ಶಿಕ್ಷಣದಲ್ಲಿ ಭಗವದ್ಗೀತೆ; ಹಿಂದುತ್ವವಾದಿಗಳ ಹೇರಿಕೆ

ಹಿಂದುತ್ವವಾದಿಗಳ ಧಾರ್ಮಿಕ ಹೇರಿಕೆಯ ಹುನ್ನಾರದ ಭಾಗವಾಗಿ ಭಗವದ್ಗೀತೆಯನ್ನು ಶಿಕ್ಷಣದ ವ್ಯವಸ್ಥೆಯಲ್ಲಿ ಅಳವಡಿಸಲು ಒತ್ತಾಯ ಮಾಡಲಾಗುತ್ತಿದೆ. ಇಂದಿನ ಹಾಗೂ ಮುಂದಿನ ತಲೆಮಾರಿನ ಮಕ್ಕಳಲ್ಲಿ ಆಧುನಿಕ ವೈಜ್ಞಾನಿಕ ವಿಚಾರಗಳನ್ನು ಬಿತ್ತುವ ಬದಲಾಗಿ ಸನಾತನ ಧಾರ್ಮಿಕ  ನಂಬಿಕೆಯನ್ನು ಹೇರುವ ಯಾವುದೇ ರೀತಿಯ ಪ್ರಯತ್ನಗಳನ್ನು ವಿರೋಧಿಸಬೇಕಿದೆ. ನೈತಿಕ ಶಿಕ್ಷಣದ ಹೆಸರಲ್ಲಿ ಭಗವದ್ಗೀತೆಯ ಕಲಿಕೆಯ ಪ್ರಸ್ತಾವನೆಯನ್ನು ಸಾರ್ವತ್ರಿಕವಾಗಿ ತಿರಸ್ಕರಿಸಬೇಕಿದೆ ಹಾಗೂ ಪ್ರಜ್ಞಾವಂತರು ತಮ್ಮ ಬರವಣಿಗೆ, ಭಾಷಣ, ನಾಟಕ ಮುಂತಾದ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಬೇಕಿದೆಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

‘ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕು” ಎಂಬುದು ಹಿಂದುತ್ವವಾದಿಗಳ ಬಹುದಿನದ ಬೇಡಿಕೆ. ಆದರೆ “ನಮ್ಮ ಸಂವಿಧಾನ ಧಾರ್ಮಿಕ ನಿರಪೇಕ್ಷತೆ ( Secularism) ಯನ್ನು ಅಳವಡಿಸಿಕೊಂಡಿರುವುದರಿಂದ ಯಾವುದೇ  ಒಂದು  ಧಾರ್ಮಿಕ ಗ್ರಂಥದ ಕಲಿಕೆ ಸಮರ್ಥನೀಯವಲ್ಲ, ಆದ್ದರಿಂದ ಶಿಕ್ಷಣದಲ್ಲಿ ಭಗವದ್ಗೀತೆಯ ಕುರಿತು ಪಾಠಗಳ ಸೇರ್ಪಡಿಕೆ ಬೇಡ” ಎಂದು ಅರವತ್ತಕ್ಕೂ ಹೆಚ್ಚು ಪ್ರಜ್ಞಾವಂತ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಮನವಿ ಪತ್ರಕ್ಕೆ ಸಹಿ ಮಾಡಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸರಕಾರ 2020 ರಲ್ಲಿ ರೂಪಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ’ (NEP) ಯಲ್ಲಿ ಮೌಲ್ಯಾಧಾರಿತ ನೈತಿಕ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ಗುಜರಾತ್ ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಈಗಾಗಲೇ ಭಗವದ್ಗೀತೆಯನ್ನು ಮೌಲ್ಯಾಧಾರಿತ ಶಿಕ್ಷಣದ ಭಾಗವಾಗಿ ಅಳವಡಿಸಲಾಗಿದೆ. ರಾಜ್ಯ ಸರಕಾರಗಳು ಶಿಕ್ಷಣದ ಪಠ್ಯಕ್ರಮಗಳನ್ನು ನಿರ್ಧರಿಸುವುದರಿಂದ ಕರ್ನಾಟಕ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಭಗವದ್ಗೀತೆಯ ಅಳವಡಿಕೆ ಇನ್ನೂ ಪ್ರಸ್ತಾಪದ ಹಂತದಲ್ಲಿದೆ.

