ಬೆಳಕಷ್ಟೇ ಅಲ್ಲ ಕರಾವಳಿ ದೀಪಾವಳಿ

ಕರಾವಳಿಯ ದೀಪಾವಳಿ ಕೇವಲ ಬೆಳಕಿನ ಹಬ್ಬವಲ್ಲ. ಅದು ಮಣ್ಣಿನ ಹಬ್ಬ, ಬೆಳೆಗಳ ಹಬ್ಬ, ಪೂರ್ವಜರ ಹಬ್ಬ, ಬಲೀಂದ್ರನ ಹಬ್ಬ ಮತ್ತು ನಮ್ಮ ಬದುಕಿಗೆ ಅನ್ನ ನೀಡುವ ಪ್ರಕೃತಿಯನ್ನು ಗೌರವಿಸುವ ಹಬ್ಬ – ಭಾಗ್ಯ ಮರವಾಸಿ, ಉಪನ್ಯಾಸಕರು.

ದೀಪಾವಳಿ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಬೆಳಕಿನ ಹಬ್ಬ, ಪಟಾಕಿ, ಸಿಹಿತಿಂಡಿ, ಲಕ್ಷ್ಮೀಪೂಜೆ ಮತ್ತು ನರಕಾಸುರನ ಸಂಹಾರ. ಆದರೆ ಹಬ್ಬಗಳ ಆಚರಣೆಯ ಹಿಂದೆ ಆಯಾ ಪ್ರದೇಶದ ಬದುಕು, ನಂಬಿಕೆ, ಆಹಾರ ಪದ್ಧತಿ, ಕೃಷಿ ಸಂಸ್ಕೃತಿ ಮತ್ತು ಜನಪದ ಪರಂಪರೆಗಳು ಅಡಗಿರುತ್ತವೆ. ಒಂದೇ ಹಬ್ಬವನ್ನು ಭಾರತದ ವಿವಿಧ ಪ್ರದೇಶಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತವೆ. ಈ ದೃಷ್ಟಿಯಿಂದ ಕರಾವಳಿ ಕರ್ನಾಟಕದ ದೀಪಾವಳಿ ಆಚರಣೆಯನ್ನು ಗಮನಿಸಿದಾಗ, ಅದು ಕೇವಲ ಧಾರ್ಮಿಕ ಆಚರಣೆಯಾಗಿರದೆ ಬಲಿ ಚಕ್ರವರ್ತಿಯ ನೆನಪು, ಪೂರ್ವಜರ ಆರಾಧನೆ ಮತ್ತು ಕೃಷಿ ಬದುಕಿನ ಸಂಭ್ರಮದ ವಿಶಿಷ್ಟ ಅಭಿವ್ಯಕ್ತಿಯಾಗಿ ಕಾಣಿಸುತ್ತದೆ.

ಕರಾವಳಿ ಭಾಗದಲ್ಲಿ ಬಲಿ ಚಕ್ರವರ್ತಿಯನ್ನು ಕೇವಲ ಪುರಾಣದ ಅಸುರ ರಾಜನಾಗಿ ನೋಡದೆ, ತನ್ನ ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿದ, ಅವರ ಯೋಗಕ್ಷೇಮವನ್ನು ಬಯಸಿದ ಆದರ್ಶ ಅರಸನಾಗಿ ನೆನೆಯಲಾಗುತ್ತದೆ. ಜನಪದ ನಂಬಿಕೆಗಳ ಪ್ರಕಾರ, ಬಲಿಯ ಆಳ್ವಿಕೆಯಲ್ಲಿ ನಾಡು ಸಮೃದ್ಧವಾಗಿತ್ತು. ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯುವಷ್ಟು ಫಲವತ್ತಾದ ಭೂಮಿ, ಹಸಿವು ಮತ್ತು ಬಡತನವಿಲ್ಲದ ಬದುಕು, ಸುಖ-ಸಮೃದ್ಧಿಯಿಂದ ಕೂಡಿದ ರಾಜ್ಯವಿತ್ತು ಎಂಬ ಕಥನಗಳಿವೆ. ಇಂತಹ ಜನಾನುರಾಗಿ ಅರಸನನ್ನು ವಾಮನನು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಪಡೆದು ಪಾತಾಳಕ್ಕೆ ಕಳುಹಿಸಿದನೆಂಬ ಪುರಾಣದ ಕಥೆ ನಮಗೆ ತಿಳಿದಿದೆ. ಆದರೆ ಬಲಿ ಚಕ್ರವರ್ತಿಯ ವಿನಂತಿಯಂತೆ ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ನೋಡಲು ಭೂಮಿಗೆ ಬರುವ ಅವಕಾಶವನ್ನು ವಿಷ್ಣು ನೀಡಿದನೆಂಬ ನಂಬಿಕೆಯೂ ಇದೆ.

