ವಿದೇಶಿ ಪ್ರವಾಸಿಗರು ಕಂಡ ಭಾರತದ ಬೌದ್ಧ ಸಂಸ್ಕೃತಿ | ಭಾಗ- 2‌

ಭಾರತದ ಎಲ್ಲ ಕಡೆಗಳಲ್ಲಿಯೂ ರಾಜರುಗಳೆಲ್ಲ ಬೌದ್ಧ ಧರ್ಮದಲ್ಲಿ ಗಾಢವಾದ ನಂಬಿಕೆ ಇಟ್ಟಿದ್ದಾರೆ.  ಭಿಕ್ಷುಗಳಿಗೆ ಊಟ ಬಡಿಸುತ್ತಾರೆ. ಊಟವಾದ ಮೇಲೆ ಜಮಖಾನಗಳ ಮೇಲೆ ಭಿಕ್ಷುಗಳಿಂದ ದೂರದಲ್ಲಿ ಬಹು ವಿನಯಪೂರ್ವಕವಾಗಿ ಕುಳಿತುಕೊಳ್ಳುತ್ತಾರೆ. ಈ ಮರ್ಯಾದೆ ಬುದ್ಧರ ಕಾಲದಿಂದ ಇಲ್ಲಿಯವರೆಗೆ ಅನೂಚಾನವಾಗಿ ನಡೆದು ಬಂದಿದೆ. ರಾಜ ಮಹಾರಾಜರಿಂದ ಹಿಡಿದು ಜನಸಾಮಾನ್ಯರವರೆಗೆ ಬೌದ್ಧ ಧರ್ಮದಲ್ಲಿ ಎಷ್ಟೊಂದು ನಿಷ್ಠೆ ಇರಿಸಿದ್ದಾರೆಂಬುದನ್ನು ಫಾಹಿಯಾನ್ ಹೀಗೆ ದಾಖಲಿಸಿದ್ದಾನೆ –ಡಾ. ನಾಗೇಶ್‌ ಮೌರ್ಯ, ಬೌದ್ಧ ಚಿಂತಕರು.

ಗಾಂಧಾರ ದೇಶದಿಂದ  ದಕ್ಷಿಣ ದಿಕ್ಕಿಗೆ ನಾಲ್ಕು ದಿನಗಳು ಪ್ರಯಾಣ ಮಾಡಿ ನಾವು ಪೆಷಾವರ್ (ಈಗಿನ ಪಾಕಿಸ್ತಾನದಲ್ಲಿದೆ ) ನಾಡಿಗೆ ಬಂದೆವು.  ಇಲ್ಲಿಗೆ ಬುದ್ಧರು ತಮ್ಮ ಹತ್ತು ಜನ ಅರಹಂತ ಶಿಷ್ಯರೊಡನೆ ಬಂದಿದ್ದಾಗ ಅವರಲ್ಲಿ ಆನಂದನಿಗೆ “ನಾನು ಸತ್ತ ಮೇಲೆ ಈ ದೇಶದಲ್ಲಿ ಮುಂದೆ ‘ಕಾನಿಷ್ಕ’ನೆಂಬ ದೊರೆ ಹುಟ್ಟಿ ಬರುತ್ತಾನೆ. ಅವನು ಇಲ್ಲೊಂದು ಸ್ತೂಪವನ್ನು ನಿರ್ಮಿಸುವನು” ಎಂದಿದ್ದರು. ಅದರಂತೆಯೇ ನೂರಾರು ಅಡಿಗಳಿಗಿಂತ ಎತ್ತರವಾದ ಸ್ತೂಪವನ್ನು ಕಾನಿಷ್ಕನು ನಿರ್ಮಿಸಿದನು ಎಂದು ಇಲ್ಲಿನ ಜನರು ಬಲವಾಗಿ ನಂಬುತ್ತಾರೆ. “ನಾನು ಇದುವರೆಗೂ ನೋಡಿದ ಸ್ತೂಪಗಳಲ್ಲಿ ಮತ್ತು ವಿಹಾರಗಳಲ್ಲಿ ಇದನ್ನು ಮೀರಿಸುವುದು ಯಾವುದು ಇಲ್ಲ.  ಇದು ಭವ್ಯವೂ,  ಅದ್ಭುತವೂ,  ರಮ್ಯವೂ ಆಗಿದೆ.  ಜಂಬೂ ದ್ವೀಪದಲ್ಲೆಲ್ಲ ಇರುವ ಸ್ತೂಪಗಳಲ್ಲಿ ಇದಕ್ಕೆ ಪ್ರಥಮ ಸ್ಥಾನವೆಂದು ಹೇಳುತ್ತಾರೆ“.

