ಬೆಂಗಳೂರು : ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ವಂಚಿತರಾಗಬಾರದು ಮತ್ತು ಯಾವುದೇ ಅನರ್ಹ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯಬಾರದು ಎಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ರಾಜ್ಯಾದ್ಯಂತ ವಿಶೇಷ ಸಮಗ್ರ ಪರಿಷ್ಕರಣೆ SIR ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ದೇಶಾದ್ಯಂತ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಈ ಬೃಹತ್ ಪ್ರಕ್ರಿಯೆಯಲ್ಲಿ ಕರ್ನಾಟಕವನ್ನು ಹಂತ-3 (Phase-III) ರ ಅಡಿಯಲ್ಲಿ ಸೇರಿಸಲಾಗಿದ್ದು, ಭಾರತೀಯ ಸಂವಿಧಾನದ ವಿಧಿ 324 ಮತ್ತು ಜನಪ್ರತಿನಿಧಿ ಕಾಯ್ದೆ, 1950 ರ ಅಡಿಯಲ್ಲಿ ನೀಡಲಾದ ಅಧಿಕಾರದನ್ವಯ ಮತದಾರರ ಪಟ್ಟಿಯನ್ನು ಅತ್ಯಂತ ಪಾರದರ್ಶಕವಾಗಿ ನವೀಕರಿಸಲು ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಕುರಿತಂತೆ ಮತದಾರರ ನೋಂದಣಾಧಿಕಾರಿಗಳಿಗೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ, ಬೂತ್ ಮಟ್ಟದ ಅಧಿಕಾರಿಗಳ ಮೇಲುಸ್ತುವಾರಿದಾರರಿಗೆ ಹಾಗೂ ಬೂತ್ ಮಟ್ಟದ ಅಧಿಕಾರಿಗಳಿಗೆ ವಿಶೇಷ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕುರಿತಂತೆ ಅಗತ್ಯ ತರಬೇತಿ ನೀಡಲಾಗಿರುತ್ತದೆ.
ಮನೆ-ಮನೆ ಭೇಟಿ ಹಾಗೂ ಸಮೀಕ್ಷೆಗೆ BLOಗಳಿಗೆ ಸೂಚನೆ:
ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಬೂತ್ ಮಟ್ಟದ ಅಧಿಕಾರಿಗಳು (BLOs) ಪ್ರತಿಯೊಬ್ಬರ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನೂತನ ಅರ್ಜಿ ವಿತರಿಸಿ ಭರ್ತಿ ಮಾಡಿದ ಅರ್ಜಿಗಳನ್ನು ಸ್ಥಳದಲ್ಲೇ ಪಡೆಯುತ್ತಾರೆ.
ಅರ್ಹ ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವುದು, ದ್ವಿಪ್ರತಿ (Duplicate), ವರ್ಗಾವಣೆಗೊಂಡಿರುವ (Shifted), ಮರಣ ಹೊಂದಿರುವ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಮತ್ತು ತಪ್ಪು ವಿವರಗಳನ್ನು ಸರಿಪಡಿಸಲು ನಿಗದಿತ ಅರ್ಜಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸ್ಥಳದಲ್ಲೇ ಸಂಗ್ರಹಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಪಡೆದಂತಹ ಭರ್ತಿ ಮಾಡಿದ ಅರ್ಜಿಗಳ ಅನುಸಾರ ಕರಡು ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುವುದು.
ರಾಜಕೀಯ ಪಕ್ಷಗಳ ಸಕ್ರಿಯ ಭಾಗಿತ್ವಕ್ಕೆ ಅವಕಾಶ:
ಈ ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ, ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟರನ್ನು (BLAs) ನೇಮಕ ಮಾಡುವ ಮೂಲಕ ಅಧಿಕಾರಿಗಳೊಂದಿಗೆ ಸಮೀಕ್ಷಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಯೋಗವು ಮುಕ್ತ ಅವಕಾಶ ಕಲ್ಪಿಸಿದೆ.
