ನೆಗೆಟಿವ್‌ ರಿವ್ಯೂಗಳ ಹೊಡೆತಕ್ಕೆ ಟಾಕ್ಸಿಕ್‌ ತತ್ತರ; ಎರಡನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡ ಯಶ್‌ ಸಿನಿಮಾ

ಬೆಂಗಳೂರು ಆ.27: ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮೊತ್ತದ ಗಳಿಕೆ ಕಂಡಿದ್ದರೂ, ಎರಡನೇ ದಿನವೇ ಕಲೆಕ್ಷನ್‌ನಲ್ಲಿ ಭಾರೀ ಕುಸಿತ ಕಂಡಿದೆ. ಆಗಸ್ಟ್ 26ರಂದು ಬಿಡುಗಡೆಯಾದ ಚಿತ್ರ ಮೊದಲ ದಿನ ಭಾರತದಲ್ಲಿ ಸುಮಾರು ₹101.10 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಭರ್ಜರಿ ಆರಂಭ ಪಡೆದಿತ್ತು.

ಆದರೆ ಎರಡನೇ ದಿನದ ಆರಂಭಿಕ ಬಾಕ್ಸ್ ಆಫೀಸ್ ಟ್ರೆಂಡ್‌ಗಳು ಚಿತ್ರದ ಓಟಕ್ಕೆ ಕೊಂಚ ಹಿನ್ನಡೆಯ ಸೂಚನೆ ನೀಡಿವೆ. ಬಾಲಿವುಡ್ ಹಂಗಾಮಾ ಪ್ರಕಾರ, ಎರಡನೇ ದಿನ ಮಧ್ಯಾಹ್ನದವರೆಗೆ ಚಿತ್ರ ಸುಮಾರು ₹3.91 ಕೋಟಿ ಗಳಿಸಿದ್ದು, ಆಕ್ಯುಪೆನ್ಸಿ ಕೇವಲ 15.60%ರಷ್ಟಿದೆ. ಮೊದಲ ದಿನಕ್ಕೆ ಹೋಲಿಸಿದರೆ ಇದು ಸುಮಾರು 92%ನಷ್ಟು ಕುಸಿತವಾಗಿದೆ.

ಎರಡನೇ ದಿನದ ಅಡ್ವಾನ್ಸ್ ಬುಕ್ಕಿಂಗ್ ಕೂಡ ಮೊದಲ ದಿನಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ. ಹಲವು ವರದಿಗಳ ಪ್ರಕಾರ, ಎರಡನೇ ದಿನದ ಅಡ್ವಾನ್ಸ್ ಬುಕ್ಕಿಂಗ್ ಸುಮಾರು ₹26.05 ಕೋಟಿಯಷ್ಟಿದ್ದು, ಮೊದಲ ದಿನದ ₹58.27 ಕೋಟಿಗೆ ಹೋಲಿಸಿದರೆ ಭಾರಿ ಇಳಿಕೆ ಕಂಡಿದೆ.

ಸಂಜೆ ಮತ್ತು ರಾತ್ರಿ ಶೋಗಳ ಸೇರ್ಪಡೆಯ ಬಳಿಕ ನೆಟ್‌ ಕಲೆಕ್ಷನ್‌ ಅಲ್ಪಮಟ್ಟಿಗೆ ಏರಿಕೆಯಾಗಲಿದೆ. ಆದರೆ ಆರಂಭಿಕ ಟ್ರ್ಯಾಕಿಂಗ್‌ನಲ್ಲಿ ಎರಡನೇ ದಿನದ ಭಾರತ ಮಾರುಕಟ್ಟೆಯ ನೆಟ್ ಕಲೆಕ್ಷನ್ ಮೊದಲ ದಿನದ ₹101 ಕೋಟಿಗೆ ಹೋಲಿಸಿದರೆ ಬಹಳ ಕಡಿಮೆಯಾಗುವ ಸಾಧ್ಯತೆ ಕಾಣಿಸುತ್ತಿದೆ. ಕೆಲವು ವರದಿಗಳು ಎರಡನೇ ದಿನದ ಅಂತಿಮ ಗಳಿಕೆಯನ್ನು ₹50 ಕೋಟಿಗೂ ಮೇಲೆ ಆಗುವ ಅಂದಾಜು ಮಾಡಿದ್ದರೆ, ಲೈವ್ ಟ್ರ್ಯಾಕರ್‌ಗಳ ಅಂಕಿಅಂಶಗಳು ಅದಕ್ಕಿಂತ ಕಡಿಮೆ ಕಲೆಕ್ಷನ್‌ ಆಗುವ ಸಾಧ್ಯತೆ ಇದೆ ಎಂದು ಹೇಳುತ್ತಿವೆ.

ಮೊದಲ ದಿನದ ದಾಖಲೆ ಓಪನಿಂಗ್ ಬಳಿಕ ಎರಡನೇ ದಿನದ ಈ ತೀವ್ರ ಕುಸಿತ ಇದೀಗ ‘ಟಾಕ್ಸಿಕ್’ ತಂಡ ಗಂಭೀರ ಹಿನ್ನಡೆ ಅನುಭವಿಸುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಪರಿಣಾಮ ಬಾಕ್ಸ್ ಆಫೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದೆಯೇ ಎಂಬ ಚರ್ಚೆಯೂ ಆರಂಭವಾಗಿದೆ.

ಇದೀಗ ಎಲ್ಲರ ಗಮನ ಶುಕ್ರವಾರದ ಕಲೆಕ್ಷನ್ ಮತ್ತು ವೀಕೆಂಡ್‌ನತ್ತ ನೆಟ್ಟಿದೆ. ಎರಡನೇ ದಿನದ ಕುಸಿತವನ್ನು ಚಿತ್ರ ವಾರಾಂತ್ಯದಲ್ಲಿ ಸರಿಪಡಿಸಿಕೊಳ್ಳುತ್ತದೆಯೇ ಅಥವಾ ಮೊದಲ ದಿನದ ಭರ್ಜರಿ ಓಪನಿಂಗ್ ನಂತರ ಕಲೆಕ್ಷನ್ ಮತ್ತಷ್ಟು ಇಳಿಯುತ್ತದೆಯೇ ಎಂಬುದು ‘ಟಾಕ್ಸಿಕ್’ನ ಬಾಕ್ಸ್ ಆಫೀಸ್ ಭವಿಷ್ಯವನ್ನು ನಿರ್ಧರಿಸಲಿದೆ.

More articles

Latest article

Most read