ಧರ್ಮ, ಜಾತಿ ಹೆಸರಿನಲ್ಲಿ ಸಚಿವ ಜಮೀರ್ ಅಹಮದ್ ಖಾನ್ಗೆ ನಿಂದನೆ ಆರೋಪ ಹಿನ್ನೆಲೆ ರೌಡಿ ಶೀಟರ್, ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಚಾಮರಾಜಪೇಟೆ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ಖಾನ್ ‘ಕಾಲಿಯಾ’ ಪದ ಬಳಕೆ ವಿರುದ್ಧ ಪ್ರತಿಕ್ರಿಯಿಸುವ ಬರದಲ್ಲಿ ಪುನೀತ್ ಕೆರೆಹಳ್ಳಿ ಜಮೀರ್ ಅಹ್ಮದ್ ಖಾನ್ ವಿರುದ್ಧ ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ ಮಾಡಿದ್ದಾನೆ. ಜೊತೆಗೆ ರಾಜ್ಯದಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ್ದಾನೆ ಎಂದು ಎಫ್ಐಆರ್ ದಾಖಲಿಸಲಾಗಿದೆ.
ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಹೇಳಿಕೆ ನೀಡಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಜೊತೆಗೆ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರೆ. ಹಾಗಾಗಿ ಕೂಡಲೇ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಎಂದು ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ದೂರಿನಲ್ಲಿ ಉಲ್ಲೇಖಿಸಿದ್ದರು.
ನನ್ನ ಹೇಳಿಕೆಯಿಂದ ಜೆಡಿಎಸ್ ಮುಖಂಡರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಸಚಿವ ಜಮೀರ್ ಅವರು ಕ್ಷಮಾಪಣೆ ಕೇಳಿದರು ಬಿಡದ ಪುನೀತ್ ಕೆರೆಹಳ್ಳಿ ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಕೋಮುದ್ವೇಷ ಹರಡಲು ಮುಂದಾಗಿದ್ದ. ನಂತರ ಕೇಸ್ ದಾಖಲಾಗಿ FIR ಕೂಡ ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರಿನ ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಪುನೀತ್ ಕೆರೆಹಳ್ಳಿ ವಿಡಿಯೋದಲ್ಲಿ, ಪತ್ರಕರ್ತರು ಪ್ರಶ್ನೆ ಮಾಡಿದರೆ ಕಪ್ಪಗಿದ್ದರೆ ಕರಿಯಾ ಎಂದೆ ಎಂದು ದುರಹಂಕಾರದ ಉತ್ತರ ನೀಡುತ್ತೀರಾ. ಲೇಯ್ ತುರ್ಕಾ ಜಮೀರ್ ಅಹ್ಮದ್ ಖಾನ್ ನಿಮ್ಮ ಅಲ್ಲಾ ಯಾವ ಬಣ್ಣ ಇದ್ದೀಯಾ ಎಂದು ಹೇಳುತ್ತೀಯಾ? ನಾನು ಒಪ್ಪಿಕೊಳ್ಳುತ್ತೇನೆ ನಾವು ಹಿಂದೂಗಳು ಕಪ್ಪಗಿದ್ದೇವೆ, ನಾವು ಪೂಜೆ ಮಾಡುವ ಕೃಷ್ಣ ಕಪ್ಪು ಬಣ್ಣದಲ್ಲಿದ್ದಾನೆ. ನಿಮ್ಮ ಅಲ್ಲಾ ಯಾವ ಬಣ್ಣ ಕಪ್ಪಗಿದ್ದಾನೋ, ಬೆಳ್ಳಗಿದ್ದಾನೋ ಎಂದೆಲ್ಲಾ ಪುನೀತ್ ಕೆರೆಹಳ್ಳಿ ಅವಹೇಳನಕಾರಿ ಹೇಳಿಕೆ ನೀಡಿದ್ದ.