ಈ ಕಥೆಯೇ ಕೇರಳದ ಓಣಂ ಆಚರಣೆಯ ಹಿಂದಿನ ಪ್ರಮುಖ ನಂಬಿಕೆಯಾಗಿದೆ. ಓಣಂ ಸಂದರ್ಭದಲ್ಲಿ ಮಹಾಬಲಿಯ ಆಗಮನವನ್ನು ಕೇರಳದ ಜನರು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಆದರೆ ತುಳುನಾಡು ಮತ್ತು ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಬಲಿಯ ಆಗಮನದ ನೆನಪು ದೀಪಾವಳಿಯೊಂದಿಗೆ ಬೆಸೆದುಕೊಂಡಿದೆ. ಇಲ್ಲಿ ಆತ ಬಲೀಂದ್ರ ಅಥವಾ ಬಲಿಯೇಂದ್ರ ಎಂಬ ಹೆಸರಿನಿಂದ ಜನಪದ ಬದುಕಿನಲ್ಲಿ ಜೀವಂತವಾಗಿದ್ದಾನೆ.

ನರಕ ಚತುರ್ದಶಿ: ಪೂರ್ವಜರ ನೆನಪಿನ ದಿನ

ಕರಾವಳಿಯ ಕೆಲವು ಕುಟುಂಬಗಳ ದೀಪಾವಳಿ ಆಚರಣೆಯಲ್ಲಿ ನರಕ ಚತುರ್ದಶಿಯ ದಿನವೇ ಒಂದು ವಿಭಿನ್ನ ಸಂಪ್ರದಾಯವನ್ನು ಕಾಣಬಹುದು. ಸಾಮಾನ್ಯವಾಗಿ ಇತರ ಪ್ರದೇಶಗಳಲ್ಲಿ ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನಕ್ಕೆ ವಿಶೇಷ ಮಹತ್ವವಿದ್ದರೆ, ಕರಾವಳಿಯ ಕೆಲವು ಕುಟುಂಬಗಳಲ್ಲಿ ಈ ದಿನವನ್ನು ‘ಬೂದ್ನೀರು’ ಅಥವಾ ಸತ್ತವರ ಹಬ್ಬವೆಂದು ಕರೆಯುವ ಸಂಪ್ರದಾಯವಿದೆ. ಇದು ಅಗಲಿದ ಹಿರಿಯರು ಮತ್ತು ಪೂರ್ವಜರನ್ನು ನೆನಪಿಸಿಕೊಳ್ಳುವ ದಿನವೆಂಬ ಭಾವನೆಯೊಂದಿಗೆ ಆಚರಿಸಲ್ಪಡುತ್ತದೆ.

