ಓರ್ವ ಮತದಾರನೂ ಪಟ್ಟಿಯಿಂದ ಹೊರಗುಳಿಯದಂತೆ ಮತಪಟ್ಟಿ ರಚಿಸುವಂತೆ ಆಗ್ರಹ

 ಬೆಂಗಳೂರು : SIR ಎಸ್‌ಐಆರ್‌ ಎಂಬುದು ಮತದಾರರನ್ನು ಹೊರದಬ್ಬುವ ಅಸಂವಿಧಾನಿಕ    ಪ್ರಕ್ರಿಯೆ. ಒಬ್ಬ ಮತದಾರರೂ ಹೊರಗುಳಿಯದಂತಹ ಸಮರ್ಥ ಮತಪಟ್ಟಿಯನ್ನು ಸಿದ್ಧಪಡಿಸಲು ಮುಂದಾಗಬೇಕೆಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ   ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳ SIR ವಿರೋಧಿ ಗುಂಪು  ಆಗ್ರಹಿಸಿವೆ. 

 SIR (Special Intensive Revision)  ಎಂಬುದು ಸಂವಿಧಾನದಲ್ಲಿ ಇಲ್ಲದ, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸುವ, ಹಡಾಹುಡಿಯಲ್ಲಿ ನಡೆಸುವ, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ, ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗುತ್ತಿರುವ ಮತ ಪಟ್ಟಿಯ ಪರಿಷ್ಕರಣಾ ಪದ್ದತಿಯಾಗಿದೆ.

ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಜೀವಂತ ಕಾಲದಲ್ಲಿಯೇ ನಿರಾಕರಿಸುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಅಂತ್ಯವಾಗಿದೆ. SIR ಎಂಬುದು ʼದೂರಾಲೋಚನೆʼಯನ್ನಲ್ಲ, ಬದಲಿಗೆ ʼದುರಾಲೋಚನೆʼಯನ್ನು ತನ್ನ ಒಡಲಲ್ಲಿಟ್ಟಿಕೊಂಡಿದೆ. ಇದು ಪರೋಕ್ಷ ರೀತಿಯಲ್ಲಿ CAA ಮತ್ತು NRC ಯನ್ನು ಜಾರಿಗೊಳಿಸುವ ಕುತಂತ್ರವೂ ಸಹ ಆಗಿದೆ ಎಂದಿದ್ದಾರೆ. 

SIR ನಡೆದ ರಾಜ್ಯಗಳಲ್ಲಿ 20 ಲಕ್ಷದಿಂದ ಆರಂಭಿಸಿ 3 ಕೋಟಿಯ ತನಕ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ರಾಜ್ಯವಾಗಿದೆ. ಶೇ. 2 ರಷ್ಟು ಮತಗಳ ಏರುಪೇರು ರಾಜ್ಯದ ಚುನಾವಣಾ ಭವಿಷ್ಯವನ್ನೇ ಏರುಪೇರು ಮಾಡಲಿದೆ. ಅಂದರೆ 10 ಲಕ್ಷ ಮತಗಳ ಏರುಪೇರು ಕರ್ನಾಟಕದ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ. 

ಕೇಂದ್ರ ಚುನಾವಣಾ ಆಯೋಗಕ್ಕೆ   ಆಗ್ರಹಗಳು
ಚುನಾವಣಾ ಆಯೋಗದ ಮ್ಯಾನ್ಯುಯಲ್‌ ನಲ್ಲಿ ಇರುವಂತೆ ಕರಡು ಪಟ್ಟಿಯನ್ನು ಗ್ರಾಮ ಮತ್ತು ವಾರ್ಡ್ ಸಭೆಗಳಲ್ಲಿ ಬಹಿರಂಗವಾಗಿ ಅಂಟಿಸಿ, ಓದಿ, ಮುಕ್ತವಾಗಿ ತಿದ್ದುಪಡಿಗಳನ್ನು, ತಕರಾರುಗಳನ್ನು ಸ್ವೀಕರಿಸಿ, ಅವೆಲ್ಲವನ್ನೂ ಚೆನ್ನಾಗಿ ಪರಿಶೀಲಿಸಿ ನಂತರವೇ ಅಂತಿಮಗೊಳಿಸಬೇಕು. ಗ್ರಾಮ ಸಭೆಯಲ್ಲಿ ಮತ ಪಟ್ಟಿಯ ಪರಿಶೀಲನೆ ಕಡ್ಡಾಯವಾಗಬೇಕು.