2022 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ ಇಂತಹುದೊಂದು ಪ್ರಯತ್ನ ನಡೆದಿತ್ತು. ಆಗ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶರವರು ‘ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ( ಮಾರಲ್ ಸೈನ್ಸ್) ಭಾಗವಾಗಿ ಸೇರಿಸುವ ಪ್ರಸ್ತಾಪವನ್ನು ಮಾಡಿದ್ದರು. ಗುಜರಾತ್ ಮಾದರಿಯಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಯೋಜನೆ ಸಿದ್ಧಗೊಳಿಸಿದ್ದರು. ಆಗಲೂ ಆ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿತ್ತು.  ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಲಾಗಿತ್ತು.

ಆದರೆ 2023 ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬಂದಿದ್ದರಿಂದಾಗಿ ಆ ಪ್ರಸ್ತಾಪ ನೆನಗುದಿಗೆ ಬಿದ್ದಿತು. ಆದರೆ ಇತ್ತೀಚೆಗೆ 2025ರ ಡಿಸೆಂಬರಿನಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಶಿಕ್ಷಣ ಸಚಿವರಾದ ‘ಧರ್ಮೇಂದ್ರ ಪ್ರಧಾನ್’ ರವರಿಗೆ ಪತ್ರ ಬರೆದು ‘ಶಾಲೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸುವಂತೆ ಮನವಿ ಮಾಡಿದರು. ಇದು ಚರ್ಚೆಯನ್ನು ಹುಟ್ಟು ಹಾಕಿತು. ಇದರಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ವಾದಗಳು ಶುರುವಾದವು. ನಾಡಿನ ಹಲವಾರು ಪ್ರಜ್ಞಾವಂತರು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಸಿಎಂ ಸಿದ್ದರಾಮಯ್ಯನವರೂ ಭಗವದ್ಗೀತೆಯ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವವಾದಿ ಟ್ರೋಲಿಗರು ಪತ್ರ ಬರೆದು ಆಗ್ರಹಿಸಿದವರ ವಿರುದ್ಧ ತಮ್ಮ ಅನಾಗರಿಕ ಭಾಷೆಯನ್ನು ಬಳಸತೊಡಗಿದರು.

ಇಷ್ಟಕ್ಕೂ ಶಿಕ್ಷಣದಲ್ಲಿ ಭಗವದ್ಗೀತೆ ಯಾಕೆ ಬೇಕು? ಎಂದು ಪ್ರತಿಪಾದಿಸುವ ಹಿಂದುತ್ವವಾದಿಗಳು ‘ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಧೈರ್ಯ ಮತ್ತು ಜೀವನ ಕೌಶಲ ಬೆಳೆಸುವ ಉದ್ದೇಶಕ್ಕಾಗಿ ಭಗವದ್ಗೀತೆ ಪಾಠಗಳು ಬೇಕು” ಎಂದು ಸಮರ್ಥಿಸಿಕೊಳ್ಳುತ್ತಾರೆ. ಜೀವನದ ಅರ್ಥ, ನೈತಿಕತೆ, ಮಾನಸಿಕ ಸಮತೋಲನ, ಕರ್ತವ್ಯ ಬೋಧನೆ, ಒತ್ತಡ ನಿರ್ವಹಣೆ’ ಯಂತಹ ಅಂಶಗಳನ್ನು ಭಗವದ್ಗೀತೆ ಬೋಧಿಸುವುದರಿಂದ ಅವುಗಳನ್ನು ನೈತಿಕ ಶಿಕ್ಷಣದ ರೂಪದಲ್ಲಿ ಪಠ್ಯಕ್ರಮವಾಗಿಸಬೇಕು ಎಂದು ವಾದಿಸುತ್ತಾರೆ. ಅದಕ್ಕೆ ಪೂರಕವಾಗಿ ಭಗವದ್ಗೀತೆಯ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗದ ಕೆಲವು ಶ್ಲೋಕಗಳನ್ನು ಪ್ರಸ್ತಾಪಿಸುತ್ತಾರೆ. ‘ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಯಲ್ಲಿ ಭಗವದ್ಗೀತೆ ಹಾಗೂ ಭಾರತೀಯ ಜ್ಞಾನ ವ್ಯವಸ್ಥೆಗಳಾದ ವೇದಗಳು, ಉಪನಿಷತ್ತುಗಳನ್ನು ಪಠ್ಯಗಳಲ್ಲಿ ಸೇರಿಸುವುದನ್ನು ಉತ್ತೇಜಿಸಲಾಗಿದೆ’ ಎಂದೂ ಉಲ್ಲೇಖಿಸುತ್ತಾರೆ.