ಆ ದಿನ ಸಂಜೆ ಮನೆಯವರು ಸಾಂಪ್ರದಾಯಿಕ ಆಹಾರವಾದ ಅರಿಶಿಣ ಎಲೆ ಕಡುಬನ್ನು ಮಾಡಿ ಮೀನು ಸಾರಿನೊಂದಿಗೆ  ಅಗಲಿದ ಹಿರಿಯರಿಗೆ ಬಡಿಸುತ್ತಾರೆ. ಕುಟುಂಬ ವರ್ಗದವರು ಧೂಪವನ್ನು ಹಾಕುತ್ತಾರೆ. ಆಹಾರ ಪದ್ಧತಿಗಳು ಕೆಲವು ಕುಟುಂಬಗಳಲ್ಲಿ ಇಂದಿಗೂ ಉಳಿದುಕೊಂಡಿವೆ. ಸಿದ್ಧಪಡಿಸಿದ ಆಹಾರವನ್ನು ಪೂರ್ವಜರ ನೆನಪಿನಲ್ಲಿ ಅರ್ಪಿಸುವ ಆಚರಣೆಯೂ ಇದೆ.

ಅರಿಶಿಣ ಎಲೆ ಕಡುಬು

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಹಬ್ಬವೆಂದರೆ ಕೇವಲ ದೇವರ ಆರಾಧನೆಯಲ್ಲ. ನಮ್ಮನ್ನು ಬಿಟ್ಟುಹೋದ ಹಿರಿಯರ ನೆನಪು, ಅವರು ಬದುಕಿದ ರೀತಿ, ಅವರ ಆಹಾರ ಪದ್ಧತಿ ಮತ್ತು ಕುಟುಂಬದ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಸಾಂಸ್ಕೃತಿಕ ಪ್ರಕ್ರಿಯೆಯೂ ಹೌದು. ಈ ದೃಷ್ಟಿಯಿಂದ ಬೂದ್ನೀರು ಆಚರಣೆಗೆ ತನ್ನದೇ ಆದ ಜನಪದ ಮಹತ್ವವಿದೆ.

ಮರುದಿನದ ಆಚರಣೆಯಲ್ಲಿ ಕೃಷಿ ಬದುಕಿನ ಮಹತ್ವ ಸ್ಪಷ್ಟವಾಗಿ ಗೋಚರಿಸುತ್ತದೆ. ದನ-ಕರುಗಳ ಪೂಜೆ, ನೇಗಿಲು, ನೊಗ ಮತ್ತು ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಪೂಜಿಸುವ ಸಂಪ್ರದಾಯವಿದೆ. ಕೃಷಿಕನ ಬದುಕಿನಲ್ಲಿ ಭೂಮಿ, ಜಾನುವಾರು ಮತ್ತು ಕೃಷಿ ಉಪಕರಣಗಳು ಎಷ್ಟು ಮುಖ್ಯವೆಂಬುದನ್ನು ಈ ಆಚರಣೆ ನೆನಪಿಸುತ್ತದೆ.

ಸಂಜೆಯಾಗುತ್ತಿದ್ದಂತೆ ದೀಪವನ್ನು ಹಚ್ಚುವ ಸಂಪ್ರದಾಯವೂ ವಿಶೇಷವಾಗಿದೆ. ಕೊಟ್ಟಿಗೆಗೆ, ಹುಲ್ಲಿನ ಪಿಂಡಿಗೆ, ತೆಂಗಿನ ಮರಗಳಿಗೆ ಮತ್ತು ಮನೆಯ ಸುತ್ತಮುತ್ತಲಿನ ಸಮೃದ್ಧಿಯ ಸಂಕೇತಗಳಾದ ಸ್ಥಳಗಳಿಗೆ ದೀಪವಿಡಲಾಗುತ್ತದೆ. ಕಾಯಿ, ಬೆಲ್ಲ, ಅವಲಕ್ಕಿಯನ್ನು ನೈವೇದ್ಯವಾಗಿ ಇಟ್ಟು ಬಲೀಂದ್ರನನ್ನು ಆಹ್ವಾನಿಸುವ ಆಚರಣೆ ನಡೆಯುತ್ತದೆ.

