ಅರಣ್ಯದಲ್ಲಿ ʼಶರಣ್ಯʼ – ಬೇಕು ತಾರ್ಕಿಕ ಅಂತ್ಯ

ಕೊಡಗಿನ ತಡಿಯಂಡ‌ಮೋಳು ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಶರಣ್ಯ ನಾಲ್ಕು ದಿನಗಳ ಬಳಿಕ ಪತ್ತೆಯಾಗಿ ಗಂಭೀರ ಚರ್ಚೆಗಳಿಗೆ ಚಾಲನೆ ನೀಡಿದ್ದಾರೆ. ಶರಣ್ಯಳ ವಿಚಾರದಲ್ಲಿ ರಾಜಕೀಯ ಮೇಲಾಟ, ಪರಸ್ಪರ ಕೆಸರೆರೆಚಾಟ ಎಲ್ಲವೂ ಆಗಿ ಆಗಿದೆ. ಶರಣ್ಯ ಸಿಕ್ಕಾಗ ಶಾಸಕ ಹಾಗೂ ರಾಜ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೀರೋ ಅನ್ನಿಸಿದ್ದರು. ಕೇರಳದ ಹಿರಿಯ ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರೂ ಪೊನ್ನಣ್ಣನಿಗೆ ಫೋನ್ ಮಾಡಿ ಶಹಭಾಶ್ ಗಿರಿ ನೀಡಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಶರಣ್ಯಳ‌ ಕುರಿತು ಆಕ್ರೋಶ ಅನುಮಾನಗಳ ಕಾಡ್ಗಿಚ್ಚು ಹಬ್ಬಿಕೊಂಡಿತ್ತು. ಅನುಮಾನಕ್ಕೆ ಪೂರಕವಾಗಿಯೇ ಶರಣ್ಯಾ ಹಲವು ಸಾಕ್ಷಿಯನ್ನೂ ಪೂರೈಸಿದ್ದಳು – ರಂಜಿತ್‌ ಕವಲಪಾರ, ಪತ್ರಕರ್ತ,

ಶರಣ್ಯ‌ ಈ ಹುಡುಗಿಯ ಹಿನ್ನೆಲೆ ಹಾಗೂ ಪ್ರಸ್ತುತ ವಿದ್ಯಮಾನಗಳ ಕುರಿತು ಈಗಾಗಲೇ ನಿಮಗೆ ತಿಳಿದಿರುತ್ತದೆ.  ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಶರಣ್ಯಳ‌ ಕುರಿತ ಅಂತೆಕಂತೆಗಳು ಈಗ ಕೊಂಚ ತಗ್ಗಿವೆ.

ನಾಲ್ಕು ದಿನ ಆಹಾರ ಇಲ್ಲದೆ ದಟ್ಟ ಕಾಡಿನಲ್ಲಿ ಬದುಕಿ ಬಂದ ಹುಡುಗಿಯ ಸುತ್ತ ಅನುಮಾನದ ದೊಡ್ಡ ಹುತ್ತ ಬೆಳೆದುಕೊಂಡಿದೆ. ಸ್ವತಃ ಆಕೆಗೂ ಜಾಲತಾಣದ ವೀಕ್ಷಕರಿಗೂ ಉಸಿರುಗಟ್ಟಿಸುವ, ಕಣ್ಣು ಕತ್ತಲಾಗುವ ಅನುಭವನ್ನು ಈ ಪ್ರಕರಣ ಹುಟ್ಟು ಹಾಕಿದ ಚರ್ಚೆ ಉಂಟು ಮಾಡಿದೆ..

