ಜೂನ್ 4, ಮಂಗಳವಾರ ಲೋಕಸಭಾ ಚುನಾವಣೆ 2024ರ ಮತ ಎಣಿಕೆ ನಡೆದಿದೆ. ಈ ಫಲಿತಾಂಶಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ನ ಗ್ಯಾರಂಟಿ ಫಲ ಕೊಟ್ಟಿದೆಯಾ? ಇಂಡಿಯಾ ಕೂಟವು ಬಹುಮತ ಸಾಧಿಸುತ್ತದೆಯೇ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ, 9 ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡರೆ. ಉಳಿದ 17 ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಇನ್ನು 2 ಕ್ಷೇತ್ರವನ್ನು ಜೆಡಿಎಸ್ ಜಯಭೇರಿ ಬಾರಿಸಿದೆ.
2019ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ಗೆಲ್ಲುವ ಮೂಲಕ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರ ಎನ್ನಿಸಿಕೊಂಡಿತ್ತು. ಆದರೆ ಈಗ ಬಿಜೆಪಿ ಈ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದಿದೆ. ಇನ್ನು ಜೆಡಿಎಸ್ ಕೂಡ ಕಳೆದ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಮಾತ್ರ ಗೆದ್ದಿತ್ತು, ಆದರೆ ಈ ಕ್ಷೇತ್ರವನ್ನು ಈಗ ಕಾಂಗ್ರೆಸ್ ವಶಕ್ಕೆ ಪಡೆದಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ಎದುರು ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಗೆದ್ದರೆ. ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಜಯಿಸಿದ್ದಾರೆ.
ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ | ಬಿಜೆಪಿ ಅಭ್ಯರ್ಥಿ | ಜೆಡಿಎಸ್ ಅಭ್ಯರ್ಥಿ | ಗೆದ್ದವರು 2024 |
ಚಿತ್ರದುರ್ಗ | ಬಿಎನ್ ಚಂದ್ರಪ್ಪ (ಎಸ್ ಸಿ) | ಗೋವಿಂದ್ ಗಾರಜೋಳ (ಎಸ್ ಸಿ) | ಗೋವಿಂದ್ ಗಾರಜೋಳ | |
ಉಡುಪಿ-ಚಿಕ್ಕಮಗಳೂರು | ಜಯಪ್ರಕಾಶ್ ಹೆಗ್ಡೆ (- ಬಂಟ್ಸ್) | ಕೋಟಾ ಶ್ರೀನಿವಾಸ ಪೂಜಾರಿ (ಬಿಲ್ಲವ) | ಕೋಟಾ ಶ್ರೀನಿವಾಸ ಪೂಜಾರಿ | |
