Friday, February 6, 2026

ಜೆಫ್ರಿ ಎಪ್‌ ಸ್ಟೀನ್‌ ಮತ್ತು ನೋಮ್‌ ಚೋಮ್‌ ಸ್ಕೀ ನಡುವಣ ಈಮೇಲ್‌ ಗಳು!

ವಿಜಯ್‌ ಪ್ರಶಾದ್‌ ರ ಇತ್ತೀಚಿನ ಪುಸ್ತಕ (ನೋಮ್‌ ಚೋಮ್‌ ಸ್ಕಿ ಜತೆಗೆ) ದಿ ವಿದ್‌ ಡ್ರಾವಲ್:‌ ಇರಾಕ್‌, ಲಿಬಿಯಾ, ಅಫಘಾನಿಸ್ತಾನ್‌ ಮತ್ತು ಯು ಎಸ್‌ ಅಧಿಕಾರದ ದುರ್ಬಲತೆ (ನ್ಯೂ ಪ್ರೆಸ್‌, ಆಗಸ್ಟ್‌ 2022) ಇದರ ಈ ಆಯ್ದ ಭಾಗವನ್ನು ಶ್ರೀನಿವಾಸ ಕಾರ್ಕಳ ಕನ್ನಡಕ್ಕೆ ಅನುವಾದಿಸಿದ್ದಾರೆ

ನನಗೆ ದಿಕ್ಕೇ ತೋಚದಂತಾಗಿದೆ.

ಚಿಕ್ಕ ಹುಡುಗನಾಗಿದ್ದಾಗ ನಾನು ಭಯಾನಕ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದೆ. ಈ ಬಗ್ಗೆ ನಾನು ಹಿಂದೆಯೇ ಬರೆದಿದ್ದೆ. ಆ ದೌರ್ಜನ್ಯದ ಘಟನೆಗಳು ದಶಕಗಳ ಬಳಿಕವೂ ನನ್ನನ್ನು ಕಾಡುತ್ತಿವೆ. ಇದೇ ಕಾರಣದಿಂದ, ಯಾರೇ ಆಗಲೀ ಎಳೆಯ ಮಕ್ಕಳನ್ನು ಶೋಷಿಸುವುದನ್ನು ನನಗೆ ಕಂಡರಾಗದು. ಕೇವಲ ನೈತಿಕವಾಗಿ ಮಾತ್ರವಲ್ಲ, ದೈಹಿಕವಾದ ಶೋಷಣೆ ಕೂಡಾ. ಮಕ್ಕಳಿಗೆ ಹಾನಿ ಮಾಡುವ ಯಾರೇ ಆಗಲೀ, ಅವರನ್ನು ಕಂಡಾಗ ನನಗೆ ಭಯವಾಗುತ್ತದೆ.‌ ಮಕ್ಕಳನ್ನು ಶಿಸ್ತಿಗೆ ಒಳಪಡಿಸುವುದನ್ನು ಕೇಳಿದಾಗ ಕೂಡಾ ನಾನು ಕಂಪಿಸಿಬಿಡುತ್ತೇನೆ.

ನನ್ನ ಇಬ್ಬರು ಮಕ್ಕಳು ವಯಸ್ಕರು. ಇನ್ನಿಬ್ಬರು ಚಿಕ್ಕವರು. ಆ ಪ್ರತಿಯೊಬ್ಬರ ದುರ್ಬಲತೆ ಮತ್ತು ಭವಿಷ್ಯದ ಬಗ್ಗೆಯೂ ನನಗೆ ಚಿಂತೆಯಾಗುತ್ತಿರುತ್ತದೆ. ನನ್ನ ಪ್ರಕಾರ ಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ಎರಡನೆ ಚಾನ್ಸ್‌ ಎನ್ನುವುದಿಲ್ಲ.

