ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಎಸ್‌ಐಆರ್‌ ಪರಿಣಾಮದ ಕುರಿತು ಸಮಾಲೋಚನಾ ಸಭೆ

ನನ್ನ ಮತ ನನ್ನ ಹಕ್ಕು – My Vote, My Right

‘ಎಸ್‌ಐಆರ್‌ ರೂಪುಗೊಂಡಿರುವುದೇ ಮಹಿಳಾ ಮತದಾರರನ್ನು ಹಕ್ಕಿನಿಂದ ವಂಚಿಸುವ ರೀತಿಯಲ್ಲಿʼ

ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಎಸ್‌ಐಆರ್‌ ಪರಿಣಾಮದ ಕುರಿತ ಸಮಾಲೋಚನಾ ಸಭೆಯಲ್ಲಿ ಆತಂಕ

ಬೆಂಗಳೂರು : ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯು ಮಹಿಳೆಯರ ಮೇಲೆ ಬೀರುವ ಪರಿಣಾಮವೇನು ಎಂಬುದರ ಕುರಿತಾಗಿ ಮಹಿಳಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯರ್ತೆಯರ ಸಮಾಲೋಚನಾ ಸಭೆಯೊಂದು ಬೆಂಗಳೂರಿನಲ್ಲಿ ದಿನಾಂಕ 28.08.2026ರಂದು ಶೇಷಾದ್ರಿಪುರಂನ ಎಐಟಿಯುಸಿ ಕಛೇರಿಯಲ್ಲಿ ನಡೆಯಿತು. ಇದರಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಬಂದಿದ್ದ ಸುಮಾರು 32 ವಿವಿಧ ಮಹಿಳಾ ಸಂಘಟನೆಗಳ ನೂರಾರು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಭಾರತದ ಚುನಾವಣಾ ಆಯೋಗವು ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ದೇಶದ 9 ರಾಜ್ಯಗಳಲ್ಲಿ ದೇಶದಾದ್ಯಂತ ಲಕ್ಷಾಂತರ ಮಹಿಳಾ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯದಲ್ಲಿದ್ದಾರೆ. ಈ ಪ್ರಕ್ರಿಯೆಯು ರೂಪಿಸಲ್ಪಟ್ಟಿರುವ ರೀತಿಯಲ್ಲಿಯೇ ಇದು ಮಹಿಳೆಯರನ್ನು ಮತದಾನದಿಂದ ಹೊರದೂಡುವಂತೆಯೇ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದಲ್ಲಿ, ಎಸ್‌ಐಆರ್‌ಗೆ ಪೂರ್ವಭಾವಿಯಾಗಿ ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆಯನ್ನು ಆತುರದಲ್ಲಿ, ಎಳ್ಳಷ್ಟೂ ಪಾರದರ್ಶಕತೆ ಇಲ್ಲದೆ ಮಾಡಲಾಗಿದೆ. ಇದರಿಂದ ಲಕ್ಷಾಂತರ ಮಹಿಳೆಯರ, ವಲಸೆ ಮತ್ತಿತರ ಕೂಲಿ ಕಾರ್ಮಿಕರ, ಮನೆ ಕೆಲಸಗಾರರ, ದಲಿತ, ಅಲೆಮಾರಿ ಮತ್ತು ಇತರೆ ತುಳಿತಕ್ಕೊಳಗಾದ ಸಮುದಾಯಗಳ ಜನರ, ಸ್ಲಂ ನಿವಾಸಿಗಳ ಹೆಸರುಗಳು ಮತದಾರರ ಪಟ್ಟಿಯಿಂದ ಬಿಟ್ಟುಹೋಗುತ್ತಿವೆ. ಪ್ರೇಮ ವಿವಾಹವಾಗಿ ಮನೆಗಳಿಂದ ದೂರವಿದ್ದು ಬದುಕು ಸಾಗಿಸುತ್ತಿರುವ ಯುವಜನರೂ ಮ್ಯಾಪಿಂಗ್‌ನಲ್ಲಿ ಬಿಟ್ಟುಹೋಗುವ ಸಾಧ್ಯತೆಯಿದೆ. SIR ಜಾರಿಗೆ ಬಂದಾಗ ಈ ಮತದಾರರನ್ನು ಮತದಾರರ ಪಟ್ಟಿಗೆ ಹೇಗೆ ಪುನಃ ಸೇರಿಸಿಕೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಎಲ್ಲೂ ತಿಳಿಸಿಲ್ಲ.

