ನವದೆಹಲಿ : ದೇಶದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆಯ ಬಗ್ಗೆ ಜನ ಆತಂಕಗೊಂಡಿದ್ದಾರೆ. ದೆಹಲಿ ಎನ್ ಸಿಆರ್, ಉತ್ತರ ಪ್ರದೇಶ, ಮುಂಬೈ ಸೇರಿದಂತೆ ದೇಶದ ಹಲವೆಡೆ ಎಲ್ ಪಿ.ಜಿ ಸಿಲಿಂಡರ್ ಗಾಗಿ ಸಾಲುಗಟ್ಟಿ ನಿಂತಿದ್ದಾರೆ.
ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಆತಂಕಗೊಂಡ ಜನ ಎಲ್ ಪಿಜಿ ಸಿಲಿಂಡರ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಗ್ಯಾಸ್ ಏಜೆನ್ಸಿಗಳ ಹೊರಗೆ ಖಾಲಿ ಸಿಲಿಂಡರ್ ಇಟ್ಟುಕೊಂಡು ಜನರು ಹೊಸ ಸಿಲಿಂಡರ್ ಗಾಗಿ ಕಾಯುತ್ತಿದ್ದಾರೆ.
ಎಲ್ ಪಿ ಜಿ ಸಿಲಿಂಡರ್ ಅನ್ನು ಗ್ಯಾಸ್ ಏಜೆನ್ಸಿಗಳಿಂದ ಪಡೆಯಲು ಜನರು ಮುಗಿ ಬಿದ್ದಿದ್ದಾರೆ. ಹಬ್ಬಗಳು ಇರುವುದರಿಂದ ಎಲ್ ಪಿ ಜಿ ಸಿಲಿಂಡರ್ ಗೆ ಭಾರಿ ಬೇಡಿಕೆ ಇದೆ. ಕಾಳಸಂತೆಯಲ್ಲಿ 14.5 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಒಂದೂವರೆ ಸಾವಿರ ರೂಪಾಯಿಗೆ ಮಾರಾಟ ಆಗುತ್ತಿದೆ.
ಕೇಂದ್ರ ಸರ್ಕಾರವು ದೇಶದ ಎಲ್ಲ ತೈಲ ರಿಫೈನರಿಗಳು ಹೆಚ್ಚಿನ ಪ್ರಮಾಣದಲ್ಲಿ ಎಲ್ ಪಿಜಿ ಉತ್ಪಾದನೆ ಮಾಡಲು ಆದೇಶ ನೀಡಿದೆ. ಹೆಚ್ಚಿನ ಉತ್ಪಾದನೆ ಮಾಡಿದ ಎಲ್ ಪಿಜಿ ಯನ್ನು ದೇಶೀಯ ಬಳಕೆಗೆ ನೀಡಬೇಕು. ಗೃಹಬಳಕೆಯ ಎಲ್ ಪಿ.ಜಿ ಪೂರೈಕೆಗೆ ಕೇಂದ್ರದ ಪೆಟ್ರೋಲಿಯಂ ಇಲಾಖೆಯ ಒತ್ತು ನೀಡಿದೆ. ಇನ್ನೂ ಎಲ್‌ಪಿಜಿ ಸಿಲಿಂಡರ್ ಇಂಟರ್ ಬುಕ್ಕಿಂಗ್ ಅನ್ನು 21 ದಿನದಿಂದ 25 ದಿನಕ್ಕೆ ಏರಿಸಿದೆ.
ಈ ಮೂಲಕ ದಾಸ್ತಾನು , ಕಾಳ ಸಂತೆ ಮಾರಾಟ ತಡೆಯಲು ಕೇಂದ್ರ ಸರ್ಕಾರದ ಆದೇಶ ಹೊರಡಿಸಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಅಮದು ಮಾಡಿಕೊಂಡ ಎಲ್ ಪಿಜಿ ಆದ್ಯತೆ ಮೇಲೆ ನೀಡಲಾಗುತ್ತಿದೆ ಎಂದು ಕೇಂದ್ರದ ಪೆಟ್ರೋಲಿಯಂ ಇಲಾಖೆ ಹೇಳಿದೆ.
ರೆಸ್ಟೋರೆಂಟ್, ಹೋಟೆಲ್, ಕೈಗಾರಿಕೆಗಳ ಎಲ್ ಪಿಜಿ ಬೇಡಿಕೆ ಪರಿಶೀಲನೆಗೆ ತೈಲ ಮಾರುಕಟ್ಟೆ ಕಂಪನಿಗಳ ಮೂವರು ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿ ಹೋಟೆಲ್, ರೆಸ್ಟೋರೆಂಟ್ ಗೆ ಎಲ್ ಪಿಜಿ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಕೇಂದ್ರದ ಪೆಟ್ರೋಲಿಯಂ ಇಲಾಖೆಯಿಂದ ಎಕ್ಸ್ ಮೂಲಕ ಅಧಿಕೃತ ಮಾಹಿತಿ ನೀಡಲಾಗಿದೆ.
ತೇಜಸ್ವಿ ಸೂರ್ಯ ಟ್ವೀಟ್ : ಹೊಟೇಲ್ ಮಾಲೀಕರುಗಳ ಸಂಘದ ಮನವಿಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದ್ದಾರೆ.
ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರಕ್ಕೆ ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿರುವ ಸಂಸದ ಸೂರ್ಯ, ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರವು ದಿನನಿತ್ಯದ ಅಡುಗೆ ಕಾರ್ಯಗಳಿಗೆ ಬಹುಪಾಲು ವಾಣಿಜ್ಯ ಎಲ್‌ಪಿಜಿ ಮೇಲೆಯೇ ಅವಲಂಬಿತವಾಗಿದೆ. ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ, ಉದ್ಯೋಗ ಹಾಗೂ ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದೇಶದ ಹಲವೆಡೆ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ಜನ!
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದ ತೇಜಸ್ವಿ ಸೂರ್ಯ