ನಾನು ಜೆಫ್ರಿ ಎಪ್‌ ಸ್ಟೀನ್‌ ಪ್ರಕರಣವನ್ನು ಓದಿದ್ದೇನೆ. ಯಾಕೆಂದರೆ, ಮಕ್ಕಳು ಮತ್ತು ಯುವ ಮಂದಿಯ ಮೇಲೆ ನಡೆಸಿದ ಅಪಾಯಕಾರಿ ದೌರ್ಜನ್ಯದ ಬಗ್ಗೆ ಓದುವಾಗ ನನ್ನ ಮನಸಿಗೆ ಅಪಾರ ನೋವಾಗುತ್ತಿರುತ್ತದೆ.

ಆದರೆ, ನನ್ನ ಗೆಳೆಯ ಮತ್ತು ಸಹಯೋಗಿ ನೋಮ್‌ ಚೋಮ್ ಸ್ಕಿ ಮತ್ತು ಎಪ್ ಸ್ಟೀನ್ ನಡುವಣ ಈಮೇಲ್‌ ಗಳನ್ನು ಕಡೆಗಣಿಸುವುದು ನನ್ನಿಂದಂತೂ ಕಷ್ಟ ಸಾಧ್ಯ. ಯಾವುದನ್ನು ಓದುವುದು ಸಾಧ್ಯವೋ ಅದನ್ನು ನಾನು ಓದಿದ್ದೇನೆ. ಯಾವುದನ್ನು ನೋಡಬೇಕೋ ಅದನ್ನು ನಾನು ನೋಡಿದ್ದೇನೆ.

ನನ್ನ ಪಾಲಿಗೆ ನೋಮ್‌ ಒಬ್ಬ ಮಹಾನ್‌ ಗುರು. ನಾವು ಜೊತೆಗೂಡಿ ಎರಡು ಪುಸ್ತಕ ರಚಿಸಿದ್ದೇವೆ (ಇತ್ತೀಚಿನದ್ದು ಅವರ ಅಂತಿಮ ಪುಸ್ತಕ). ಎಪ್ ಸ್ಟೀನ್‌ ಜತೆಗೆ ಅವರು ಪತ್ರ ವ್ಯವಹಾರ ನಡೆಸುತ್ತಿದ್ದ ದಿನಗಳಲ್ಲಿಯೇ ಆ ಎರಡೂ ಪುಸ್ತಕಗಳನ್ನು ಬರೆಯಲಾಗಿತ್ತು!

ನೋಮ್‌ ಚೋಮ್ ಸ್ಕಿ

ನಾವು ನಡೆಸಿದ ಅನೇಕ ಚರ್ಚೆಗಳ ಯಾವುದೇ ಸಂದರ್ಭದಲ್ಲಿಯೂ ಆ ಪತ್ರವ್ಯವಹಾರಗಳ ವಿಷಯವಾಗಲೀ ಅಥವಾ ಅವರು ಎಪ್‌ ಸ್ಟೀನ್‌ ಅನ್ನು ಭೇಟಿಯಾಗುತ್ತಿದ್ದ ವಿಚಾರವಾಗಲೀ ಪ್ರಸ್ತಾಪ ಆಗಿರಲಿಲ್ಲ. ನೋಮ್‌ ಮತ್ತು ನಾನು ʼಯು ಎಸ್‌ ಸಾಮ್ರಾಜ್ಯವಾದ ಮತ್ತು ಅದರ ಅಪರಾಧಗಳುʼ ಹಾಗೂ ಆಗಿನ ಕ್ಯೂಬಾದ ಬಗ್ಗೆ ಮಾತನಾಡಿದ್ದೆವು. ಈ ರಾಜಕೀಯ ವಿಷಯಗಳನ್ನು ಹೊರತುಪಡಿಸಿ ನಾವು ಮಾತನಾಡಿದ ಇತರ ವೈಯಕ್ತಿಕ ಸಂಗತಿಗಳೆಂದರೆ, ನಾಯಿಗಳ ಬಗೆಗಿನ ಪ್ರೀತಿ ಮತ್ತು ಅರೆಬಿಕ್‌ ಭಾಷೆ ಮಾತ್ರ.

