ಅಮೆರಿಕದಲ್ಲಿ ಭಾರತೀಯ ಐಟಿ ಕಂಪನಿಗಳಿಗೆ ಅಘಾತ : ಇನ್ಫೋಸಿಸ್‌, ಟಿಸಿಎಸ್‌ ಸೇರಿ 8 ಕಂಪನಿಗಳ ಗ್ರೀನ್‌ಕಾರ್ಡ್‌ ಪ್ರಕ್ರಿಯೆಗೆ ತಡೆ

ವಾಷಿಂಗ್ಟನ್ ಅ. 9: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಭಾರತೀಯ ಐಟಿ ಕಂಪನಿಗಳಾದ ಇನ್ಫೋಸಿಸ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (TCS), ವಿಪ್ರೋ ಮತ್ತು ಎಚ್‌ಸಿಎಲ್‌ಟೆಕ್‌ ಸೇರಿದಂತೆ ಎಂಟು ಪ್ರಮುಖ ತಂತ್ರಜ್ಞಾನ ಕಂಪನಿಗಳ ಉದ್ಯೋಗಾಧಾರಿತ ಗ್ರೀನ್‌ಕಾರ್ಡ್‌ ಪ್ರಕ್ರಿಯೆಗೆ ತಡೆ ವಿಧಿಸಿದೆ. ಅಮೆರಿಕದ ಕಾರ್ಮಿಕ ಇಲಾಖೆಯು ಅಕ್ಟೋಬರ್‌ 8ರಂದು ಈ ಕ್ರಮ ಪ್ರಕಟಿಸಿದ್ದು, ವಿದೇಶಿ ಉದ್ಯೋಗಿಗಳ ನೇಮಕಾತಿಯಲ್ಲಿ ನಿಯಮಗಳ ದುರ್ಬಳಕೆ ನಡೆದಿದೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶ ಹೊಂದಿದೆ ಎಂದು ವರದಿಗಳು ತಿಳಿಸಿವೆ.

ಇನ್ಫೋಸಿಸ್‌, ಟಿಸಿಎಸ್‌, ವಿಪ್ರೋ ಮತ್ತು ಎಚ್‌ಸಿಎಲ್‌ಟೆಕ್‌ ಜೊತೆಗೆ ಮೈಕ್ರೋಸಾಫ್ಟ್‌, ಅಡೋಬ್‌, ಕಾಗ್ನಿಜೆಂಟ್‌ ಮತ್ತು ಕ್ಯಾಪ್‌ಜೆಮಿನಿ ಕಂಪನಿಗಳೂ ಈ ಕ್ರಮದ ವ್ಯಾಪ್ತಿಯಲ್ಲಿವೆ ಎಂದು ವರದಿಯಾಗಿದೆ.

ಅಮೆರಿಕದ ಉದ್ಯೋಗಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಟ್ರಂಪ್‌ ಆಡಳಿತದ ನಿಲುವಾಗಿದೆ. ಕೆಲವು ಕಂಪನಿಗಳು ಸ್ಥಳೀಯ ಉದ್ಯೋಗಿಗಳಿಗೆ ಸಮರ್ಪಕ ಅವಕಾಶ ನೀಡದೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ ಮತ್ತು ಕಾರ್ಮಿಕ ಪ್ರಮಾಣೀಕರಣ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಉದ್ಯೋಗಾಧಾರಿತ ಗ್ರೀನ್‌ಕಾರ್ಡ್‌ ಪಡೆಯುವ ಪ್ರಕ್ರಿಯೆಯಲ್ಲಿ PERM ಎಂದು ಕರೆಯಲಾಗುವ ಕಾರ್ಮಿಕ ಪ್ರಮಾಣೀಕರಣ ಪ್ರಮುಖ ಹಂತವಾಗಿದೆ. ಈ ಹಂತದಲ್ಲಿ ಕಂಪನಿಗಳು ನಿರ್ದಿಷ್ಟ ಹುದ್ದೆಗೆ ಅಮೆರಿಕದ ಅರ್ಹ ಉದ್ಯೋಗಿಗಳು ಲಭ್ಯವಿಲ್ಲ ಎಂಬುದನ್ನು ನಿಯಮಾನುಸಾರ ತೋರಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ತಡೆ ವಿಧಿಸಿರುವುದರಿಂದ ಸಂಬಂಧಿತ ಕಂಪನಿಗಳ ಮೂಲಕ ಗ್ರೀನ್‌ಕಾರ್ಡ್‌ ಪಡೆಯಲು ಕಾಯುತ್ತಿರುವ ಉದ್ಯೋಗಿಗಳ ಅರ್ಜಿಗಳು ವಿಳಂಬವಾಗುವ ಸಾಧ್ಯತೆಯಿದೆ.

ಈ ಬೆಳವಣಿಗೆಯಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಐಟಿ ಉದ್ಯೋಗಿಗಳಲ್ಲಿ ಆತಂಕ ಮೂಡಿದೆ. ವಿಶೇಷವಾಗಿ ಗ್ರೀನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವವರು ಮತ್ತು ಮುಂದಿನ ಹಂತಕ್ಕೆ ಕಾಯುತ್ತಿರುವವರು ತೊಂದರೆ ಎದುರಿಸಬಹುದು. ಆದರೆ, ಈ ಕ್ರಮದಿಂದ H-1B ವೀಸಾದಲ್ಲಿರುವ ಉದ್ಯೋಗಿಗಳ ವೀಸಾಗಳು ಈ ಆದೇಶದಿಂದ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಈಗಾಗಲೇ ಗ್ರೀನ್‌ಕಾರ್ಡ್‌ ಪಡೆದವರ ಖಾಯಂ ನಿವಾಸದ ಹಕ್ಕು ಕೂಡ ಈ ಪ್ರಕಟಣೆಯೊಂದರಿಂದ ರದ್ದಾಗುವುದಿಲ್ಲ.

ಭಾರತೀಯ ಐಟಿ ಉದ್ಯಮದ ಸಂಘಟನೆಯಾದ ನಾಸ್ಕಾಂ, ಅಮೆರಿಕದಲ್ಲಿನ ಭಾರತೀಯ ತಂತ್ರಜ್ಞಾನ ಕಂಪನಿಗಳು ಸ್ಥಳೀಯ ನೇಮಕಾತಿಯನ್ನು ಹೆಚ್ಚಿಸಿವೆ ಮತ್ತು H-1B ವೀಸಾಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿವೆ ಎಂದು ಹೇಳಿದೆ. ಈ ಕ್ರಮದಿಂದ ಉದ್ಯೋಗಿಗಳ ಮೇಲೆ ಎಷ್ಟು ಪರಿಣಾಮ ಉಂಟಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಅಮೆರಿಕ ಸರ್ಕಾರದ ಸ್ಪಷ್ಟನೆ ಮತ್ತು ಕಂಪನಿಗಳ ಮುಂದಿನ ಕ್ರಮಗಳನ್ನು ಅವಲಂಬಿಸಿರಲಿದೆ.

More articles

Latest article

Most read