ಪ್ರಜ್ವಲ್‌ ರೇವಣ್ಣ ಕೇಸ್‌ : ಪ್ರೀತಂಗೌಡ ಆಪ್ತರು ಮತ್ತು ವಕೀಲ ದೇವರಾಜೇಗೌಡ ಮನೆ, ಕಚೇರಿ ಮೇಲೆ ಎಸ್‌ಐಟಿ ದಾಳಿ

ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರ ಮನೆ, ಕಚೇರಿ ಸೇರಿ 6 ಕಡೆ ಎಸ್​ಐಟಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. 

ಪ್ರೀತಂಗೌಡ ಆಪ್ತ ಉದ್ಯಮಿ ಶರತ್ ಅವರ ಒಡೆತನದ ಬಿಎಂ ರಸ್ತೆಯ ಬಾರ್, ಲಾಡ್ಜ್​ ಹಾಗೂ ಗೌರಿಕೊಪ್ಪಲಿನಲ್ಲಿರುವ ನಿವಾಸದಲ್ಲಿ ದಾಳಿ ಮಾಡಿದ್ದಾರೆ. 

ಲೋಕಸಭೆಗೆ ಬಿಜೆಪಿ ಟಿಕೆಟ್​ ಆಕಾಂಕ್ಷಿ ಆಗಿದ್ದ ಕಿರಣ್ ಎಂಬುವವರ ಹೊಟೇಲ್, ಬಿಜೆಪಿ ಮುಖಂಡ ಪುನಿತ್ ಅವರ ವಿವೇಕ ನಗರದ ಮನೆ, ವಕೀಲ ದೇವರಾಜೇಗೌಡ ಅವರ ಹಾಸನದ ರವೀಂದ್ರ ನಗರದ ಮನೆ ಹಾಗೂ ಹೊಳೆನರಸೀಪುರದ ಕಛೇರಿ ಸೇರಿ ಒಟ್ಟು ಆರು ಕಡೆ ಎಸ್‌ಐಟಿ ದಾಳಿ ನಡೆಸಿದೆ.

More articles

Latest article

Most read