ಎಪ್‌ ಸ್ಟೀನ್‌ ನೊಂದಿಗಿನ ಸಂಬಂಧದ ಬಗ್ಗೆ ನೋಮ್‌ ಮಾತನಾಡುವುದಾಗಲೀ, ಬರೆಯುವುದಾಗಲೀ ಅಸಾಧ್ಯವಾಗಿರುವುದರಿಂದ ವಿಷಯ ತುಂಬಾ ಗಂಭೀರವಾಗಿದೆ. ಆತನ ಪರವಾಗಿ ಹೇಳುವುದಕ್ಕೆ ಏನೂ ಇಲ್ಲ. ಫೋಟೋಗಳು ಮತ್ತು ಈಮೇಲ್‌ ಗಳು ಕಾಣಿಸಿಕೊಂಡಾಗ ಎಪ್‌ ಸ್ಟೀನ್‌ ನ ಶಿಶುಕಾಮದ ಬಗ್ಗೆ ತಕ್ಷಣ ಹೇಸಿಗೆಯೆನಿಸಿತು; ಹಾಗೆಯೇ ಆತನೊಂದಿಗೆ ನೋಮ್‌ ನ ಗೆಳೆತನದ ಬಗ್ಗೆಯೂ. ನನ್ನ ಪ್ರಕಾರ ಇದಕ್ಕೆ ಸಮರ್ಥನೆ ಎನ್ನುವುದು ಇಲ್ಲ, ಈ ಆಕ್ರೋಶವನ್ನು ವಿವರಿಸಬಲ್ಲ ಸಂದರ್ಭಗಳೂ ಇಲ್ಲ.

ಈಗ ಬಹಿರಂಗಗೊಂಡಿರುವ ವಿಷಯಗಳ ಬಗ್ಗೆ, ನಮಗಿಬ್ಬರಿಗೂ ಸ್ನೇಹಿತನಾಗಿರುವ ಅಲೆಕ್ಸಾಂಡರ್‌ ಕಾಕ್‌ ಬರ್ನ್‌ ನ ಅಭಿಪ್ರಾಯ ಏನಿರಬಹುದು ಎಂದು ನಾನು ʼಕೌಂಟರ್‌ ಪಂಚ್‌ʼ ನ ಸಂಪಾದಕ ಜೆಫ್ರಿ ಸೈಂಟ್‌ ಕ್ಲೇರ್‌ ನನ್ನು ಕೇಳಿದೆ. ʼಓರ್ವ ಅಲ್ಟ್ರಾ ಜಿಯೋನಿಸ್ಟ್‌ ಮತ್ತು ಪ್ರಾಯಶಃ ಇಸ್ರೇಲಿ ಏಜಂಟ್‌ ಆಗಿರುವ ವ್ಯಕ್ತಿಯೊಂದಿಗೆ ನೋಮ್‌ ಅಷ್ಟೊಂದು ನಿಕಟ ಗೆಳೆತನ ಹೊಂದಿರುವುದನ್ನು ತಿಳಿದು ಅಲೆಕ್ಸ್‌ ಗೆ ಸಂಕಟವಾಗಬಹುದು, ತುಂಬಾ ಆಳವಾಗಿ ಯೋಚಿಸಿ, ತರ್ಕ ಆಧಾರಿತವಾಗಿ ತೀರ್ಮಾನಕ್ಕೆ ಬರುವ ನೋಮ್‌ ನಂತಹ ವ್ಯಕ್ತಿಯ ಮಟ್ಟಿಗೆ ಇದೊಂದು ಗಂಭೀರವಾಗಿ ಅತ್ಯಂತ ಕೆಟ್ಟ ತೀರ್ಮಾನʼ ಎಂದು ಜೆಫ್ರಿ ಸೈಂಟ್‌ ಕ್ಲೇರ್‌ ಬರೆದ.