ಇದು ಕೇವಲ ದೀಪ ಹಚ್ಚುವ ಕ್ರಿಯೆಯಲ್ಲ. ತನ್ನ ಬದುಕಿಗೆ ಅನ್ನ ನೀಡಿದ ಭೂಮಿಗೆ, ದುಡಿಮೆಗೆ ನೆರವಾದ ದನಕರುಗಳಿಗೆ, ಫಲ ನೀಡಿದ ಮರಗಳಿಗೆ ಮತ್ತು ಕೃಷಿಗೆ ಸಹಕರಿಸಿದ ಪ್ರಕೃತಿಯ ಎಲ್ಲ ಶಕ್ತಿಗಳಿಗೆ ಕೃತಜ್ಞತೆ ಸಲ್ಲಿಸುವ ಕ್ರಮವಾಗಿದೆ. ಬಲಿ ಚಕ್ರವರ್ತಿಯ ಆಡಳಿತದಲ್ಲಿ ಇದ್ದಿತೆಂದು ನಂಬಲಾದ ಸಮೃದ್ಧಿಯ ನೆನಪನ್ನು ಮತ್ತೆ ಬದುಕಿನಲ್ಲಿ ಆಹ್ವಾನಿಸುವ ಪ್ರಯತ್ನವೂ ಹೌದು.

ತುಳುನಾಡಿನ ಜನಪದ ಸಂಪ್ರದಾಯಗಳಲ್ಲಿ ಬಲಿಯ ಆಗಮನವನ್ನು ಸೂಚಿಸುವ ದೀಪದ ಆಚರಣೆಗೆ ವಿಶೇಷ ಸ್ಥಾನವಿದೆ. ಹೊಲದ ಬದಿಯಲ್ಲಿ ದೀಪ ಅಥವಾ ಪಂಜನ್ನು ಬೆಳಗಿಸಿ ಬಲೀಂದ್ರನನ್ನು ಕರೆಯುವ ಸಂಪ್ರದಾಯದ ಉಲ್ಲೇಖಗಳು ಜನಪದ ಅಧ್ಯಯನಗಳಲ್ಲಿಯೂ ದೊರೆಯುತ್ತವೆ. ‘ಬಲೀಂದ್ರ, ಬಲೀಂದ್ರ’ ಎಂದು ಕರೆಯುವ ಈ ಆಚರಣೆ ಕೃಷಿ ಮತ್ತು ಜನಪದ ನಂಬಿಕೆಗಳ ನಡುವಿನ ಸಂಬಂಧವನ್ನು ತಿಳಿಸುತ್ತದೆ.

ಕದಿರು ತರುವ ಸಂಪ್ರದಾಯ: ಸಮೃದ್ಧಿಯನ್ನು ಮನೆಗೆ ಆಹ್ವಾನಿಸುವ ಕ್ರಮ

ದೀಪಾವಳಿಯ ಮತ್ತೊಂದು ದಿನದ ಆಚರಣೆಯೇ ಕದಿರು ತರುವ ಸಂಪ್ರದಾಯ. ಕರಾವಳಿ ಭಾಗದಿಂದ ಮಲೆನಾಡಿಗೆ ವಲಸೆ ಬಂದು ನೆಲೆಸಿರುವ ಕುಟುಂಬಗಳಲ್ಲಿಯೂ ಈ ಆಚರಣೆ ಇಂದಿಗೂ ಮುಂದುವರಿದಿರುವುದನ್ನು ಕಾಣಬಹುದು.