ಬುದ್ಧರು ಬಳಸಿದ ಭಿಕ್ಷಪಾತ್ರೆಯೂ ಈ ನಾಡಿನಲ್ಲಿದೆ. ಇದು ಐದನೆಯ ಒಂದಂಗುಲ ಮಂದವಾಗಿದೆ, ಥಳ ಥಳ ಹೊಳೆಯುತ್ತದೆ ಎಂಬ ಬಹಳ ವಿಶಿಷ್ಟವಾದ ಮಾಹಿತಿಯನ್ನು ಫಾಹಿಯಾನ್ ಕೊಡುತ್ತ ಹೋಗುತ್ತಾನೆ.  ಮುಂದೆ ಪಶ್ಚಿಮಕ್ಕೆ ಪ್ರಯಾಣ ಮಾಡಿದಾಗ ‘ನಗರ ಹಾರʼ (ಜಿಲಾಲಬಾದ್) ಎಂಬ ದೇಶದ ಗಡಿ ಸಿಗುತ್ತದೆ ‘ಹೀರೊ‘ಎಂಬ ನಗರದಲ್ಲಿ ಬುದ್ಧನ ತಲೆಬುರುಡೆ ಇರುವ ವಿಹಾರವಿದೆ. ಇದಕ್ಕೆ ಚಿನ್ನದ ತಗಡನ್ನು ಹೊದಿಸಿ ಸಪ್ತರತ್ನಗಳಿಂದ ಅಲಂಕರಿಸಿದ್ದಾರೆ.  ಈ ದೇಶದ ದೊರೆ  ಇದನ್ನು ಬಹಳ ಶ್ರದ್ಧೆಯಿಂದ ಪ್ರಾರ್ಥಿಸುತ್ತಾನೆ.  ಇಲ್ಲಿಂದ ಉತ್ತರ ದಿಕ್ಕಿಗೆ ಪ್ರಯಾಣ ಮಾಡಿ ನಗರಹಾರದ ರಾಜಧಾನಿಗೆ ಬಂದೆವು.  ಅಲ್ಲಿ ‘ಬುದ್ಧನ ಹಲ್ಲು‘ ಇರುವ ಸ್ಥಳದಲ್ಲಿ ಒಂದು ಸ್ತೂಪವನ್ನು ನಿರ್ಮಿಸಿ ಅದಕ್ಕೆ  ಶ್ರದ್ಧೆಯಿಂದ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಅಲ್ಲಿಂದ ಒಂದು ಕಣಿವೆಯನ್ನು ಹಾದು ಬಂದು ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡಿದೆವು. ಅಲ್ಲಿ ನಮಗೆ ಒಂದು ವಿಹಾರ ಸಿಕ್ಕಿತು.  ಇಲ್ಲಿಯೂ ಬುದ್ಧನ ಉಡುಪುಗಳನ್ನು ಇಟ್ಟು ಶ್ರದ್ಧೆಯಿಂದ ಪೂಜಿಸುತ್ತಾರೆ.  ಇಲ್ಲಿಂದ ದಕ್ಷಿಣಕ್ಕೆ ಹೋದರೆ ಒಂದು ಗುಹೆ ಸಿಗುತ್ತದೆ. ಅಲ್ಲಿ ಬುದ್ಧನು ತನ್ನ ತಲೆಯನ್ನು ಬೋಳಿಸಿಕೊಂಡ ಮತ್ತು ಉಗುರುಗಳನ್ನು ಕತ್ತರಿಸಿಕೊಂಡ ಸ್ಥಳವಿದೆ. ಅಲ್ಲದೆ ಬುದ್ಧನು ಇಲ್ಲಿ ತನ್ನ ಶಿಷ್ಯರ ಸಹಾಯದಿಂದ ಎಂಬತ್ತು ಅಡಿ ಎತ್ತರವಿರುವ ಮಾದರಿ ಸ್ತೂಪವನ್ನು ನಿರ್ಮಿಸಿದ್ದಾನೆ.  ಇಲ್ಲಿ ನೂರಾರು ಬೌದ್ಧ ಭಿಕ್ಷುಗಳಿದ್ದಾರೆ. 