ಆದರೆ ಈ ಎಲ್ಲಾ ವೈದಿಕಶಾಹಿ ಪರ ವಾದಗಳಿಗೆ ನಮ್ಮ ಸಂವಿಧಾನದಲ್ಲಿಯೇ ಅವಕಾಶ ಇಲ್ಲವಾಗಿದೆ. ಭಾರತದ ಸಂವಿಧಾನದ ಆರ್ಟಿಕಲ್ 28 ರಲ್ಲಿ ‘ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಯನ್ನು ನಿಷೇಧಿಸುವ ಹಾಗೂ ಯಾವುದೇ ಒಂದು ಧರ್ಮವನ್ನು ಪ್ರೋತ್ಸಾಹಿಸಬಾರದು’ ಎನ್ನುವ ನಿಲುವು ಇದೆ. ಧರ್ಮನಿರಪೇಕ್ಷತೆ ಎನ್ನುವುದು ಸಂವಿಧಾನದ ಸ್ಪಷ್ಟ ಆಶಯವಾಗಿದೆ. ಹೀಗಿರುವಾಗ ಒಂದು ಧಾರ್ಮಿಕ ಗ್ರಂಥದ ಅಂಶಗಳನ್ನು ಶಿಕ್ಷಣದಲ್ಲಿ ಹೇಗೆ ಅಳವಡಿಸಲು ಸಾಧ್ಯ? ಎಂಬುದು ಸೆಕ್ಯೂಲರ್ ವಾದಿಗಳ ಪ್ರಶ್ನೆಯಾಗಿದೆ.

ಭಗವದ್ಗೀತೆ ಅಳವಡಿಕೆಗೆ ವಿರೋಧ ಯಾಕೆ?

* ಇದು ಹಿಂದುತ್ವವಾದಿಗಳ ಧರ್ಮ ಪ್ರಚಾರದ ತಂತ್ರವಾಗಿದೆ.

* ಸಂವಿಧಾನದ ಧರ್ಮ ನಿರಪೇಕ್ಷತೆ ತತ್ವಕ್ಕೆ ವಿರುದ್ಧವಾಗಿದೆ.

* ಮುಸ್ಲಿಂ, ಕ್ರಿಶ್ಚಿಯನ್, ಸಿಕ್ ಮುಂತಾದ ಹಿಂದೂಯೇತರ ವಿದ್ಯಾರ್ಥಿಗಳ ಮೇಲೆ ಹಿಂದೂ ಧಾರ್ಮಿಕ ಗ್ರಂಥದ ನೀತಿಗಳನ್ನು ಹೇರಿಕೆ ಮಾಡುವುದೇಕೆ?

* ಹಿಂದೂ ಧರ್ಮ ಗ್ರಂಥದ ಅಂಶಗಳನ್ನು ಪಠ್ಯಗಳಲ್ಲಿ ಸೇರಿಸುವುದೇ ಆದರೆ ಕುರಾನ್, ಬೈಬಲ್, ಗುರು ಗ್ರಂಥ ಸಾಹಿಬ್ ಗಳ ನೈತಿಕ ಭಾಗಗಳನ್ನೂ ಪಠ್ಯಗಳಲ್ಲಿ ಸೇರಿಸಬೇಕಾಗುತ್ತದೆ.

* ಶಿಕ್ಷಣದ ಉದ್ದೇಶ ವೈಜ್ಞಾನಿಕ ಚಿಂತನೆ ಹಾಗೂ ವಿಮರ್ಶಾತ್ಮಕ ಯೋಚನೆ ಬೆಳೆಸುವುದೇ ಹೊರತು ಧಾರ್ಮಿಕತೆಗಳನ್ನಲ್ಲ.

* ಧಾರ್ಮಿಕ ಗ್ರಂಥಗಳು ನಂಬಿಕೆಗಳನ್ನು ಆಧರಿಸಿರುತ್ತವೆಯೇ ಹೊರತು ವೈಜ್ಞಾನಿಕ ಪುರಾವೆಗಳ ಮೇಲಲ್ಲ.

* ಭಗವದ್ಗೀತೆಯಲ್ಲಿ ವರ್ಣ ವ್ಯವಸ್ಥೆ, ಕರ್ಮ ಸಿದ್ಧಾಂತ, ಯುದ್ಧದ ನ್ಯಾಯೀಕರಣಗಳ ಸಮರ್ಥನೆಗಳಿದ್ದು ಅವುಗಳು ಸಮಾನತೆ ಹಾಗೂ ಮಾನವ ಹಕ್ಕುಗಳಿಗೆ ವಿರುದ್ಧವಾಗಿವೆ.

