Sunday, September 8, 2024

ಟಿ20 ವಿಶ್ವಕಪ್ ವಿಜಯದ ನಂತರ ಇಂಟರ್ನ್ಯಾಷನಲ್ T20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ

Most read

ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಟಿ20 ವಿಶ್ವಕಪ್ 2024 ಫೈನಲ್‌ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇಂಟರ್ನ್ಯಾಷನಲ್ ಟಿ20 ಗೆ ನಿವೃತ್ತಿ ಘೋಷಿಸಿದ್ದಾರೆ.

ನಿವೃತ್ತಿ ಘೋಷಣೆ ವೇಳೆ, ಇದು ನನ್ನ ಕೊನೆಯ ಟಿ 20 ವಿಶ್ವಕಪ್, ಇದನ್ನೇ ನಾವು ಸಾಧಿಸಲು ಬಯಸಿದ್ದೇವೆ. ನಮ್ಮ ಸರದಿ ಮುಗಿದಿದೆ, ಮುಂದಿನ ಪೀಳಿಗೆ ಅಧಿಕಾರ ವಹಿಸಿಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಒಂದು ದಿನ ನಾವು ಈ ಓಟವನ್ನು ನಿಲ್ಲಿಸುವ ಸಮಯ ಬರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಮುಂದೆ ಈತರದ ಒಂದು ಗೆಲುವು ಸಿಕ್ಕದೆ ಎಂದರೆ ನಿಜಕ್ಕೂ ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕಡೆಯ T20 ಪಂದ್ಯವಾಗಿತ್ತು ಭಾವುಕರಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿ20 ಪಂದ್ಯವನ್ನು ಗೆದ್ದರೂ ಗೆಲ್ಲದೇ ಇದ್ದರೂ T2೦ ಆವೃತ್ತಿಯಲ್ಲಿ ನಾನು ನಿವೃತ್ತಿ ಹೊಂದುತ್ತಿದ್ದೆ. ಮುಂದಿನ ಪೀಳಿಗೆ ಅಧಾರ ವಹಿಸಿಕೊಳ್ಳುವ ಸಮಯವಿದು ಎಂದು ಹೇಳಿದ್ದಾರೆ.

ಐಸಿಸಿ ಪಂದ್ಯಗಳನ್ನು ಗೆಲ್ಲಲು ನಾವು ಬಹಳ ಸಮಯದಿಂದ ಕಾಯುತ್ತಿದೆವು. ನೀವು ರೋಹಿತ್ ಶರ್ಮಾ ನಂತಹ ವ್ಯಕ್ತಿಯನ್ನು ನೋಡುತ್ತೀರಿ, ಅವರು 9 T20 ವಿಶ್ವಕಪ್‌ಗಳನ್ನು ಆಡಿದ್ದಾರೆ ಮತ್ತು ಇದು ನನ್ನ ಆರನೇ ವಿಶ್ವಕಪ್ ಎಂದು ಗೆಲುವಿನ ಬಗ್ಗೆ ಸಂತಸ ಮತ್ತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

“ರೋಹಿತ್ ನೇತೃತ್ವದಲ್ಲಿ ಈ ಗೆಲುವು ನನಗೆ ಸಂತಸ ತಂದಿದೆ. ಅವರು ಇದಕ್ಕೆ ಅರ್ಹರು. ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟಕರ. ಇಂತಹ ಅದ್ಭುತ ದಿನಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

More articles

Latest article