ತಡಿಯಂಡ‌ಮೋಳು ಬೆಟ್ಟಕ್ಕೆ ತನ್ನದೇ ಆದ ಐತಿಹಾಸಿಕ‌ ಹಿನ್ನೆಲೆಯಿದೆ. ಬೆಟ್ಟದ ತಪ್ಪಲಿನಲ್ಲಿ ಕೊಡಗಿನ ದೊಡ್ಡ ವೀರ ರಾಜೇಂದ್ರ ಕಟ್ಟಿಸಿದ ಅಡಗು ತಾಣ ʼನಾಲ್ಕುನಾಡುʼ ಅರಮನೆಯಿದೆ. ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನನ್ನು ಬ್ರಿಟಿಷರು ಸೆರೆ ಹಿಡಿದು ಕೊಡಗನ್ನು ವಶಪಡಿಸಿಕೊಂಡ ಐತಿಹಾಸಿಕ ಘಟನೆಗೂ ಆ ಸ್ಥಳ ಸಾಕ್ಷಿಯಾಗಿ ನಿಂತಿತ್ತು.

ಸಾಮಾನ್ಯವಾಗಿ ತಡಿಯಂಡಮೋಳು ಬೆಟ್ಟ ಹತ್ತುವವರು ಕೆಲಕಾಲ ಅಲ್ಲಿ ಉಸಿರು ತೆಗೆದುಕೊಂಡು ಬೆಟ್ಟ ಹತ್ತುತ್ತಾರೆ. ಹೀಗೆ ಕನ್ನಡದ ಲೇಖಕ ಶ್ರೀನಿವಾಸ ಖ್ಯಾತಿಯ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಆ ಸ್ಥಳಕ್ಕೆ ಭೇಟಿಕೊಟ್ಟು ಈ ಕಾಡಿನೊಳಗೇನಿದು ಎಂದು ಅರಮನೆಯಿಂದ ಅದರ ಜಾಡು ಹಿಡಿದು ಬರೆದ ಚಿಕ್ಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಬಂದಿದೆ. ಇಂತಹಾ ಐತಿಹಾಸಿಕ ಹಿನ್ನೆಲೆಯುಳ್ಳ ತಡಿಯಂಡ ಮೋಳು ಬೆಟ್ಟ ಈ ಮಟ್ಟಿಗೆ ಚರ್ಚೆಗೆ ಹಿಂದೆಂದೂ ಆಗಿರಲಿಲ್ಲ.

ಶರಣ್ಯ

ತಡಿಯಂಡ ಮೋಳು ಬೆಟ್ಟವನ್ನು ‌ಕೊಂಚ ಹತ್ತಿದರೆ ಅಲ್ಲಿ ಮಲೆಕುಡಿಯರ ಸಣ್ಣದೊಂದು ನೆಲೆಯಿದೆ. ಹತ್ತು ಹನ್ನೆರಡು ಮನೆಗಳು ಅಲ್ಲಿವೆ. 2018ರಲ್ಲಿ ಅಲ್ಲಿನ ಒರ್ವ ವ್ಯಕ್ತಿ ಸುದ್ದಿಯಾಗಿದ್ದರು. ಅವರ ಹೆಸರು ಕುಡಿಯರ ಮುತ್ತಪ್ಪ. ಕುಡಿಯ ಜನಾಂಗದ ನಾಯಕ ಬುಡಕಟ್ಟು ಜನಾಂಗದ ಹಕ್ಕು ಒತ್ತಾಯಿಸಿ ಹಲವು ಹೋರಾಟ ರೂಪಿಸಿದ್ದ ಸಣ್ಣ ಪ್ರಮಾಣದ ಹೋರಾಟಗಾರ ಕೂಡ. 2018ರಲ್ಲಿ ಭೀಕರ ಜಲಪ್ರಳಯಕ್ಕೆ ತುತ್ತಾಗಿದ್ದ ಕೊಡಗಿನಲ್ಲಿ ಸಾವಿರಾರು ಮಂದಿ ಮನೆ ಕಳೆದುಕೊಂಡಾಗ ತನ್ನ ಮೂರು ಎಕರೆ ಕಾಫಿತೋಟವನ್ನೇ ನಿರಾಶ್ರಿತರಿಗೆ ಬಿಟ್ಟು ಕೊಡುವ ಮಾತಾಡಿದ್ದರು ಅವರು. ಅವರ ವಿಶಾಲ ಹೃದಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರಲ್ಲದೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಆದರೆ ಆ ಕುಗ್ರಾಮಕ್ಕೆ ಹೋಗಿ ಯಾರೂ ಮನೆಕಟ್ಟಿಕೊಂಡು ಇರಲು ಮುಂದೆ ಬರಲಿಲ್ಲ. ಹಾಗೂ ವಿಪರೀತ ಆನೆಕಾಟದ ಆ ಪ್ರದೇಶದಲ್ಲಿ ಆರುಗಂಟೆ ಕಳೆದರೆ ಅಲ್ಲಿರುವ ಮೂಲ ನಿವಾಸಿಗಳೇ ಆನೆಗೆ ಹೆದರಿ ಮನೆಯಿಂದ ಹೊರಗೆ ಇಳಿಯುವುದಿಲ್ಲ. ಶರಣ್ಯ ಕಾಣೆಯಾದಾಗ ಇದೇ ಕುಡಿಯರ ಮುತ್ತಪ್ಪನವರು ಹರಕೆ ಹೊತ್ತು ಅವರ ಬುಡಕಟ್ಟು ಜನಾಂಗದ ದೇವತೆಯನ್ನು ಪ್ರಾರ್ಥಿಸಿ ಶರಣ್ಯಳಿಗಾಗಿ ತಮ್ಮ ಹುಡುಗರನ್ನು ಕಾಡಿಗೆ ಕಳುಹಿಸಿ ಕೊಟ್ಟಿದ್ದರು. ಹಾಗೆ ಕಳುಹಿಸಿ ಕೊಟ್ಟ ಹುಡುಗರೇ ಶರಣ್ಯಳನ್ನು ಕಂಡು ಹಿಡಿದುಕೊಂಡು ಬಂದವರು. ಬುಡಕಟ್ಟು ಜನಾಂಗದ ಅವರ ದೈವ ನಂಬಿಕೆ ಉಳಿಸಿಕೊಂಡಿತ್ತು.