ಸುಪ್ರೀಂಕೋರ್ಟಿನ ಆದೇಶದಂತೆ ಆಧಾರ್‌ ಕಾರ್ಡ್‌ ಅನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಆಧಾರ್‌ ಕಾರ್ಡ್‌ ಇದ್ದವರನ್ನು ಯಾವುದೇ ಕಾರಣದಿಂದಲೂ ಮತಪಟ್ಟಿಯಿಂದ ಹೊರಗಿಡಬಾರದು. ಭಾರತೀಯರಲ್ಲದ ಅನುಮಾನಗಳೂ ಬಂದಲ್ಲಿ, ಅದನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ಪ್ರಕ್ರಿಯೆ ನಡೆದು ಧೃಡಿಕರಣಗೊಂಡ ನಂತರವಷ್ಟೇ ಮತಪಟ್ಟಿಯಿಂದ ತೆಗೆಯಬೇಕು.

ದಾಖಲೆಗಳಿಲ್ಲದಿದ್ದಲ್ಲಿ ಸಿದ್ದಪಡಿಸಿಕೊಂಡು ಸಲ್ಲಿಸಲು ಹಾಗೂ ಅಪೀಲು ಸಲ್ಲಿಸಲು ಸೇರಿ ಕನಿಷ್ಟ ಆರು ತಿಂಗಳ ಸಮಯ ನೀಡಬೇಕು.
ರಾಜ್ಯದ ವಯಸ್ಕರ ಜನಸಂಖ್ಯೆಗಿಂತ ಹಾಗೂ ಸ್ಥಳೀಯ ಚುನಾವಣೆಗಳಿಗಾಗಿ ರಾಜ್ಯ ಚುನಾವಣಾ ಆಯೋಗ  ಸಿದ್ಧಪಡಿಸುವ ಮತದಾರರ ಪಟ್ಟಿಯ ಸಂಖ್ಯೆಗಿಂತ ಶೇ.1 ಕ್ಕಿಂತ ಹೆಚ್ಚು ವ್ಯತ್ಯಾಸವಿರಬಾರದು.

ಇದನ್ನು ಪಾಲಿಸದೆ ಹಡಾಹುಡಿಯಲ್ಲಿ ದೊಡ್ಡ ಅಂತರದ ಜೊತೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದಲ್ಲಿ ಕರ್ನಾಟಕ ಅದನ್ನು ಒಪ್ಪುವುದಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಮತದಾರರನ್ನು ಹೊರದಬ್ಬಿ ಚುನಾವಣೆ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂಬುದನ್ನು ಈಗಲೇ ಸ್ಪಷ್ಟಪಡಿಸಲು ಬಯಸುತ್ತಿದ್ದೇವೆ. ನಮ್ಮ ಚುನಾವಣೆಗಳನ್ನು ನಾವೇ ನಡೆಸಿಕೊಳ್ಳುತ್ತೇವೆ, ಕೇಂದ್ರದ ಮಧ್ಯ ಪ್ರವೇಶ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತೇವೆ.

ರಾಜ್ಯ ಸರ್ಕಾರಕ್ಕೆ  ಹಕ್ಕೊತ್ತಾಯ:

ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸರ್ಕಾರ ಮಾಡಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು “ಮತದಾರರ ನೆರವು ಕೇಂದ್ರ”ಗಳನ್ನು ಸ್ಥಾಪಿಸಬೇಕು.

ವಾರ್ಡುಗಳಲ್ಲಿ ಕೇರಳದಲ್ಲಿ ಮಾಡಿದಂತೆ ದಾಖಲೆಗಳಿಲ್ಲದ ಜನರಿಗೆ ಸತಾಯಿಸದೆ ಸುಲಭವಾಗಿ ಹಾಗೂ ತ್ವರಿತವಾಗಿ ವಾಸದ ಹಾಗೂ ಜಾತಿಯ ಪ್ರಮಾಣ ಪತ್ರಗಳನ್ನು ಒದಗಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸಿಲ್ದಾರರಿಗೆ ಸುತ್ತೋಲೆ ಕಳುಹಿಸಬೇಕು.  