ಗದ್ದೆಯಲ್ಲಿ ಬೆಳೆದ ಭತ್ತದ ಕದಿರನ್ನು ಪೂಜಿಸಿ, ಭಕ್ತಿಯಿಂದ ತಲೆಯ ಮೇಲೆ ಹೊತ್ತು ಮನೆಗೆ ತರುವ ಸಂಪ್ರದಾಯವಿದೆ. ಮನೆಗೆ ತಂದ ಕದಿರನ್ನು ಕೊಟ್ಟಿಗೆಗೆ, ತೆಂಗಿನ ಮರಗಳಿಗೆ, ಫಲ ನೀಡುವ ಮರಗಳಿಗೆ, ವಾಹನಗಳಿಗೆ ಹಾಗೂ ಮನೆಯ ವಿವಿಧ ಸ್ಥಳಗಳಿಗೆ ಕಟ್ಟಲಾಗುತ್ತದೆ. ಇದು ಕೇವಲ ಹೊಸ ಭತ್ತದ ತೆನೆಗೆ ಸಲ್ಲಿಸುವ ಗೌರವವಲ್ಲ; ಮುಂದಿನ ವರ್ಷವೂ ಮನೆಗೆ ಧಾನ್ಯ, ಸಂಪತ್ತು ಮತ್ತು ಸಮೃದ್ಧಿ ಬರಲಿ ಎಂಬ ಹಾರೈಕೆಯ ಸಂಕೇತವಾಗಿದೆ.

ಕದಿರು ಎಂದರೆ ಕೃಷಿಕನ ಒಂದು ವರ್ಷದ ಪರಿಶ್ರಮದ ಫಲ. ಮಣ್ಣಿನಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು, ಬೆಳೆದು, ತೆನೆ ಕಟ್ಟಿ ಮನೆಗೆ ಬರುವವರೆಗಿನ ಕೃಷಿಕನ ಬದುಕಿನ ಸಾರ್ಥಕತೆ ಅದರಲ್ಲಿ ಅಡಗಿದೆ. ಹೀಗಾಗಿ ಕದಿರನ್ನು ಮನೆಗೆ ತರುವುದು ಎಂದರೆ ಕೃಷಿಯ ಫಲವನ್ನು ಸಂಭ್ರಮದಿಂದ ಸ್ವೀಕರಿಸುವುದು ಎಂದರ್ಥ.

ಕದಿರಿನ ಸಂಭ್ರಮ

ಈ ಸಂದರ್ಭದಲ್ಲಿ  ಹಲಸಿನ ಎಲೆ, ಮಾವಿನೆಲೆ ಜೊತೆ ಹರಿವಾಣದಲ್ಲೋ ಅಥವಾ ಅಡಿಕೆಹಾಳೆಯಲ್ಲಿ ತಂದಂತಹ ಕದಿರಿಗೆ ಹಾಲು ಎರೆಯುವುದು, ಸೌತೆಕಾಯಿ ಸೇರಿದಂತೆ ಹಸಿರು ತರಕಾರಿಗಳನ್ನು ಬಳಸುವುದು, ಹಲಸಿನ ಕಾಯಿಯ ಚಟ್ನಿ ಮತ್ತು ಇತರ ಸ್ಥಳೀಯ ಆಹಾರ ಪದಾರ್ಥಗಳನ್ನು ತಯಾರಿಸುವ ಸಂಪ್ರದಾಯಗಳೂ ಕೆಲವು ಕುಟುಂಬಗಳಲ್ಲಿ ಕಂಡುಬರುತ್ತವೆ. ಇವು ಕರಾವಳಿಯ ಆಹಾರ ಸಂಸ್ಕೃತಿಯನ್ನೂ ಕೃಷಿ ಬದುಕಿನ ವೈವಿಧ್ಯವನ್ನೂ ಪ್ರತಿಬಿಂಬಿಸುತ್ತವೆ.

ತುಳುನಾಡಿನ ಭೂತಾರಾಧನೆ ಮತ್ತು ಕೃಷಿ ಸಂಸ್ಕೃತಿಯೊಂದಿಗಿನ ಅದರ ಸಂಬಂಧವನ್ನು ಗಮನಿಸಬೇಕು. ತುಳುನಾಡಿನ ಭೂತಾರಾಧನೆ ಕೇವಲ ದೈವಿಕ ನಂಬಿಕೆಗೆ ಸೀಮಿತವಾಗಿಲ್ಲ. ಅದು ಭೂಮಿ, ಕುಟುಂಬ, ಸಮುದಾಯ, ನ್ಯಾಯ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಜನಪದ ವ್ಯವಸ್ಥೆಯಾಗಿದೆ. ಇದೇ ಕಾರಣಕ್ಕೆ ಬಲೀಂದ್ರನನ್ನು ನೆನೆಯುವ ಆಚರಣೆಯಲ್ಲಿಯೂ ಭೂಮಿ ಮತ್ತು ಕೃಷಿಗೆ ವಿಶೇಷ ಸ್ಥಾನವಿದೆ.