 ಆ ದಟ್ಟಾರಣ್ಯದಲ್ಲಿ ಮುತ್ತಪ್ಪನವರ ಹುಡುಗರಿಗೆ ಹೊರತು ಪಡಿಸಿ ಮತ್ಯಾರಿಗೂ ಅಲ್ಲಿ ಸಲೀಸಾಗಿ ಓಡಾಡಲು ಸಾಧ್ಯವಾಗುವುದಿಲ್ಲ.. ಅವರಿಗೆ ಆ ಕಾಡಿನ ಇಂಚಿಂಚೂ ಪರಿಚಿತ. ಕಾಡಿನಲ್ಲಿರುವ ಝರಿ, ಜೇನು, ನಾಟಿ ಔಷಧಿ, ಕಾಡಾನೆಯ ಹಾದಿ, ಕರಡಿಯ ಆವಾಸ ಸ್ಥಾನ, ಹುಲಿಯ ಹೆಜ್ಜೆ ..ಇಷ್ಟೇ ಯಾಕೆ ದಾರಿತಪ್ಪಿಸುವ ಬಳ್ಳಿಯೂ ಅವರಿಗೆ ಸ್ಪಷ್ಟ.

‌‌‌ಅವರು ಆ ಕಾಡಿನೊಡನೆ ಬೆರೆತು ಜೀವಿಸುವವರು. ಪ್ರಕೃತಿಯನ್ನು ನಂಬಿ ಆರಾಧಿಸುವವರು. ಅವರಲ್ಲೆ ಹಲವರು ಕಾಡಾನೆ ದಾಳಿಗೂ ಈ ಹಿಂದೆ ತೀರಿ ಹೋಗಿದ್ದಾರೆ. ಹಾಗೆ ತೀರಿ ಹೋದರೆ ಕಾಡಿಗೆ ಏನೋ ಅಪಚಾರ ಆಗಿ ಹೀಗೆ ದೇವರು ಶಾಪ ಕೊಟ್ಟ ಅಂತ ಅವರು ಮತ್ತೆ ದೈವದ ಮೊರೆ ಹೋಗುತ್ತಾರೆ.

