ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ : ಮರುತನಿಖೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ನವದೆಹಲಿ : ಧರ್ಮಸ್ಥಳದ ಸೌಜನ್ಯ ಕೊಲೆ ಕೇಸ್ ಮರುತನಿಖೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ. ಯಾವ ರೀತಿಯ ತನಿಖೆ ಅನ್ನುವ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

ಎಸ್ ಐಟಿ ರಚನೆಗೆ ಸಿದ್ದವೆಂದ ರಾಜ್ಯ ಸರ್ಕಾರ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೌಜನ್ಯ ತಾಯಿ ಕುಸುಮಾವತಿ ಕೋರಿದ್ದರು. ಅಂತಿಮವಾಗಿ ಯಾವ ತನಿಖೆ ಅನ್ನೋ ಆದೇಶವನ್ನು ಸುಪ್ರೀಂ ಕಾಯ್ದಿರಿಸಿದೆ. ಅಂತಿಮ ಆದೇಶದಲ್ಲಿ ತನಿಖೆ ಬಗ್ಗೆ ವಿಸ್ತೃತ ನಿರ್ದೇಶನ ನೀಡಿದೆ.

ಸೌಜನ್ಯ ಅತ್ಯಾಚಾರ ಕೇಸಲ್ಲಿ ಸರಿಯಾದ ತನಿಖೆಯಾಗಿಲ್ಲ. ಸೌಜನ್ಯ ಸಾವಾಗಿ 14 ವರ್ಷವಾದ್ರೂ ಸರಿಯಾದ ತನಿಖೆಯಾಗಿಲ್ಲ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೌಜನ್ಯ ತಾಯಿ ಮನವಿ ಮಾಡಿದ್ದರು. ಎಸ್ ಐಟಿ ತನಿಖೆಗೆ ಸಹಕರಿಸಲು ಸಿದ್ಧವೆಂದು ರಾಜ್ಯ ಸರ್ಕಾರ ತಿಳಿಸಿದ್ದು, ಸಾಕ್ಷಿಗಳಿಗೆ ಭದ್ರತೆ ಮುಂದುವರಿಸಲು ಕೋರ್ಟ್ ಸೂಚನೆ ನೀಡಿದೆ.

More articles

Latest article

Most read