ಈ ಪ್ರಕ್ರಿಯೆ ಸಂವಿಧಾನ ವಿರೋಧಿಯಾಗಿದೆ ಎಂದು ವಕೀಲರಾದ ಮೈತ್ರೇಯಿ ಕೃಷ್ಣನ್‌ರವರು (ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ – AILAJ) ಹೇಳಿದರು. ಭಾರತದ ಸಂವಿಧಾನವು ರಚನೆಯಾಗುವಾಗಲೇ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಾರ್ವತ್ರಿಕ ವಯಸ್ಕ ಮತದಾನ ಹಕ್ಕನ್ನು ನೀಡಿದ್ದು ಕ್ರಾಂತಿಕಾರಕ ಹೆಜ್ಜೆಯಾಗಿತ್ತು. ಆದರೆ ಈಗ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಗಳು ಆ ಚಾರಿತ್ರಿಕ ನೀತಿಯನ್ನು ದುರ್ಬಲಗೊಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಮತದಾರರ ಪಟ್ಟಿಯ ಪರಿಷ್ಕರಣೆ ಸರ್ಕಾರದ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಮನೆಮನೆಗೆ ತೆರಳಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಎಸ್‌ಐಆರ್‌ ಮೂಲಕ ಈ ಹೊರೆ ಪ್ರಜೆಗಳ ಮೇಲೆ ಹಾಕಲಾಗಿದೆ. ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳನ್ನು ಮಹಿಳೆಯರು ಒದಗಿಸುವುದು ಸುಲಭವಲ್ಲ; ಆದ್ದರಿಂದ ಈ ಕ್ರಮ ಮಹಿಳೆಯರನ್ನು ಅವರ ಸಂವಿಧಾನಬದ್ಧ ಮತದಾನ ಹಕ್ಕಿನಿಂದ ವಂಚಿಸುವಂತಿದೆ ಎಂದು ಹೇಳಿದರು.

ನಂತರ ಮಾತನಾಡಿದ ಪಿಯುಸಿಎಲ್‌ನ ಐಶ್ವರ್ಯ.ಆರ್‌ರವರು, ಈಗಾಗಲೇ ಎಸ್‌ಐಆರ್‌ ಪೂರ್ಣಗೊಳ್ಳುವ ಹಂತದಲ್ಲಿರುವ ವಿವಿಧ ರಾಜ್ಯಗಳಲ್ಲಿ ಮಹಿಳಾ ಮತದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. “ಎಸ್‌ಐಆರ್‌ ಪ್ರಕ್ರಿಯೆಯ ಎನ್ಯೂಮರೇಶನ್ ಫಾರ್ಮ್‌ಲ್ಲಿ ತಂದೆ ತಾಯಿ, ಮಗ ಮಗಳು, ಮೊಮ್ಮಗ, ಮೊಮ್ಮಗಳು, ಇವಿಷ್ಟನ್ನು ಮಾತ್ರ ಗುರುತಿಸಲು ಅವಕಾಶವಿದೆ, ಸೊಸೆಯರನ್ನು ಗುರುತಿಸಲು ಅವಕಾಶವಿಲ್ಲ, ಮದುವೆಯಾಗಿ ಗಂಡನ ಮನೆಗೆ ಬಂದ ಮಹಿಳೆಯರು ತಮ್ಮ ತಂದೆ ತಾಯಿ ಮನೆಗೆ ಹೋಗಿ, ಅವರುಗಳು 2002ರಲ್ಲಿ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಗುರುತಿಸಿ ಆ ದಾಖಲೆಗಳನ್ನು ಬಿಎಲ್‌ಓಗಳಿಗೆ ತಾವೇ ತೆಗೆದುಕೊಂಡು ಹೋಗಿ ತಲುಪಿಸಿ ತಮ್ಮ ಮತದಾನದ ಹಕ್ಕನ್ನು ಖಾತ್ರಿಪಡಿಸಿಕೊಳ್ಳಬೇಕಾದ ಅಗತ್ಯ ಉಂಟಾಗಿದೆ . ಇದು ಉದ್ಯೋಗಸ್ಥ ಮಹಿಳೆಯರು, ವಲಸೆ ಹೋದ ಮಹಿಳೆಯರು ಹಾಗೂ ಅನಕ್ಷರಸ್ಥ ಮಹಿಳೆಯರಿಗೆ ಅಪಾರವಾದ ಸಮಸ್ಯೆಯನ್ನು ಹುಟ್ಟುಹಾಕಿದೆ” ಎಂದರು.

ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯನ್ನು ಪ್ರತಿನಿಧಿಸಿದ್ದ ನಿಶಾ ಗೂಳೂರ್‌ರವರು, ಸಾಮಾನ್ಯ ನಾಗರೀಕರಿಗೇ ಮತದಾನದ ಹಕ್ಕು ದೊರೆಯುವ ಖಾತ್ರಿಯಿಲ್ಲದ ಈ ಎಸ್‌ಐಆರ್‌ ಪ್ರಕ್ರಿಯೆ, ಲಿಂಗತ್ವ ಅಲ್ಪಸಂಖ್ಯಾತರಿಗಂತೂ ಯಾವ ರೀತಿಯ ಭದ್ರತೆಯನ್ನೂ ನೀಡುವುದಿಲ್ಲ, ಆದ್ದರಿಂದ ಇದನ್ನು ಬೀದಿಗಿಳಿಸುವ ಹೋರಾಟ ಮಾಡುವ ಮೂಲಕವೇ ವಿರೋಧಿಸಲು ನಿರ್ಧರಿಸಿದ್ದೇವೆ ಎಂದರು. ಆನೇಕಲ್‌ನ ಮಮತಾ ಯಜಮಾನ್‌ರವರು, ಅಧಿಕಾರಿಗಳು ಈ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡುತ್ತಿಲ್ಲ, ಅವರುಗಳ ತಲೆಯಲ್ಲಿ ಇದು “ಬಾಂಗ್ಲಾದೇಶದ ನುಸುಳುಕೋರರನ್ನು” ಹಿಡಿಯುವ ಕೆಲಸ ಎಂಬಂತಹ ವಿಚಾರಗಳು ತುಂಬಿವೆಯೆ ಹೊರತು, ಇದರಿಂದ ಅನಗತ್ಯವಾಗಿ ಸಂಕಷ್ಟಕ್ಕೆ ಈಡಾಗುತ್ತಿರುವ ಜನಸಾಮಾನ್ಯರು ಮತ್ತು ಬಿಎಲ್‌ಓಗಳ ಬಗ್ಗೆ ಸ್ವಲ್ಪವೂ ಸೂಕ್ಷ್ಮಸಂವೇದನೆ ಇಲ್ಲ ಎಂದರು.

ಸ್ತ್ರೀ ಜಾಗೃತಿ ಸಮಿತಿಯ ಗೀತಾ ಮೆನನ್‌ರವರು ಮಾತನಾಡುತ್ತಾ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡುವ ಫಾರ್ಮ್‌ ನಂ.7ನ್ನು ರಾಜಕೀಯ ಪಕ್ಷಗಳ ಹಿಂಬಾಲಕರು ದುರುಪಯೋಗ ಮಾಡುತ್ತಾ, ಅಲ್ಪಸಂಖ್ಯಾತ ಸಮುದಾಯದ ಪ್ರಜೆಗಳ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ, ಇದನ್ನು ತಡೆಯಲು ಯಾವುದೇ ಪ್ರಯತ್ನಗಳನ್ನು ಚುನಾವಣಾ ಆಯೋಗವಾಗಲಿ, ಸರ್ಕಾರವಾಗಲಿ ಮಾಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಜನವಾದಿ ಮಹಿಳಾ ಸಂಘಟನೆಯ ಗೌರಮ್ಮರವರು, ಗ್ರೇಟರ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಸಂದರ್ಭವನ್ನು ಎಸ್‌ಐಆರ್‌ ಜೊತೆಗೆ ಜೋಡಿಸುತ್ತಿರುವ ಸಂಗತಿಯನ್ನು ತಿಳಿಸಿದರು.

ವಿವಿಧ ಜಿಲ್ಲೆಗಳ ಸಾಮಾಜಿಕ ಹೋರಾಟಗಾರ್ತಿಯರು ತಮ್ಮ ಅನುಭವಿಸಿದ ಸಮಸ್ಯೆಗಳನ್ನು ವಿವರಿಸಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಭಾರತೀಯ ಮಹಿಳಾ ಒಕ್ಕೂಟದ ದುರ್ಗಾ ಅವರು, ಮದುವೆಯಾದ ಕಾರಣ ಗಂಡನ ಮನೆ ಕೊಪ್ಪಳದಲ್ಲೇ ಮತದಾನ ಮಾಡಬೇಕು ಎಂದು ಅಧಿಕಾರಿಗಳು ಹೇಳಿದ ಅನುಭವ ಹಂಚಿಕೊಂಡರು. ಅನೇಕ ಮಹಿಳೆಯರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ತಿಳಿಸಿದರು.