ತಡಿಯಂಡ ಮೋಳು ಬೆಟ್ಟಕ್ಕೆ ಹೋಗಲು ಈ ಬುಡಕಟ್ಟು ಜನಾಂಗದ ಯುವಕರಿಗೆ ಹಲವು ಶಾರ್ಟ್ ಕಟ್ ದಾರಿ ಕೂಡ ಅವರ ಪೂರ್ವಜರು ಹೇಳಿ ಕೊಟ್ಟಿದ್ದಾರೆ. ಹಾಗಾಗಿ ಅವರು ಕಾಡಿನೊಳಗೆ ಅನಾಯಾಸವಾಗಿ ಹೋಗಿ ಮರಳುತ್ತಾರೆ.

ಶರಣ್ಯಳ ವಿಚಾರದಲ್ಲಿ ರಾಜಕೀಯ ಮೇಲಾಟ, ಪರಸ್ಪರ ಕೆಸರೆರೆಚಾಟ ಎಲ್ಲವೂ ಆಗಿ ಆಗಿದೆ. ಶರಣ್ಯ ಸಿಕ್ಕಾಗ ಶಾಸಕ ಹಾಗೂ ರಾಜ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೀರೋ ಅನ್ನಿಸಿದ್ದರು. ಸಾಲದಕ್ಕೆ ಇತ್ತೀಚೆಗೆ ಅವರು ಕೇರಳ ಚುನಾವಣಾ ಪ್ರಚಾರಕ್ಕೂ ಹೋಗಿ ಬಂದಿದ್ದರು. ಕೇರಳದ ಹಿರಿಯ ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರೂ ಪೊನ್ನಣ್ಣನಿಗೆ ಫೋನ್ ಮಾಡಿ ಶಹಭಾಶ್ ಗಿರಿ ನೀಡಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಶರಣ್ಯಳ‌ ಕುರಿತು ಆಕ್ರೋಶ ಅನುಮಾನಗಳ ಕಾಡ್ಗಿಚ್ಚು ಹಬ್ಬಿಕೊಂಡಿತ್ತು. ಅನುಮಾನಕ್ಕೆ ಪೂರಕವಾಗಿಯೇ ಶರಣ್ಯಾ ಹಲವು ಸಾಕ್ಷಿಯನ್ನೂ ಪೂರೈಸಿದ್ದಳು.

ಆದರೆ ಸೊಳ್ಳೆ ಕಚ್ಚಿಲ್ಲ, ತಿಗಣೆ ಹತ್ತಿಲ್ಲ, ‌ಬಟ್ಟೆ ಮಣ್ಣಾಗಿಲ್ಲ, ಕೂದಲು ಕೆದರಿಲ್ಲ ಅನ್ನುವ ಕ್ಷುಲ್ಲಕ ಅನುಮಾನಗಳು ಹರಿದಾಡಿ ಸಾರ್ವಜನಿಕವಾಗಿ ಹೊರಳಾಡಿದವು. ಅದಕೆ ಕೌಂಟರ್ ಪ್ರತಿಕ್ರಿಯೆಗಳಿಗೇನೂ ಕಡಿಮೆ ಇರಲಿಲ್ಲ.

ದೇವರನ್ನು ನಂಬಲ್ಲ ನಾನು ಅನ್ನುವ ಶರಣ್ಯಳ ಹೇಳಿಕೆ ಅವಳನ್ನು ಎಡಪಂಥೀಯಳನ್ನಾಗಿಸಿದರೆ ಅವರ ಕೇಶ ವಿನ್ಯಾಸ ನೋಡಿ ಹಲವರು ಇವಳು ಅದೇ ಮನಸ್ಥಿತಿಯವಳು ಎಂದು ಜಾಲಾಡಿದರು.