ಎಪ್‌ ಸ್ಟೀನ್‌ ಓರ್ವ ತೀವ್ರ ಬಲಪಂಥೀಯ ಮತ್ತು ಜಿಯೋನಿಸ್ಟ್‌, ಅಧಿಕಾರದಲ್ಲಿರುವ ಪುರುಷರು ಮತ್ತು ಅವರ ಪ್ರಭಾವವನ್ನು ಒಟ್ಟುಗೂಡಿಸಿ, ಜಗತ್ತನ್ನು ಅವರ ಪಾಲಿಗೆ ಸ್ವರ್ಗವನ್ನಾಗಿಯೂ ನಮ್ಮ ಪಾಲಿಗೆ ನರಕವನ್ನಾಗಿಯೂ ಮಾಡಲು ಉದ್ದೇಶಿಸಿದ ವ್ಯಕ್ತಿ.

ವಿಜಯ್‌ ಪ್ರಶಾದ್‌ ಮತ್ತು ಚೋಮ್ ಸ್ಕಿ

ನೋಮ್‌ ನನ್ನು ಆತ ಎಹೂದ್‌ ಬರಾಕ್‌ ಗೆ ಪರಿಚಯಿಸಿದ್ದ. ಈ ಎಹೂದ್‌ ಬರಾಕ್‌ 2000 ನೇ ಇಸವಿಯ ಕಾಲದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದ, ಇಸ್ರೇಲಿ ಪ್ರಧಾನಿಯಾಗಿದ್ದಾಗ ಯುದ್ಧಾಪರಾಧಗಳನ್ನು ನಡೆಸಿದ್ದ ವ್ಯಕ್ತಿ. 2009 ರಲ್ಲಿ ಬರಾಕ್‌, ಗಾಜಾದಲ್ಲಿ ಭಯಾನಕ ಯುದ್ಧ ನಡೆಸಿ 1500 ಪ್ಯಾಲೆಸ್ತೀನಿಯನ್ನರನ್ನು ಬರ್ಬರವಾಗಿ ಕೊಂದಿದ್ದ. ಬರಾಕ್‌ ನೇತೃತ್ವದ ಇಸ್ರೇಲಿ ಸರಕಾರ ಯುದ್ಧಾಪರಾಧ ಎಸಗಿದೆ ಎಂದು ರಿಚರ್ಡ್‌ ಗೋಲ್ಡ್‌ ಸ್ಟನ್‌ ಅಧ್ಯಕ್ಷತೆಯ ಯು ಎನ್‌ ತನಿಖಾ ಸಮಿತಿ ಘೋಷಿಸಿತ್ತು. ಆ ವರ್ಷ ಬರಾಕ್‌ ಯುನೈಟೆಡ್‌ ಕಿಂಗ್‌ ಡಂ ಗೆ ಭೇಟಿ ನೀಡಿದಾಗ 1988 ರ ಕ್ರಿಮಿನಲ್‌ ಜಸ್ಟಿಸ್‌ ಕಾಯಿದೆಯ ಅಡಿಯಲ್ಲಿ ವಾರಂಟ್‌ ಹೊರಡಿಸುವಂತೆ ಆಗ್ರಹಿಸಲು ಸಿಟಿ ವೆಸ್ಟ್‌ ಮಿನಿಸ್ಟರ್‌ ಮುಂದೆ ಸಾಲಿಸಿಟರ್‌ ಗಳು ಕೇಸು ದಾಖಲಿಸಿದ್ದರು. ಈ ಕಾಯಿದೆಯ ಪ್ರಕಾರ ಯುದ್ಧಾಪರಾಧಗಳ ಪ್ರಕರಣಗಳಲ್ಲಿ ಸೀಮಾತೀತವಾಗಿ ಯಾವುದೇ ದೇಶ ಕ್ರಮ ಜರುಗಿಸಬಹುದು. ಆ ಯಾವುದೇ ವಾರಂಟ್‌ ಕಾರ್ಯಗತವಾಗಲಿಲ್ಲ ಎನ್ನುವುದು ಬೇರೆ ವಿಚಾರ.