ದಕ್ಷಿಣ ಕನ್ನಡ | ಪದ್ಮರಾಜ್ (ಬಿಲ್ಲವ) | ಕ್ಯಾಪ್ಟನ್ ಬ್ರಿಜೇಶ್ ಚೌಟಾ (ಬಂಟ್ಸ್) | ಕ್ಯಾಪ್ಟನ್ ಬ್ರಿಜೇಶ್ ಚೌಟಾ | |
ಹಾಸನ | ಎಂ. ಶ್ರೇಯಸ್ ಪಟೇಲ್ (ಒಕ್ಕಲಿಗ) | – | ಪ್ರಜ್ವಲ್ ರೇವಣ್ಣ | ಎಂ. ಶ್ರೇಯಸ್ ಪಟೇಲ್ |
ತುಮಕೂರು | ಎಸ್.ಪಿ ಮುದ್ದಹನುಮೇಗೌಡ (ಒಕ್ಕಲಿಗ) | ವಿ. ಸೋಮಣ್ಣ (ಲಿಂಗಾಯತ) | ವಿ. ಸೋಮಣ್ಣ | |
ಚಿಕ್ಕಬಳ್ಳಾಪುರ | ರಕ್ಷಾ ರಾಮಯ್ಯ (ನಾಯ್ಡು) | ಡಾ.ಕೆ ಸುಧಾಕರ್ (ಒಕ್ಕಲಿಗ) | ಡಾ.ಕೆ ಸುಧಾಕರ್ | |
ಕೋಲಾರ | ಕೆವಿ ಗೌತಮ್ (ಎಸ್ ಸಿ) | – | ಮಲ್ಲೇಶ್ ಬಾಬು | ಮಲ್ಲೇಶ್ ಬಾಬು |
ಮಂಡ್ಯ | ವೆಂಕಟರಾಮೇಗೌಡ (ಸ್ಟಾರ್ ಚಂದ್ರು ) (ಒಕ್ಕಲಿಗ) | – | ಹೆಚ್.ಡಿ ಕುಮಾರಸ್ವಾಮಿ | ಹೆಚ್.ಡಿ ಕುಮಾರಸ್ವಾಮಿ |
ಮೈಸೂರು-ಕೊಡಗು | ಎಂ. ಲಕ್ಷ್ಮಣ್ (ಒಕ್ಕಲಿಗ) | ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (ಕ್ಷತ್ರಿಯ ) | ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ | |
ಚಾಮರಾಜನಗರ | ಸುನೀಲ್ ಬೋಸ್ (ಎಸ್ ಸಿ) | ಎಸ್. ಬಾಲರಾಜ್ (ಎಸ್ ಸಿ) | ಸುನೀಲ್ ಬೋಸ್ | |
ಬೆಂಗಳೂರು ಗ್ರಾಮಾಂತರ | ಡಿ.ಕೆ.ಸುರೇಶ್ (ಒಕ್ಕಲಿಗ) | ಡಾ. ಸಿ.ಎನ್. ಮಂಜುನಾಥ್ (ಒಕ್ಕಲಿಗ) | ಡಾ. ಸಿ.ಎನ್. ಮಂಜುನಾಥ್ | |
ಬೆಂಗಳೂರು ದಕ್ಷಿಣ | ಸೌಮ್ಯ ರೆಡ್ಡಿ (ರೆಡ್ಡಿ) | ತೇಜಸ್ವಿ ಸೂರ್ಯ (ಬ್ರಾಹ್ಮಣ) | ತೇಜಸ್ವಿ ಸೂರ್ಯ | |
ಬೆಂಗಳೂರು ಉತ್ತರ | ಪ್ರೊ.ರಾಜೀವ್ ಗೌಡ (ಒಕ್ಕಲಿಗ) | ಶೋಭಾ ಕರಂದ್ಲಾಜೆ (ಒಕ್ಕಲಿಗ) | ಶೋಭಾ ಕರಂದ್ಲಾಜೆ | |
ಬೆಂಗಳೂರು ಕೇಂದ್ರ | ಮನ್ಸೂರ್ ಖಾನ್ (ಮುಸ್ಲಿಂ) | ಪಿ.ಸಿ. ಮೋಹನ್ (ಒಕ್ಕಲಿಗ – ಬಲಿಜ ) | ಪಿ.ಸಿ. ಮೋಹನ್ |
ಬೆಳಗಾವಿ | ಮೃಣಾಲ್ ಹೆಬ್ಬಾಳಕರ್ (ವೀರಶೈವ ಲಿಂಗಾಯತ) | ಜಗದೀಶ್ ಶೆಟ್ಟರ್ (ಲಿಂಗಾಯತ) | ಜಗದೀಶ್ ಶೆಟ್ಟರ್ |