ದೀಪಾವಳಿಯ ಸಂದರ್ಭದಲ್ಲಿ ಬಲಿಯನ್ನು ಆಹ್ವಾನಿಸುವುದು, ಪೂರ್ವಜರನ್ನು ಸ್ಮರಿಸುವುದು, ಕೃಷಿ ಪರಿಕರಗಳನ್ನು ಪೂಜಿಸುವುದು, ದನಕರುಗಳನ್ನು ಗೌರವಿಸುವುದು ಮತ್ತು ಕದಿರು ತರುವುದು ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವ ಆಚರಣೆಗಳಾಗಿವೆ. ಇವುಗಳಲ್ಲಿ ದೇವರಿಗಿಂತಲೂ ಮನುಷ್ಯನ ಬದುಕು, ದುಡಿಮೆ, ಪ್ರಕೃತಿ ಮತ್ತು ಸಮುದಾಯದ ನೆನಪುಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ.

ಇಲ್ಲಿ ಮತ್ತೊಂದು ಆಸಕ್ತಿದಾಯಕ ಅಂಶವಿದೆ. ಭಾರತದ ಅನೇಕ ಭಾಗಗಳಲ್ಲಿ ದೀಪಾವಳಿಯನ್ನು ರಾಮನ ಅಯೋಧ್ಯಾ ಆಗಮನದೊಂದಿಗೆ ಅಥವಾ ನರಕಾಸುರನ ಸಂಹಾರದೊಂದಿಗೆ ಗುರುತಿಸಲಾಗುತ್ತದೆ. ಆದರೆ ಕರಾವಳಿಯ ಕೃಷಿಕ ಸಮುದಾಯದ ಜನಪದ ನೆನಪಿನಲ್ಲಿ ಈ ಹಬ್ಬವು ಬಲಿ ಚಕ್ರವರ್ತಿಯ ಆಗಮನದ ಸಂಭ್ರಮವಾಗಿ ಉಳಿದಿದೆ. ಒಂದೇ ಹಬ್ಬಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆ ಅರ್ಥಗಳು ದೊರೆಯುವುದು ಭಾರತದ ಸಾಂಸ್ಕೃತಿಕ ವೈವಿಧ್ಯಕ್ಕೆ ಸಾಕ್ಷಿಯಾಗಿದೆ.

ಬಲಿ

ಇಂದು ಆಧುನಿಕ ಜೀವನಶೈಲಿ, ಕೃಷಿಭೂಮಿಗಳ ಕಡಿತ, ಕುಟುಂಬಗಳ ವಿಭಜನೆ ಮತ್ತು ನಗರೀಕರಣದಿಂದ ಇಂತಹ ಅನೇಕ ಆಚರಣೆಗಳು ನಿಧಾನವಾಗಿ ಮರೆಯಾಗುತ್ತಿವೆ. ಆದರೂ ಕರಾವಳಿಯಿಂದ ಮಲೆನಾಡಿಗೆ ವಲಸೆ ಬಂದ ಕುಟುಂಬಗಳು ತಮ್ಮೊಂದಿಗೆ ಕದಿರು ತರುವ ಸಂಪ್ರದಾಯ, ಬಲೀಂದ್ರನನ್ನು ನೆನೆಯುವ ಆಚರಣೆ ಮತ್ತು ಪೂರ್ವಜರ ನೆನಪಿನ ಆಹಾರ ಪದ್ಧತಿಗಳನ್ನು ಕೊಂಡೊಯ್ದಿರುವುದು ಗಮನಾರ್ಹ.