* ವಿದ್ಯಾರ್ಥಿಗಳಲ್ಲಿ ಸನಾತನ ಸಾಮಾಜಿಕ ಅಸಮಾನ ವ್ಯವಸ್ಥೆಯನ್ನು ಬಲಪಡಿಸುವ ಆತಂಕವಿದೆ.

* ಧಾರ್ಮಿಕ ಬೋಧನೆಗಳು ಮನೆ, ದೇವಾಲಯ, ಮಸೀದಿ, ಚರ್ಚ್ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಆಗಬೇಕೇ ಹೊರತು ಸಾರ್ವತ್ರಿಕ ಶಿಕ್ಷಣದಲ್ಲಿ ಅಲ್ಲ.

* ಭಾರತವು ಧಾರ್ಮಿಕ ವೈವಿಧ್ಯತೆ ಇರುವ ಬಹುತ್ವದ ದೇಶ. ಒಂದು ಧರ್ಮದ ಬೋಧನೆಯನ್ನು ಕಡ್ಡಾಯಗೊಳಿಸುವುದು “ಸಾಂಸ್ಕೃತಿಕ ಏಕರೂಪತೆ’ ಯನ್ನು ಹೇರುವ ಹುನ್ನಾರವಾಗಿದೆ.

ಹೀಗೆ.. ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಳವಡಿಕೆಯನ್ನು ವಿರೋಧಿಸುವವರು ಹೇಳುತ್ತಾರೆ. ಸಂವಿಧಾನಿಕ ನಿರಪೇಕ್ಷತೆ, ಶಿಕ್ಷಣದ ನಿಷ್ಪಕ್ಷಪಾತತೆ ಹಾಗೂ ಧಾರ್ಮಿಕ ವೈವಿಧ್ಯತೆಗಳನ್ನು ಕಾಪಾಡಬೇಕಾಗಿದ್ದರಿಂದ ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಒಂದು ಧರ್ಮದ ನೈತಿಕ ಬೋಧನೆ ಖಂಡಿತಾ ಸಮರ್ಥನೀಯವಲ್ಲ. ಶಾಲೆಗಳು ಧರ್ಮ ನಿರಪೇಕ್ಷಿತವಾಗಿಯೇ ಉಳಿಯಬೇಕು ಹಾಗೂ ವೈಜ್ಞಾನಿಕ ವಿಮರ್ಶಾತ್ಮಕತೆಯನ್ನು ಬೆಳೆಸುವಂತಾಗಬೇಕು. ಇಷ್ಟಕ್ಕೂ ಶಾಲೆಗಳು ಧಾರ್ಮಿಕ ಸಂಸ್ಥೆಗಳಲ್ಲ. ‘ನೋಡಿ ಮುಸಲ್ಮಾನರು ಮದರಸಾಗಳಲ್ಲಿ ಕುರಾನ್ ಬೋಧಿಸುತ್ತಾರೆ, ನಾವು ಭಗವದ್ಗೀತೆ ಬೋಧಿಸಿದರೆ ತಪ್ಪೇನು?’ ಎಂಬುದು ಹಿಂದುತ್ವವಾದಿಗಳ ವಾದವಾಗಿದೆ. ಮದರಸಾಗಳು ಮುಸ್ಲಿಂ ಧರ್ಮೀಯರಿಗೆ ಮೀಸಲಾಗಿರುತ್ತವೆ. ಅವುಗಳು ಸಾಮಾನ್ಯವಾಗಿ ಸರಕಾರಿ ಶಾಲೆಗಳಲ್ಲ. ಅವು ಖಾಸಗಿ ಅಥವಾ ಧಾರ್ಮಿಕ ಸಂಸ್ಥೆಗಳಾಗಿವೆ. ಮುಖ್ಯವಾಗಿ ಮುಸ್ಲಿಂ ಸಮುದಾಯದವರು ನಡೆಸುತ್ತಾರೆ. ಇವು ಪ್ರಧಾನವಾಗಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ (ಕುರಾನ್, ಹದೀಸ್, ಅರಬಿ ಭಾಷೆ ಇತ್ಯಾದಿ) ನೀಡುತ್ತವೆ. ಅಲ್ಲಿ ಬೇರೆ ಧರ್ಮದ ಮಕ್ಕಳು ಇರುವುದಿಲ್ಲ. ಆರೆಸ್ಸೆಸ್ ಶಾಲೆಗಳಲ್ಲಿಯೂ ಭಗವದ್ಗೀತೆಯನ್ನು ಬೋಧಿಸಲಾಗುತ್ತದೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳು ಇರುವುದರಿಂದ ಯಾವುದೇ ಒಂದು ಧರ್ಮಗ್ರಂಥದ ಬೋಧನೆ ಬೇಕಾಗಿಲ್ಲ.