ಶರಣ್ಯಳಿಗೆ ಸೊಳ್ಳೆ ಕಚ್ಚಿದೆ ಅನ್ನುವ ಸಾಕ್ಷ್ಯಾಧಾರದ ಕೌಂಟರ್ ವಿಡಿಯೋ ಹೊರಗೆ ಬಂತು. ಅದನ್ನು ಪ್ರಸ್ತುತ ಪಡಿಸಿದ ಕನ್ನಡದ ಲೇಖಕರೊಬ್ಬರನ್ನು ಅವರ ಹಿನ್ನೆಲೆ ಅರಿಯದ ಕೆಲವರು ಮನಸೋ ಇಚ್ಛೆ ಟ್ರೋಲ್ ಮಾಡಿದರು. ಶರಣ್ಯ ಡ್ರಗ್ಸ್ ಸೇವಿಸಿ ಅಲ್ಲಿ ಧೈರ್ಯವಾಗಿದ್ದಳು ಅನ್ನುವ ಅಭಿಪ್ರಾಯವೂ ವ್ಯಕ್ತವಾಯಿತು.

ಶರಣ್ಯ ನಾಲ್ಕು ದಿನ ಆಹಾರ ಸೇವಿಸದೆ ಇದ್ದಳು. ಆದರೆ ನೀರಿನ ಸೆಲೆ ಅವಳಿಗೆ ಯಥೇಚ್ಛವಾಗಿ ನೀರು ಪೂರೈಸಿತ್ತು. ಅವಳು ಚಲಿಸಲಿಲ್ಲ. ಹಾಗಾಗಿ ಎನರ್ಜಿ ಉಳಿಸಿಕೊಂಡಳು. ಆಕೆ ಜಿಮ್ ಅಲ್ಲಿ ವರ್ಕ್ ಔಟ್ ಮಾಡುವ ಹುಡುಗಿ. ಫಿಟ್ನೆಸ್ ಫ್ರೀಕ್‌ಗಳಿಗೆ ದೈಹಿಕ ಕ್ಷಮತೆ ಸಹಜವಾಗಿ ಹೆಚ್ಚಿರುತ್ತದೆ. ಹಾಗೂ ಫಿಟ್ನೆಸ್ ಕಡೆ ಒಲವಿರುವವರು 99% ಮಾದಕ ಪದಾರ್ಥಗಳಿಂದ ದೂರ ಇರುತ್ತಾರೆ.

ಬುಡಕಟ್ಟು ಹುಡುಗರೊಂದಿಗೆ ಶರಣ್ಯ

ಇಲ್ಲಿ ಶರಣ್ಯಳಿಗೆ ಗುರಿಇಟ್ಟ ಹಲವರು ಪೊನ್ನಣ್ಣನ ವಿರುದ್ಧವೂ ಗುಡುಗಿದ್ದರು. ಇದರ ನಡುವೆ ಹದಿನಾಲ್ಕರ ಪೋರಿ ನಂದನ ಕಾಣೆಯಾಗಿ ಶವವಾಗಿ ಪತ್ತೆಯಾಗುವ ಮುನ್ನವೇ ಅವಳನ್ನು ಟ್ರೋಲ್ ಮಾಡಿ ಅಟ್ಟಹಾಸ ಮೆರೆದರು. ಇಷ್ಟರ ನಡುವೆ ಏನಾದರೂ ಮಾಡಿಕೊಳ್ಳಿ ಎನ್ನುವಂತೆ ಕೊಡಗು ಜಿಲ್ಲಾಡಳಿತ ಹಾಗೂ ಕೊಡಗು ಕಾಂಗ್ರೆಸ್ ಜಾಣಮೌನ ಪ್ರದರ್ಶನ ಮಾಡಿತ್ತು. ಪರಿಸ್ಥಿತಿ ನಂದನ ಶವವಾಗಿ ಪತ್ತೆಯಾದ ನಂತರ ಮಂದಗತಿ ಪಡೆದುಕೊಂಡಿತು.