2015 ರಲ್ಲಿ, ಅದೂ ಘಟನೆಗಳು ನಡೆದ ಆರು ವರ್ಷಗಳ ಬಳಿಕ ಒಬ್ಬ ಯುದ್ಧಾಪರಾಧಿಯನ್ನು ನೋಮ್‌ ಯಾಕೆ ಭೇಟಿಯಾಗುತ್ತಾರೆ? ನಮ್ಮ ಮೊದಲ ಪುಸ್ತಕ ʼದಿ ವಿದ್‌ ಡ್ರಾವಲ್‌ʼ ಗಾಗಿ ನಾನು ನೋಮ್‌ ಬಳಿ ಒಂದು ಪ್ರಶ್ನೆ ಕೇಳಿದೆ. “ಅವಕಾಶ ಸಿಕ್ಕರೆ, ನೀವು ಹೋಗಿ ಹೆನ್ರಿ ಕಿಸಿಂಜರ್‌ ರನ್ನು ಭೇಟಿಯಾಗುತ್ತಿದ್ದಿರಾ?” ಎಂಬುದು ಆ ಪ್ರಶ್ನೆಯಾಗಿತ್ತು. ಅದಕ್ಕೆ ಅವರು ಜೋರಾಗಿ ನಕ್ಕು, “ಇಲ್ಲ” ಎಂದರು. ಇಷ್ಟಾದ ಮೇಲೂ, ನನಗೆ ಗೊತ್ತಿಲ್ಲದೆಯೇ, ಹಿಂದೆ ಅವರು ಒಬ್ಬ ಯುದ್ಧಾಪರಾಧಿಯನ್ನು ಭೇಟಿಯಾಗಿದ್ದರು!

ಇಂತಹ ಮನಸಿನ ವ್ಯಕ್ತಿಯೊಂದಿಗೆ ಅಷ್ಟೊಂದು ಸರಾಗವಾಗಿ ಸ್ನೇಹ ಬೆಳೆಸುವುದು ಯಾಕೆ? ಶಿಶುಕಾಮಿಯೊಬ್ಬನಿಗೆ ಆತನ ಅಪರಾಧಗಳ ಬಗ್ಗೆ ಸಾಂತ್ವನ ನೀಡುವುದಾಗಲೀ, ಸಲಹೆ ನೀಡುವುದಾಗಲೀ ಯಾಕೆ? ನನಗೆ ಭಯವಾಗಿದೆ, ನಾನು ನಿಜಕ್ಕೂ ಆಘಾತಕ್ಕೆ ಒಳಗಾಗಿದ್ದೇನೆ.

(ವಿಜಯ್‌ ಪ್ರಶಾದ್‌ ರ ಇತ್ತೀಚಿನ ಪುಸ್ತಕ (ನೋಮ್‌ ಚೋಮ್‌ ಸ್ಕಿ ಜತೆಗೆ) ದಿ ವಿದ್‌ ಡ್ರಾವಲ್:‌ ಇರಾಕ್‌, ಲಿಬಿಯಾ, ಅಫಘಾನಿಸ್ತಾನ್‌ ಮತ್ತು ಯು ಎಸ್‌ ಅಧಿಕಾರದ ದುರ್ಬಲತೆ (ನ್ಯೂ ಪ್ರೆಸ್‌, ಆಗಸ್ಟ್‌ 2022).

(Vijay Prashad’s most recent book (with Noam Chomsky) is The Withdrawal: Iraq, Libya, Afghanistan and the Fragility of US Power (New Press, August 2022).

ಕನ್ನಡಾನುವಾದ : ಶ್ರೀನಿವಾಸ ಕಾರ್ಕಳ

More articles

Latest article

Most read