ಬೆಂಗಳೂರು ಏ.17 : ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಮತ್ತು ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಮೈದಾನದ ಹೊರಗೂ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಕೊಹ್ಲಿ ಅವರು ನೀಡಿದ ಒಂದು ‘ಲೈಕ್’ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಸಿದ್ಧ ಫೋಟೋಗ್ರಾಫರ್ ಅದ್ವೈತ್ ವೈದ್ಯ ಅವರು ಹಂಚಿಕೊಂಡಿದ್ದ ಜರ್ಮನ್ ಮೂಲದ ಇನ್ ಫ್ಲುಯೆನ್ಸರ್ ಲಿಜ್ಲಾಜ್ (LizLaz) ಅವರ ಬೋಲ್ಡ್ ಫೋಟೋವೊಂದಕ್ಕೆ ಕೊಹ್ಲಿ ಲೈಕ್ ಒತ್ತಿರುವುದು ಈಗ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.
ಯಾರು ಈ ಲಿಜ್ಲಾಜ್?
ಕೊಹ್ಲಿ ಲೈಕ್ ಮಾಡಿದ ಬೆನ್ನಲ್ಲೇ ಗೂಗಲ್ನಲ್ಲಿ ಈಕೆಯ ಹೆಸರಿಗಾಗಿ ಹುಡುಕಾಟ ನಡೆದಿದೆ. ಜರ್ಮನಿ ಮೂಲದ ಲಿಜ್ಲಾಜ್ ಕೇವಲ ಇನ್ ಫ್ಲುಯೆನ್ಸರ್ ಮಾತ್ರವಲ್ಲ, ಹಲವು ಪ್ರತಿಭೆಗಳ ಸಂಗಮ. ಇವರ ಶಿಕ್ಷಣ ಮನೋವಿಜ್ಞಾನದಲ್ಲಿ (Psychology) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮತ್ತು ಇವರು ವೃತ್ತಿ ಪ್ರಸಿದ್ಧ ವ್ಲಾಗರ್ ಮತ್ತು ಗಾಯಕಿಯಾಗಿರುವ ಇವರು ಅತ್ಯುತ್ತಮ ಆಹಾರ ಪ್ರೇಮಿಯೂ ಹೌದು. ಇನ್ಸ್ಟಾಗ್ರಾಮ್ನಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಲಿಜ್, ಈಗಾಗಲೇ ಅನೇಕ ಭಾರತೀಯ ಕಲಾವಿದರು ಮತ್ತು ಫೋಟೋಗ್ರಾಫರ್ಗಳ ಜೊತೆ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ.
ಕೊಹ್ಲಿ ಅವರ ಈ ನಡೆಯನ್ನು ನೋಡಿ ನೆಟ್ಟಿಗರು ತಮಾಷೆಯ ಮೀಮ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ನಟಿ ಅವನೀತ್ ಕೌರ್ ಅವರ ಫೋಟೋಗೆ ಕೊಹ್ಲಿ ಲೈಕ್ ಮಾಡಿದ್ದಾಗ, “ಅದು ಅಲ್ಗಾರಿದಮ್ ತಪ್ಪಿನಿಂದ ನಡೆದಿದೆ” ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದರು. ಈಗ ಮತ್ತೆ ಅಂತಹದ್ದೇ ಘಟನೆ ನಡೆದಿದ್ದು, “ಇದು ಕೂಡ ಅಲ್ಗಾರಿದಮ್ ಚಮತ್ಕಾರವೇ?” ಎಂದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಸುದ್ದಿಗಳ ನಡುವೆಯೂ ಕೊಹ್ಲಿ ಮೈದಾನದಲ್ಲಿ ರನ್ ಮಳೆ ಹರಿಸುತ್ತಿದ್ದಾರೆ. ಐಪಿಎಲ್ 2026ರಲ್ಲಿ ಆರ್ಸಿಬಿ ಪರ ಅದ್ಭುತ ಫಾರ್ಮ್ನಲ್ಲಿರುವ ಅವರು ಆಡಿರುವ 5 ಪಂದ್ಯಗಳಿಂದ 228 ರನ್ ಗಳಿಸಿ ಟೂರ್ನಿಯ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಹಾಲಿ ಚಾಂಪಿಯನ್ ಆರ್ಸಿಬಿ ತಂಡವು 5 ಪಂದ್ಯಗಳಲ್ಲಿ 4 ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಒಟ್ಟಾರೆಯಾಗಿ, ಬ್ಯಾಟಿಂಗ್ ಮೂಲಕ ಮೈದಾನದಲ್ಲಿ ಮತ್ತು ಇನ್ಸ್ಟಾಗ್ರಾಮ್ ಲೈಕ್ ಮೂಲಕ ಮೈದಾನದ ಹೊರಗೆ ಕೊಹ್ಲಿ ಈಗ ಎಲ್ಲೆಡೆ ಟ್ರೆಂಡಿಂಗ್ನಲ್ಲಿದ್ದಾರೆ.