ಈ ಶರಣ್ಯ ಪ್ರಕರಣವು ಮಾಧ್ಯಮಗಳ ಪ್ರಭಾವದ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದೆ. ಒಂದು ಸಾಮಾನ್ಯ ಮಿಸ್ಸಿಂಗ್ ಪ್ರಕರಣವಾಗಿ ಆರಂಭವಾದದ್ದು, ಕೆಲವೇ ಗಂಟೆಗಳಲ್ಲಿ ಟಿವಿ ಚಾನೆಲ್‌ಗಳು, ಯೂಟ್ಯೂಬ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಗಮನದಿಂದ ರಾಜ್ಯಮಟ್ಟದ ಸಂಚಲನವಾಗಿ ಬಿಟ್ಟಿತು. ಘಟನೆಗೆ ಸಂಬಂಧಿಸಿದ ದೃಢವಾದ ಮಾಹಿತಿಗಿಂತ ಊಹಾಪೋಹಗಳು, ಅರ್ಧಸತ್ಯಗಳು ಮತ್ತು ದೃಶ್ಯಾತ್ಮಕ ಆಕರ್ಷಣೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದವು. “ನಾಲ್ಕು ದಿನ ಕಾಡಿನಲ್ಲಿ ಹೇಗೆ ಬದುಕಿದರು?” ಎಂಬ ಪ್ರಶ್ನೆಯನ್ನು ವೈಜ್ಞಾನಿಕ ಅಥವಾ ತಾರ್ಕಿಕ ದೃಷ್ಟಿಯಿಂದ ವಿಶ್ಲೇಷಿಸುವ ಬದಲು, ಅದನ್ನು ಸಂಶಯದ ಕಣ್ಣಿನಿಂದ sensational ರೀತಿಯಲ್ಲಿ ಪ್ರಸ್ತುತ ಪಡಿಸಲಾಯಿತು. ಇದರಿಂದ ಜನರಲ್ಲಿ ಸಹಜ ಕುತೂಹಲಕ್ಕಿಂತ ಅನುಮಾನ ಮತ್ತು ಅವಿಶ್ವಾಸವೇ ಹೆಚ್ಚಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ತಮ್ಮದೇ ತೀರ್ಪು ನೀಡುವ ಪರಿಸ್ಥಿತಿ ನಿರ್ಮಾಣವಾಗಿ, ಯಾವುದೇ ಅಧಿಕೃತ ವರದಿ ಬರುವ ಮುನ್ನವೇ ಸಾರ್ವಜನಿಕ ನ್ಯಾಯಾಲಯವೇ ತೀರ್ಪು ನೀಡುವಂತಾಯಿತು. ಮಾಧ್ಯಮಗಳು ಕೆಲವೊಮ್ಮೆ ಜವಾಬ್ದಾರಿಯುತ ಮಾಹಿತಿಯನ್ನು ಹಂಚುವ ಬದಲು, ಟ್ರೆಂಡ್ ಮತ್ತು ವ್ಯೂಸ್ ಬೆನ್ನಟ್ಟಿದ ಪರಿಣಾಮ ವ್ಯಕ್ತಿಗತ ಮಾನಹಾನಿಗೂ ಕಾರಣವಾಗುವ ಮಟ್ಟಕ್ಕೆ ವಿಚಾರ ಹೋಗಿದೆ. ಶರಣ್ಯಳ ದೈಹಿಕ ಸ್ಥಿತಿ, ವೈಯಕ್ತಿಕ ನಂಬಿಕೆಗಳು, ಅವಳ ವರ್ತನೆ ಇತ್ಯಾದಿಗಳನ್ನು ಅನಾವಶ್ಯಕವಾಗಿ ಚರ್ಚೆಗೆ ಎಳೆದು ತರುವ ಮೂಲಕ ವಿಚಾರದ ಮೂಲಭೂತ ಅಂಶವೇ ಮಸುಕಾಗುವಂತಾಯಿತು. ಇದರ ಜೊತೆಗೆ, ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಬುಡಕಟ್ಟು ಯುವಕರಿಗಿಂತ ರಾಜಕೀಯ ವ್ಯಕ್ತಿತ್ವಗಳು ಹೆಚ್ಚು ಪ್ರಾಮುಖ್ಯತೆ ಪಡೆಯುವಂತೆ ಚಿತ್ರಣ ರೂಪುಗೊಂಡದ್ದು ಮಾಧ್ಯಮದ ದೋಷಪೂರಿತ ನಡೆಯನ್ನು ತೋರಿಸುತ್ತದೆ. ಒಂದೆಡೆ, ಮಾಧ್ಯಮದ ತೀವ್ರ ಗಮನದಿಂದ ಶೋಧ ಕಾರ್ಯಕ್ಕೆ ವೇಗ ಸಿಕ್ಕಿರಬಹುದು; ಆದರೆ ಮತ್ತೊಂದೆಡೆ, ಅದೇ ತೀವ್ರತೆ ನಿಯಂತ್ರಣ ತಪ್ಪಿದಾಗ ಸಾಮಾಜಿಕ ಒತ್ತಡ, ಟ್ರೋಲಿಂಗ್ ಮತ್ತು ತಪ್ಪುಮಾಹಿತಿ ಹರಡುವಿಕೆ ಹೆಚ್ಚುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳು ತಕ್ಷಣದ ಸಂಚಲನಕ್ಕಿಂತ ದೃಢವಾದ ಮಾಹಿತಿ, ಮಾನವೀಯತೆ ಮತ್ತು ಜವಾಬ್ದಾರಿಯುತ ವರದಿಗಾರಿಕೆಗೆ ಹೆಚ್ಚಿನ ಮಹತ್ವ ನೀಡುವುದು ಅತ್ಯಾವಶ್ಯಕ. ಇಲ್ಲವಾದರೆ ಸತ್ಯ ಹೊರಬರುವುದಕ್ಕೂ ಮುನ್ನವೇ ಅದು ಅನುಮಾನಗಳ ಶಬ್ದದಲ್ಲಿ ಮಣಿದು ಹೋಗುವ ಅಪಾಯ ಇದೆ.

