ಇರಾನ್ ಯುದ್ಧವನ್ನು ಅಮೆರಿಕ ಈಗಾಗಲೇ ಗೆದ್ದಿದೆ ಎಂದು ಟ್ರಂಪ್ ಏಕೆ ಹೇಳುತ್ತಾರೆ?

ವಾಷಿಂಗ್ಟನ್‌ ಡಿ.ಸಿ : ಸಂಪ್ರದಾಯವಾದಿ ಥಿಂಕ್ ಟ್ಯಾಂಕ್ ಆದ ಹೆರಿಟೇಜ್ ಫೌಂಡೇಶನ್‌ನ ಹಿರಿಯ ಸದಸ್ಯ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜೇಮ್ಸ್ ಕ್ಯಾರಫಾನೊ ಅವರು “ಅಮೆರಿಕ ಗೆದ್ದಿದೆ” ಎಂದು ಹೇಳುತ್ತಾರೆ. ಏಕೆಂದರೆ ಇರಾನ್ ಕನಿಷ್ಠ ಮೂರು ವರ್ಷಗಳ ಕಾಲ ವಾಷಿಂಗ್ಟನ್‌ಗೆ “ಗಮನಾರ್ಹ ಬೆದರಿಕೆಯಾಗುವ ಸಾಮರ್ಥ್ಯವನ್ನು ಕಳೆದುಕೊಂಡಿದೆ” ಎಂಬುದು ಅವರ ಅಭಿಪ್ರಾಯ.

ಕ್ಯಾರಫಾನೊ ಅವರು ದಿ ಬಾಟಮ್ ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ವೇಳೆ ಇರಾನ್ ಮತ್ತೆ ಪುಟಿದೇಳಲು ಪ್ರಯತ್ನಿಸಿದರೂ, ಟ್ರಂಪ್ ಕೇವಲ ಹುಲ್ಲನ್ನು ಕತ್ತರಿಸಿದಂತೆ ಅವರ ಮೇಲೆ ಬಾಂಬ್ ಹಾಕಿ ಮತ್ತೆ ಹಳೆಯ ಸ್ಥಿತಿಗೆ ತಳ್ಳುತ್ತಾರೆ” ಎಂದು ಹೇಳಿದರು.

ಹಾರ್ಮುಜ್ ಜಲಸಂಧಿಯ ಪ್ರಾಮುಖ್ಯತೆ ಮತ್ತು ಅದರ ಮೇಲೆ ಇರಾನ್ ಹೊಂದಿರುವ ನಿಯಂತ್ರಣದ ಬಗ್ಗೆ ಇರುವ ಸುದ್ದಿಗಳು ಕೇವಲ ಉತ್ಪ್ರೇಕ್ಷೆಯಿಂದ ಕೂಡಿವೆ ಎಂದು ಅವರು ವಾದಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಕೇವಲ ಶಸ್ತ್ರಾಸ್ತ್ರಗಳ ಹೋರಾಟವಾಗಿ ಉಳಿದಿಲ್ಲ. ಇದು ಆರ್ಥಿಕ ಮತ್ತು ರಾಜತಾಂತ್ರಿಕ ಮೇಲಾಟವೂ ಹೌದು. ಇರಾನ್‌ನ ಸಾಮರ್ಥ್ಯ ನಿಂತುಹೋಗಿದೆ ಎಂಬುದು ಅಮೆರಿಕದ ತಜ್ಙರ ಹೇಳೀಕೆಯಾಗಿದೆ. ಹಾರ್ಮುಜ್ ಜಲಸಂಧಿಯಂತಹ ಆಯಕಟ್ಟಿನ ಜಾಗಗಳ ಮೇಲೆ ಇರಾನ್ ಹೊಂದಿರುವ ಹಿಡಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಟ್ರಂಪ್ ಅವರ ಹುಲ್ಲು ಕತ್ತರಿಸುವ ನೀತಿಯು ಇರಾನ್ ಅನ್ನು ಕಟ್ಟಿಹಾಕುತ್ತದೆಯೇ ಅಥವಾ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಅಸ್ಥಿರತೆಗೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.

More articles

Latest article

Most read