ಈ ಎಲ್ಲ ಸಮಸ್ಯೆಗಳನ್ನೂ ಗಮನಕ್ಕೆ ತಂದುಕೊಂಡ ಸಮಾಲೋಚನಾ ಸಭೆಯು ಮುಂದೆ ಏನು ಮಾಡಬಹುದೆಂಬ ಬಗ್ಗೆ ಚರ್ಚೆ ನಡೆಸಿತು. ʼಪ್ರಜೆಗಳು ಸರ್ಕಾರವನ್ನು ಆರಿಸಲು ಅಧಿಕಾರ ನೀಡುವ ಮತದಾನದ ಹಕ್ಕಿನಿಂದ ವಂಚಿಸಿ, ಸರ್ಕಾರವೇ ಪ್ರಜೆಗಳನ್ನು ಆರಿಸುವ ಸಂವಿಧಾನ ವಿರೋಧಿ ಎಸ್‌ಐಆರ್‌ನ್ನು ವಿರೋಧಿಸಬೇಕುʼ ಎಂಬ ಒಮ್ಮತದ ನಿಲುವಿಗೆ ಸಭೆಯು ಬಂದಿತು. ಮುಂದಿನ ದಿನಗಳಲ್ಲಿ, ಜಿಲ್ಲಾಮಟ್ಟದಲ್ಲಿ ಜಾಗೃತಿ ಕಾರ್ಯಾಗಾರಗಳು, ಮಹಿಳೆಯರನ್ನೂ ಒಳಗೊಂಡಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸೋಷಿಯಲ್‌ ಮೀಡಿಯಾ ಅಭಿಯಾನ, ಪ್ರತಿಭಟನೆಗಳು, ಸರ್ಕಾರದ ಮಟ್ಟದಲ್ಲಿ ಈ ವಿಚಾರದಲ್ಲಿ ನಮ್ಮ ಆತಂಕವನ್ನು ಮುಂದಿಟ್ಟು, ಪಾರದರ್ಶಕವಾಗಿ ಯಾವುದೇ ಅರ್ಹ ಮತದಾರರೂ ಪಟ್ಟಿಯಿಂದ ಹೊರಗುಳಿಯದ ಹಾಗೆ ಖಾತ್ರಿಪಡಿಸಬೇಕೆಂದು ಒತ್ತಡ ಹೇರವ ಪ್ರಯತ್ನ ಮೊದಲಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುವ ವಿಚಾರ ಚರ್ಚೆಯಾಯಿತು. ಸಭೆಯಲ್ಲಿ ಚಿಂತಕಿಯರೂ ಹೋರಾಟಗಾರ್ತಿಯರೂ ಆದ ದು.ಸರಸ್ವತಿ, ಕೆ.ಎಸ್.ವಿಮಲ, ಮಧುಭೂಷಣ್‌ ಮೊದಲಾದವರಿದ್ದರು.

ಈ ಕೆಳಗಿನ ನಿರ್ಣಯಗಳನ್ನು ಸಭೆಯು ಕೈಗೊಂಡಿತು:

  1. ಮುಂದಿನ ದಿನಗಳಲ್ಲಿ ಎಲ್ಲಾ ಮಹಿಳಾ ಹಾಗೂ LGBTQI ಹಕ್ಕುಗಳ ಸಂಘಟನೆಗಳು ಎಸ್‌ಐಆರ್‌ ಅನ್ನು ತೀವ್ರವಾಗಿ ವಿರೋಧಿಸಲಿದೆ.
  2. ಎಸ್‌ಐಆರ್‌ ವಿರೋಧಿಸಿ 2026ರ ಮಾರ್ಚ್‌ ತಿಂಗಳಿಡೀ ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
  3. ಈ ವರ್ಷದ ಮಹಿಳಾ ದಿನವನ್ನು ಎಸ್‌ಐಆರ್‌ ಮತ್ತು ಅದು ಮಹಿಳೆಯರು ಹೋರಾಟದ ಮೂಲಕ ಪಡೆದ ಹಕ್ಕುಗಳನ್ನು ಹೇಗೆ ಕಸಿದುಕೊಳ್ಳುತ್ತಿದೆ ಎಂಬ ವಿಷಯವನ್ನು ಚರ್ಚಿಸುವ ಮೂಲಕ ಆಚರಿಸಲಾಗುತ್ತದೆ.
  4. ಹೆಚ್ಚಿನ ಮಾಹಿತಿಗಾಗಿ ಮೈತ್ರೇಯಿ – 9243190014; ಜ್ಯೋತಿ. ಎ – 9449040780; ಪೂರ್ಣ ಆರ್ – 9482851745 ಸಂಪರ್ಕಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

More articles

Latest article

Most read