ಇದನ್ನೂ ಓದಿ – ವಿಶೇಷ | ನರಕಾಸುರನೋ ಬಲಿಯೋ: ದೀಪಾವಳಿ ಆಚರಣೆ

ಬಲಿ ಚಕ್ರವರ್ತಿಯ ಕಥೆಯಲ್ಲಿ ನಮಗೆ ಕಾಣಿಸುವುದು ಕೇವಲ ಪುರಾಣದ ಒಂದು ಪ್ರಸಂಗವಲ್ಲ. ಅದು ಒಳ್ಳೆಯ ಆಡಳಿತ ಹೇಗಿರಬೇಕು, ರಾಜನು ತನ್ನ ಪ್ರಜೆಗಳನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಸಮೃದ್ಧಿಯೆಂದರೆ ಕೇವಲ ಸಂಪತ್ತಲ್ಲ, ಜನರ ನೆಮ್ಮದಿಯೂ ಹೌದು ಎಂಬ ಸಂದೇಶವನ್ನು ನೀಡುತ್ತದೆ.

ಕರಾವಳಿಯ ದೀಪಾವಳಿಯಲ್ಲಿ ಬಲೀಂದ್ರನನ್ನು ಕರೆಯುವಾಗ ಜನರು ನೆನೆಯುವುದು ತಮ್ಮ ನೆಲದ ಇತಿಹಾಸವನ್ನು, ಪೂರ್ವಜರ ಬದುಕನ್ನು, ಕೃಷಿಕರ ಪರಿಶ್ರಮವನ್ನು ಮತ್ತು ಸಮೃದ್ಧಿಯ ಕನಸನ್ನು. ಕದಿರಿಗೆ ದೀಪವಿಡುವಾಗ ಅದು ಕೇವಲ ಭತ್ತದ ತೆನೆಗೆ ಸಲ್ಲಿಸುವ ಗೌರವವಲ್ಲ; ಅನ್ನ ನೀಡುವ ಮಣ್ಣಿಗೆ ಸಲ್ಲಿಸುವ ಕೃತಜ್ಞತೆ. ಕೊಟ್ಟಿಗೆಯ ದನಕರುಗಳಿಗೆ  ದೀಪವಿಡುವಾಗ ಅದು ದುಡಿಮೆಯ ಸಂಗಾತಿಗಳಿಗೆ ಸಲ್ಲಿಸುವ ಪ್ರೀತಿ. ಪೂರ್ವಜರ ನೆನಪಿನಲ್ಲಿ ಆಹಾರ ಅರ್ಪಿಸುವಾಗ ಅದು ತಲೆಮಾರುಗಳ ನಡುವಿನ ಸಂಬಂಧವನ್ನು ಜೀವಂತವಾಗಿಡುವ ಪ್ರಯತ್ನ.

ಹೀಗೆ ನೋಡಿದಾಗ ಕರಾವಳಿಯ ದೀಪಾವಳಿ ಕೇವಲ ಬೆಳಕಿನ ಹಬ್ಬವಲ್ಲ. ಅದು ಮಣ್ಣಿನ ಹಬ್ಬ, ಬೆಳೆಗಳ ಹಬ್ಬ, ಪೂರ್ವಜರ ಹಬ್ಬ, ಬಲೀಂದ್ರನ ಹಬ್ಬ ಮತ್ತು ನಮ್ಮ ಬದುಕಿಗೆ ಅನ್ನ ನೀಡುವ ಪ್ರಕೃತಿಯನ್ನು ಗೌರವಿಸುವ ಹಬ್ಬ.

ಭಾಗ್ಯ ಮರವಾಸಿ

ಉಪನ್ಯಾಸಕರು

ಇದನ್ನೂ ಓದಿ- ವಿಶೇಷ | ಕನಕದಾಸರ ಬಲಿಚಕ್ರವರ್ತಿ

More articles

Latest article

Most read