ನಿಂತಿದ್ದ ಟ್ರ್ಯಾಕ್ಟರ್‌‌ಗೆ ಬೈಕ್ ಡಿಕ್ಕಿ: ಮೂವರು ಯುವಕರು ಸ್ಥಳದಲ್ಲೇ ಸಾವು

ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌‌ಗೆ ಬೈಕ್ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.

ಗುರೂಜಿ ತಾಂಡಾ ನಿವಾಸಿಗಳಾದ ಅರ್ಜುನ್ ರಾಠೋಡ್, ರೋಹಿತ್ ಹಾಗೂ ಕೃಷ್ಣ ಎಂಬುವರು ಲಾಡ್ಲಾಪುರ ಗ್ರಾಮದಿಂದ ತಾಂಡಾಕ್ಕೆ ಹೋಗುತ್ತಿರುವಾಗ ಘಟನೆ ನಡೆದಿದೆ.

ಟ್ರ್ಯಾಕ್ಟರ್‌‌ಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗಳಿಂದ ಮೂವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

More articles

Latest article

Most read