Thursday, December 12, 2024

ಗ್ರಾಹಕರಿಗೆ ಸಿಹಿ ಸುದ್ದಿ: ಈ ವರ್ಷ ಹಾಲಿನ ದರದಲ್ಲಿ ಏರಿಕೆ ಇಲ್ಲ, ಯಥಾಸ್ಥಿತಿ ಮುಂದುವರಿಕೆ

Most read

ಹಾಲಿನ ದರ ಏರಿಕೆ ಮಾಡುವುದಾಗಿ ಕೆಎಂಎಫ್ ಹಲವು ಬಾರಿ ಸರ್ಕಾರದೊಂದಿಗೆ ಮಾತು ಕತೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು ಆದರೆ ಈಗ ಸರ್ಕಾರ ಹಾಗೂ ಕೆಎಂಎಫ್ ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ ಸಮಾವೇಶವೊಂದರಲ್ಲಿ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನ ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು. ಆ ಬೆನ್ನಲ್ಲೆ ಕೆಎಂಎಫ್ ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದಂತ 2023ರ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಇದೇ ವರ್ಷ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದ್ದ ಹಾಲಿನ ದರ, ಮತ್ತೆ ಏರಿಕೆಯಾದ್ರೆ ಹೇಗೆ ಅನ್ನೋ ಆತಂಕ ಗ್ರಾಹಕರಲ್ಲಿ ಮನೆ ಮಾಡಿತ್ತು. ಕೆಎಂಎಫ್ ನಿರ್ಧಾರವನ್ನು ಏನಾದರು ಸರ್ಕಾರ ಅನುಮತಿ ನೀಡಿದ್ದರೆ ಮತ್ತೆ 1 ರಿಂದ 2 ರುಪಾಯಿ ಹಾಲಿನ ದರ ಹೆಚ್ಚಳವಾಗುತ್ತಿತ್ತು. ಇದರಿಂದ ಲೀಟರ್ ಹಾಲಿಗೆ 44 ರೂ ಇದ್ದು ಎರಡು ಹೆಚ್ಚಳವಾಗುತ್ತಿತ್ತು.

ಸದ್ಯ ರಾಜ್ಯದಲ್ಲಿ ನೀಲಿ ಪ್ಯಾಕೆಟ್ ಹಾಲು 44 ರೂ. ಇದ್ದು, ಕೇಸರಿ ಪ್ಯಾಕೆಟ್ ಹಾಲು 48 ರೂ. ಇದೆ. ಶುಭಂ ಪ್ಯಾಕೆಟ್ ಹಾಲು 50 ರೂ ಇದ್ದರೆ, ಸಮೃದ್ಧಿ ಹಾಲಿನ ಪ್ಯಾಕೆಟ್ 53 ರೂ. ಇದೆ.

More articles

Latest article