಎನ್‍ಆರ್‍ಐ ಗಳು ಸೇರಿದಂತೆ ಕುಟುಂಬದ ಸದಸ್ಯರು ಗೈರುಹಾಜರಾಗಿದ್ದರೆ, ಯಾವುದೇ ವಯಸ್ಕ ಕುಟುಂಬದ ಸದಸ್ಯರು ಗಣತಿಯ ನಮೂನೆಯನ್ನು ದೃಢೀಕರಿಸಬಹುದು.

ಭಾವಚಿತ್ರ  ಗಣತಿಯ ನಮೂನೆಯಲ್ಲಿ ಅಂಟಿಸಲು ಎರಡು ಬಣ್ಣದ   ಫೋಟೋಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸುವ ಅಥವಾ ನೀಡುವ ಅಗತ್ಯವಿಲ್ಲ. ಆದಾಗ್ಯೂ, ಬಿಎಲ್‌ಒ ಪರಿಶೀಲನೆಗಾಗಿ ಕೇಳಿದಲ್ಲಿ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಬಹುದು. ಗಣತಿಯ ಸಮಯದಲ್ಲಿ ಬಿಎಲ್‍ಒ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡುವುದಿಲ್ಲ.

ಯಾವುದೇ ತಿದ್ದುಪಡಿಯ ಅಗತ್ಯವಿದ್ದರೆ, ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ‘ನಮೂನೆ-8′ ಅನ್ನು ಸಲ್ಲಿಸಬೇಕು ಅಥವಾ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ ಆನ್‍ಲೈನ್‍ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು.

ಯಾವುದೇ ಹೆಚ್ಚಿನ ಸ್ಪಷ್ಟೀಕರಣಗಳಿಗಾಗಿ ಸಾರ್ವಜನಿಕರು ಚುನಾವಣಾ ಅಧಿಕಾರಿ ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

More articles

Latest article

Most read