ಇಲ್ಲಿಂದ ಮುಂದಕ್ಕೆ ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಿದರೆ, ಫಲನಾ ಅಥವಾ ಬನ್, ಎಂಬ ದೇಶ ಸಿಗುತ್ತದೆ.  ಇಲ್ಲಿಯೂ ಹೀನಯಾನದ ಮೂರುಸಾವಿರ ಭಿಕ್ಷುಗಳಿದ್ದಾರೆ. ಇಲ್ಲಿಂದ ಪೂರ್ವ ದಿಕ್ಕಿಗೆ ಪ್ರಯಾಣ ಮಾಡಿ ಇಂಡಸ್ ನದಿಯನ್ನು ದಾಟಿದರೆ ಭೀಡಾ ಎಂಬ ನಾಡು ಸಿಗುತ್ತದೆ. ಇಲ್ಲಿ ಬೌದ್ಧ ಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿದೆ.  ಚೀನಾ ದೇಶದವರಾದ ನಾವು ಬಂದದ್ದನ್ನು ಕೇಳಿ ಜನರು ಅಚ್ಚರಿ ಪಟ್ಟು “ಸಂಸಾರವನ್ನು ತೊರೆಯುವುದು ನಮ್ಮ ಧರ್ಮದ ತಿರುಳೆಂದು ಪರದೇಶಿಯರಿಗೆ ಹೇಗೆ ಗೊತ್ತಾಯಿತು! ಅಂತಹ ಧರ್ಮವನ್ನು ಅರಸಿ ಇಷ್ಟು ದೂರ ಹೇಗೆ ಬಂದರು” ಎಂದು ಮಾತಾಡಿಕೊಂಡರು. ಅವರು ನಮಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಟ್ಟರು.  ಅವರು ಧರ್ಮಕ್ಕನುಸಾರವಾಗಿ ನಮಗೆ ಗೌರವ ನೀಡಿದರು ಎಂದು ಹೇಳುವಾಗ ಇಲ್ಲಿಯ ಜನರು ಎಷ್ಟು ಧರ್ಮ ನಿಷ್ಠರಾಗಿದ್ದರು, ಸುಸಂಸ್ಕೃತರಾಗಿದ್ದರು,  ದಯಾಳುಗಳಾಗಿದ್ದರು,  ಕರುಣಾ ಮೈತ್ರಿ ಮುದಿತಾಗಳನ್ನು ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ನಾವು ಅಂದಾಜಿಸಬಹುದು. 

ಇಲ್ಲಿಂದ ಆಗ್ನೇಯ ದಿಕ್ಕಿಗೆ ಪ್ರಯಾಣ ಮಾಡುತ್ತಾ ಹೋದೆವು. ದಾರಿಯಲ್ಲಿ ವಿಹಾರಗಳು ಸಿಕ್ಕವು.  ಈ ವಿಹಾರಗಳಲ್ಲಿ ಅಸಂಖ್ಯಾತ ಭಿಕ್ಷುಗಳನ್ನು ಕಂಡೆವು.  ಈ ವಿಹಾರಗಳನ್ನು ನೋಡುತ್ತಾ ಪ್ರಯಾಣ ಮಾಡಿ ಸಾಗುವಾಗ “ಮಥುರಾ“ ಸಿಕ್ಕಿತು.  ಇಲ್ಲೆಲ್ಲಾ ಬೌದ್ಧ ಧರ್ಮ ಬಹಳ ಪ್ರಚಾರದಲ್ಲಿತ್ತು.  ಭಾರತದ ಎಲ್ಲ ಕಡೆಗಳಲ್ಲಿಯೂ ರಾಜರುಗಳೆಲ್ಲ ಬೌದ್ಧ ಧರ್ಮದಲ್ಲಿ ಗಾಢವಾದ ನಂಬಿಕೆ ಇಟ್ಟಿದ್ದಾರೆ.  ಭಿಕ್ಷುಗಳಿಗೆ ಊಟ ಬಡಿಸುತ್ತಾರೆ. ಊಟವಾದ ಮೇಲೆ ಜಮಖಾನಗಳ ಮೇಲೆ ಭಿಕ್ಷುಗಳಿಂದ ದೂರದಲ್ಲಿ ಬಹು ವಿನಯಪೂರ್ವಕವಾಗಿ ಕುಳಿತುಕೊಳ್ಳುತ್ತಾರೆ. ಈ ಮರ್ಯಾದೆ ಬುದ್ಧರ ಕಾಲದಿಂದ ಇಲ್ಲಿಯವರೆಗೆ ಅನೂಚಾನವಾಗಿ ನಡೆದು ಬಂದಿದೆ. ರಾಜ ಮಹಾರಾಜರಿಂದ ಹಿಡಿದು ಜನಸಾಮಾನ್ಯರವರೆಗೆ ಬೌದ್ಧ ಧರ್ಮದಲ್ಲಿ ಎಷ್ಟೊಂದು ನಿಷ್ಠೆ ಇರಿಸಿದ್ದಾರೆಂಬುದನ್ನು ಫಾಹಿಯಾನ್ ಹೀಗೆ ದಾಖಲಿಸಿದ್ದಾನೆ

(ಮುಂದುವರೆಯುವುದು………)

ಡಾ. ನಾಗೇಶ್ ಮೌರ್ಯ

ಬೌದ್ಧ ಚಿಂತಕರು.

ಇದನ್ನೂ ಓದಿ- ಮಡಿವಾಳ ಮಾಚಿದೇವ: ಅಗಸನೋರ್ವ ಬಸವಣ್ಣನಿಗೆ `ತಂದೆ’ ಎನಿಸಿದ ಪರಿ…

More articles

Latest article

Most read