ಇಷ್ಟಕ್ಕೂ ಭಗವದ್ಗೀತೆ ಸಮಸ್ತ ಹಿಂದೂಗಳ ಆರಾಧನೆಯ ಗ್ರಂಥವೆಂಬುದೂ ಸನಾತನಿ ಹಿಂದುತ್ವವಾದಿಗಳ ಪ್ರಚಾರವಾಗಿದೆ. ಯಾವಾಗ ವರ್ಣ ವ್ಯವಸ್ಥೆಯ ತಾರತಮ್ಯವನ್ನು ಭಗವದ್ಗೀತೆಯಲ್ಲಿ ಸಮರ್ಥನೆ ಮಾಡಿಕೊಳ್ಳಲಾಯ್ತೋ ಆಗಲೇ ಅದು ಶೂದ್ರ ದಲಿತರ ವಿರೋಧಿಯಾಯ್ತು‌. ಈ ಸಮುದಾಯಗಳನ್ನು ಹೊರತು ಪಡಿಸಿದರೆ ಹಿಂದುತ್ವವಾದಿಗಳ ಹಿಂದೂಧರ್ಮದಲ್ಲಿ ಉಳಿಯುವವರು 5 ರಿಂದ 10% ಇರುವ ವೈದಿಕಶಾಹಿಗಳು ಮತ್ತು ವೈಶ್ಯರುಗಳು ಮಾತ್ರ. ಹೀಗಿರುವಾಗ ಭಗವದ್ಗೀತೆ ಎಲ್ಲಾ ಹಿಂದೂಗಳನ್ನು ಪ್ರತಿನಿಧಿಸುವ ಧರ್ಮಗ್ರಂಥ ಎನ್ನುವುದೇ ವೈದಿಕಶಾಹಿ ಕುತಂತ್ರ. ಪಾಪ ಪುಣ್ಯ ಪುನರ್ಜನ್ಮ ಎನ್ನುವ ಅವೈಜ್ಞಾನಿಕ ಕರ್ಮ ಸಿದ್ಧಾಂತದ ಪ್ರತಿಪಾದನೆಯ ಮೂಲಕ ಅಸಮಾನ ವ್ಯವಸ್ಥೆಯನ್ನು ಖಾಯಂ ಗೊಳಿಸುವ ಭಗವದ್ಗೀತೆ ಯನ್ನು ಹೇಗೆ ಮಾನ್ಯ ಮಾಡಲು ಸಾಧ್ಯ? ಎಂಬುದು ಚರ್ಚಾಸ್ಪದ ಸಂಗತಿಯಾಗಿದೆ.

ಹೀಗಾಗಿ… ಹಿಂದುತ್ವವಾದಿಗಳ ಧಾರ್ಮಿಕ ಹೇರಿಕೆಯ ಹುನ್ನಾರದ ಭಾಗವಾಗಿ ಭಗವದ್ಗೀತೆಯನ್ನು ಶಿಕ್ಷಣದ ವ್ಯವಸ್ಥೆಯಲ್ಲಿ ಅಳವಡಿಸಲು ಒತ್ತಾಯ ಮಾಡಲಾಗುತ್ತಿದೆ. ಇಂದಿನ ಹಾಗೂ ಮುಂದಿನ ತಲೆಮಾರಿನ ಮಕ್ಕಳಲ್ಲಿ ಆಧುನಿಕ ವೈಜ್ಞಾನಿಕ ವಿಚಾರಗಳನ್ನು ಬಿತ್ತುವ ಬದಲಾಗಿ ಸನಾತನ ಧಾರ್ಮಿಕ  ನಂಬಿಕೆಯನ್ನು ಹೇರುವ ಯಾವುದೇ ರೀತಿಯ ಪ್ರಯತ್ನಗಳನ್ನು ವಿರೋಧಿಸಬೇಕಿದೆ. ನೈತಿಕ ಶಿಕ್ಷಣದ ಹೆಸರಲ್ಲಿ ಭಗವದ್ಗೀತೆಯ ಕಲಿಕೆಯ ಪ್ರಸ್ತಾವನೆಯನ್ನು ಸಾರ್ವತ್ರಿಕವಾಗಿ ತಿರಸ್ಕರಿಸಬೇಕಿದೆ ಹಾಗೂ ಪ್ರಜ್ಞಾವಂತರು ತಮ್ಮ ಬರವಣಿಗೆ, ಭಾಷಣ, ನಾಟಕ ಮುಂತಾದ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read