ತಮಿಳುನಾಡಿನಲ್ಲಿ ಮಾಡಿದಂತೆ ಬಿ ಎಲ್‌ ಓ ಗಳಿಗೆ ಯುದ್ದೋಪಾದಿಯಲ್ಲಿ, ಪರಿಣಾಮಕಾರಿಯಾದ ತರಭೇತಿ ನೀಡಿ ಅವರು ಪ್ರತಿ ಮನೆಗೂ ತಲುಪಿ, ಒಬ್ಬರೂ ಹೊರಗುಳಿಯದಂತೆ ಎಚ್ಚರಿಕೆವಹಿಸುತ್ತಾ ನೊಂದಾವಣಿ ಪ್ರಕ್ರಿಯೆ ನಡೆಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ರಾಜ್ಯ ಚುನಾವಣಾ ಆಯೋಗಕ್ಕೆ ವಿಶೇಷ ಮನವಿ:

ಸ್ಥಳೀಯ ಚುನಾವಣೆಗಳು ಬರುತ್ತಿರುವುದರಿಂದ ಮತ್ತು ಜನರಲ್ಲಿ ಆತಂಕ ಇರುವುದರಿಂದ  ಮಾಸ್ಟರ್‌ ರೋಲಿನ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಮಾಡಿಸಲು ವಿಶೇಷ ಗಮನ ನೀಡಬೇಕು.

ಚುನಾವಣಾ ಆಯೋಗದ ಮ್ಯಾನ್ಯುಯಲ್‌ ನಲ್ಲಿ ಇರುವಂತೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಗ್ರಾಮ ಸಭೆಗಳನ್ನು ಹಾಗೂ ವಾರ್ಡ್‌ ಸಭೆಗಳನ್ನು ಕರೆದು ತಿದ್ದುಪಡಿಗಳನ್ನು ಸ್ವೀಕರಿಸಿ, ಸಾರ್ವಜನಿಕವಾಗಿ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಮಾಡಿಯೇ ಅಂತಿಮಗೊಳಿಸಬೇಕು.

ಈ ಗ್ರಾಮ/ವಾರ್ಡ್ ಸಭೆಗಳನ್ನು CAG ರೂಪಿಸಿರುವ ಸಾಮಾಜಿಕ ಪರಿಶೀಲನೆಯ ಮಾನದಂಡಗಳನ್ನು ಅನ್ವಯಿಸಿ ನಡೆಸಬೇಕು. ಆ ಮೂಲಕ ರಾಜ್ಯ ಚುನಾವಣಾ ಆಯೋಗದ ಪಟ್ಟಿಗೆ ಹೆಚ್ಚಿನ ಖಚಿತತೆ ಹಾಗೂ ಮಾನ್ಯತೆ ಬರುವಂತೆ ನೋಡಿಕೊಳ್ಳಬೇಕು.  ಸಾರಾಂಶದಲ್ಲಿ ರಾಜ್ಯ ತನ್ನದೇ ಆದ ಖಚಿತ ಮತ ಮಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು.

 ಈ ಆಗ್ರಹಗಳನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೆ ತರುವ ತನಕವೂ ಬೆನ್ನು ಹತ್ತಲಿರುವ ಸಂಘಟನೆ,  ಶೀಘ್ರದಲ್ಲಿಯೇ “ಮತದಾರರ ವಾರ್‌ ರೂಂ” ಸ್ಥಾಪಿಸಲಿದೆ. ಮತದಾರರ ಪಟ್ಟಿ ತಯಾರಿಸುವ ಇಡೀ ಪ್ರಕ್ರಿಯೆಯ ಮೇಲೆ ನಿಗಾವಹಿಸಲು ಮತ್ತು ಜನರಿಗೆ ನೆರವಾಗಲು “ಮತಹಕ್ಕು ರಕ್ಷಣಾ ಸಮಿತಿ” ಗಳನ್ನು ರಾಜ್ಯ ಮಟ್ಟದಿಂದ ಗ್ರಾಮ/ವಾರ್ಡ್‌ ಮಟ್ಟದ ತನಕ ರಚಿಸಲಿದೆ.  

ಪತ್ರಿಕಾಗೋಷ್ಠಿಯಲ್ಲಿ ಬಿ.ಟಿ. ಲಲಿತಾ ನಾಯಕ್, ಬಡಗಲಪುರ ನಾಗೇಂದ್ರ, ಎಚ್ಆರ್ ಬಸವರಾಜಪ್ಪ, ಎನ್.ವೆಂಕಟೇಶ್, ತಾರಾರಾವ್‌, ನೂರ್‌ ಶ್ರೀಧರ್‌, ಕೆ.ವಿ.ಭಟ್‌, ಗ್ನಾನಮೂರ್ತಿ, ಮಹಾಂತೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More articles

Latest article

Most read