ಬಳ್ಳಾರಿ | ತುಕಾರಾಂ (ಎಸ್ ಟಿ) | ಬಿ. ಶ್ರೀರಾಮುಲು (ಪರಿಶಿಷ್ಟ ಪಂಗಡ – ವಾಲ್ಮೀಕಿ) | ತುಕಾರಾಂ |
ಚಿಕ್ಕೋಡಿ | ಪ್ರಿಯಾಂಕ ಜಾರಕಿಹೊಳಿ (ಎಸ್ ಟಿ) | ಅಣ್ಣಾಸಾಹೇಬ್ ಶಂಕರ್ ಜೊಲ್ಲೆ (ಲಿಂಗಾಯತ) | ಪ್ರಿಯಾಂಕ ಜಾರಕಿಹೊಳಿ |
ಹಾವೇರಿ-ಗದಗ | ಆನಂದ ಸ್ವಾಮಿ ಗೌಡದೇವರಮಠ ((ಲಿಂಗಾಯತ)) | ಬಸವರಾಜ್ ಬೊಮ್ಮಾಯಿ (ಲಿಂಗಾಯತ) | ಬಸವರಾಜ್ ಬೊಮ್ಮಾಯಿ |
ಕಲಬುರಗಿ | ಡಾ. ರಾಧಾಕೃಷ್ಣ ದೊಡ್ಡಮನಿ (ಪರಿಶಿಷ್ಟ ಜಾತಿ) | ಡಾ. ಉಮೇಶ್ ಜಿ. ಜಾಧವ್ (ಬಂಜಾರ) | ಡಾ. ರಾಧಾಕೃಷ್ಣ ದೊಡ್ಡಮನಿ |
ಬೀದರ್ | ಸಾಗರ್ ಖಂಡ್ರೆ (ವೀರಶೈವ ಲಿಂಗಾಯತ) | ಭಗವಂತ್ ಖೂಬಾ (ಲಿಂಗಾಯತ) | ಸಾಗರ್ ಖಂಡ್ರೆ |
ಹುಬ್ಬಳಿ – ಧಾರವಾಡ | ವಿನೋದ್ ಅಸೂಟಿ (ಕುರುಬ) | ಪ್ರಹ್ಲಾದ್ ಜೋಶಿ (ಬ್ರಾಹ್ಮಣ) | ಪ್ರಹ್ಲಾದ್ ಜೋಶಿ |
ಕೊಪ್ಪಳ | ರಾಜಶೇಖರ್ ಹಿಟ್ನಾಳ್ (ಕುರುಬ) | ಡಾ. ಬಸವರಾಜ್ ಕವಟೂರು (ಲಿಂಗಾಯತ – ಪಂಚಮಶಾಲಿ) | ರಾಜಶೇಖರ್ ಹಿಟ್ನಾಳ್ |
ರಾಯಚೂರು | ಕುಮಾರ್ ನಾಯ್ಕ್ (ಎಸ್ ಟಿ) | ರಾಜಾ ಅಮರೇಶ್ವರ ನಾಯಕ (ಎಸ್ ಟಿ) | ಕುಮಾರ್ ನಾಯ್ಕ್ |
ಉತ್ತರ ಕನ್ನಡ | ಅಂಜಲಿ ನಿಂಬಾಳ್ಕರ್ (ಮರಾಠ) | ವಿಶ್ವೇಶ್ವರ ಹೆಗಡೆ ಕಾಗೇರಿ (ಬ್ರಾಹ್ಮಣ) | ವಿಶ್ವೇಶ್ವರ ಹೆಗಡೆ ಕಾಗೇರಿ |
ದಾವಣಗೆರೆ | ಪ್ರಭಾವತಿ ಮಲ್ಲಿಕಾರ್ಜುನ್ (ವೀರಶೈವ ಲಿಂಗಾಯತ) | ಗಾಯತ್ರಿ ಸಿದ್ದೇಶ್ವರ (ಲಿಂಗಾಯತ) | ಪ್ರಭಾವತಿ ಮಲ್ಲಿಕಾರ್ಜುನ್ |
ಶಿವಮೊಗ್ಗ | ಗೀತಾ ಶಿವರಾಜಕುಮಾರ್ (ಈಡಿಗ) | ಬಿ.ವೈ. ರಾಘವೇಂದ್ರ (ಲಿಂಗಾಯತ) | ಬಿ.ವೈ. ರಾಘವೇಂದ್ರ |
ಬಾಗಲಕೋಟೆ | ಸಂಯುಕ್ತ ಪಾಟೀಲ್ (ವೀರಶೈವ ಲಿಂಗಾಯತ) | ಪಿಸಿ ಗದ್ದಿಗೌಡರ್ (ಲಿಂಗಾಯತ ಗಾಣಿಗ) | ಪಿಸಿ ಗದ್ದಿಗೌಡರ್ |
ವಿಜಯಪುರ | ಎಚ್ಆರ್ ರಾಜು ಆಲಗೂರ (ಎಸ್ ಸಿ) | ರಮೇಶ್ ಜಿಗಜಿಣಗಿ (ಎಸ್ ಸಿ) | ರಮೇಶ್ ಜಿಗಜಿಣಗಿ |