ಮಿಸ್ಸಿಂಗ್ ಪ್ರಕರಣವೊಂದು ರಾಜ್ಯಮಟ್ಟದಲ್ಲಿ ಹೀಗೆ ತೀವ್ರ  ಚರ್ಚೆಗೆ ಗ್ರಾಸವಾಯಿತು. ಶರಣ್ಯಳಿಗೆ ಶಾಲು ಹಾಕಿ ಸನ್ಮಾನ ಮಾಡಿ ಅವಳನ್ನು ಹುಡುಕಿತಂದ ಯುವಕರನ್ನು ಕಡೆಗಣನೆ ಮಾಡಿದ ಕುರಿತು ಅಸಮಾಧಾನವೂ ವ್ಯಕ್ತವಾಯಿತು. ಮುಂದೆ ಆ ಯುವಕರಿಗೆ ತಕ್ಕ ಮರ್ಯಾದೆ ಕೊಟ್ಟು ಗೌರವಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು. ಶರಣ್ಯಳನ್ನೂ ಕರೆಸಿ ವಿಚಾರಿಸಿ ಸತ್ಯಾಸತ್ಯತೆಯನ್ನು ಜನರ ಮುಂದೆ ಇಡಬೇಕು. ಜನರ ಟ್ಯಾಕ್ಸ್ ಹಣ ನಿಜವಾಗಿಯೂ ಪೋಲಾಗಿದೆ ಅಂತಾದರೆ ಅವಳಿಗೆ ಶಿಕ್ಷೆ ಆಗಬೇಕು. ನಿಜವಾಗಿಯೂ ಅವಳು ಮಿಸ್ಸಾಗಿ ಸಿಕ್ಕಳೆಂದರೆ ಜಿಲ್ಲಾಡಳಿತದಿಂದ ಒಂದು‌ ಸಂಮಾನ ಮಾಡಿದ್ರಾಯ್ತು. ಆಕೆಯನ್ನು ಹುಡುಕಿ ತಂದ ಹುಡುಗರೊಂದಿಗೆ ಅಲ್ಲಿಗೆ ಎಲ್ಲದಕ್ಕೂ ‌ಒಂದು ತಾರ್ಕಿಕ ಅಂತ್ಯ ಸಿಕ್ಕಾಂತಾಗುತ್ತದೆ.

ರಂಜಿತ್ ಕವಲಪಾರ

ಪತ್ರಕರ್ತ, ಬರಹಗಾರ

More articles

Latest article

Most read