ವಿಶೇಷ ಸಮಗ್ರ ಪರಿಷ್ಕರಣೆ ಪ್ರಮುಖ ಕಾರ್ಯಗಳ ವೇಳಾಪಟ್ಟಿ
ಬಿ.ಎಲ್.ಓ ಗಳ ಮನೆ-ಮನೆಗೆ ಭೇಟಿ : ಜೂನ್ 30 ರಿಂದ ಜುಲೈ 29 ರವರೆಗೆ
ಕರಡು ಮತದಾರರ ಪ್ರಕಟಿಸುವುದು : ದಿನಾಂಕ ಆಗಸ್ಟ್ 05, 2026
ಪಟ್ಟಿ ಕುರಿತು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ : ದಿನಾಂಕ ಆಗಸ್ಟ್ 05, 2026ರಿಂದ ಸೆಪ್ಟೆಂಬರ್ 04, 2026
ಆಕ್ಷೇಪಣೆ ಇತ್ಯರ್ಥಗೊಳಿಸಲು ಕಡೆಯ ದಿನಾಂಕ : ಅಕ್ಟೋಬರ್ 03, 2026
ಅಧಿಕೃತ ಅಂತಿಮ ಮತದಾರರ ಪಟ್ಟಿ ಘೋಷಣೆ : ದಿನಾಂಕ ಅಕ್ಟೋಬರ್ 07, 2026
ಎಸ್ಐಆರ್ ಮ್ಯಾಪಿಂಗ್ ಮಾಹಿತಿ:
ಬೆಂಗಳೂರು ದಕ್ಷಿಣ ಅಪರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 21,43,006 ಮತದಾರರಿದ್ದು, ಮತಗಟ್ಟೆಗಳು ಒಟ್ಟು 1,895 ಇರುತ್ತವೆ. ಮತಗಟ್ಟೆಗೆ ಒಬ್ಬರಂತೆ ಒಟ್ಟು 1,895 ಬಿ.ಎಲ್.ಓ (BLO) ಗಳು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ವಯೋಮಿತಿಗಿಂತ ಮೇಲ್ಪಟ್ಟ ಮತದಾರರ ಸಂಖ್ಯೆ-14,13,952, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರ ಸಂಖ್ಯೆ 7,29,054, 18 ವರ್ಷ ಮೇಲ್ಪಟ್ಟ ಹೊಸದಾಗಿ ಸೇರ್ಪಡೆಗೆ ಅರ್ಹರಿರುವ ಒಟ್ಟು ಅಂದಾಜು ಮತದಾರರ ಸಂಖ್ಯೆ 5,93,577 ಮ್ಯಾಪಿಂಗ್ ಮೂಲಕ ಕಂಡು ಬಂದಿರುತ್ತದೆ. ಸದ್ಯ ಒಟ್ಟು ಮ್ಯಾಪ್ ಮಾಡಲಾದ ಮತದಾರರ ಸಂಖ್ಯೆ 14,33,935 ಆಗಿದ್ದು, ಮ್ಯಾಪಿಂಗ್ ಪ್ರಗತಿಯನ್ನು ಶೇಕಡಾ 66.91ರಷ್ಟು ಸಾಧಿಸಲಾಗಿದೆ.
ಅಪರ ಜಿಲ್ಲಾ ಚುನಾವಣಾಧಿಕಾರಿಗಳು – ದಕ್ಷಿಣ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರು ವಿವರ
166-ಗೋವಿಂದರಾಜನಗರ (64.52%), 167-ವಿಜಯನಗರ (66.65%),
170-ಬಸವನಗುಡಿ (67.03%),
171-ಪದ್ಮನಾಭನಗರ (68.24%),
172-ಬಿಟಿಎಂ ಲೇಔಟ್ (72.72%),
173-ಜಯನಗರ (65.50%) ಮತ್ತು 175-ಬೊಮ್ಮನಹಳ್ಳಿ ಕ್ಷೇತ್ರವು ಶೇಕಡಾ 64.41 ರಷ್ಟು ಪ್ರಗತಿ ಸಾಧಿಸಿದೆ.
ಸಾರ್ವಜನಿಕರಲ್ಲಿ ವಿನಂತಿ
ಅಪರ ಜಿಲ್ಲಾ ಚುನಾವಣಾಧಿಕಾರಿಗಳು – ದಕ್ಷಿಣ ವ್ಯಾಪ್ತಿಯ ಸಮಸ್ತ ನಾಗರಿಕರು ಮತ್ತು ಅರ್ಹ ಮತದಾರರು ತಮ್ಮ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಗೆ ಭೇಟಿ ನೀಡಿದಾಗ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕಾಗಿ ಹಾಗೂ ತಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಬೇಕಾಗಿ ಕೋರಿದೆ.
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಅಡಿ ಮುಕ್ತ-ಪಾರದರ್ಶಕ ಪಟ್ಟಿ ಸಿದ್ಧತೆಗೆ ಕ್ರಮ