Wednesday, May 22, 2024

ಸಕಲೇಶಪುರ | ಹೊಂಗಡಹಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ದಲಿತ ಮಹಿಳೆ

Most read

ಸಕಲೇಶಪುರ ತಾಲ್ಲೂಕು ಹೊಂಗಡಹಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಕಣ್ಣೀರಿಟ್ಟ ದಲಿತ ಮಹಿಳೆ ಸೋಮವಾರ ಆಧಿಕೃತ ಘೋಷಣೆಯ ನಂತರ ನಕ್ಕು ಮಂದಹಾಸ ಬೀರಿದರು.

ಈ ಬೆಳವಣಿಗೆಯನ್ನು ಕಾಂಗ್ರೆಸ್ ಮುಖಂಡರು ಇದು ಸಂವಿಧಾನದ ಶಕ್ತಿ ಎಂದು ಬಣ್ಣಿಸಿ, ಶೋಷಿತರ, ಬಡವರ, ದುರ್ಬಲರ ಪರವಾಗಿ ಕಾಂಗ್ರೆಸ್ ಸದಾ ಇರುತ್ತದೆ, ನಮ್ಮ ಬೆಂಬಲಿತ ಸದಸ್ಯೆ ಅಧ್ಯಕ್ಷೆ ಯಾಗಿರುವುದು ನಮಗೆ ಸಂತಸವಾಗಿದೆ ಎಂದರು.

ಅಂದು ಕಣ್ಣೀರಿಟ್ಟ, ವನಜಾಕ್ಷಿ ಇಂದು ನಗುತ್ತಾ ಮಾತನಾಡಿ, ನನಗೆ ಬಹಳ ಸಂತೋಷವಾಗುತ್ತಿದೆ. ಇಂದು ಗ್ರಾ ಪಂ 6 ಸದಸ್ಯ ರಲ್ಲಿ 5 ಸದಸ್ಯರು ಹಾಜರಾಗಿದ್ದೇವೆ ಎಂದರು. ಈ ಗ್ರಾ ಪಂ ಅಭಿವೃದ್ಧಿ ಗಾಗಿ ಹೆಚ್ಚು ಶ್ರಮಿಸಿತ್ತೇನೆ. ನನಗೆ ಬಡವರ ಕಷ್ಟ, ಸಮಸ್ಯೆ ತಿಳಿದಿದೆ.‌ ಇವರ ಪ್ರಗತಿಗಾಗಿ ದುಡಿಯುತ್ತೇನೆ ಎಂದರು.

ಚುನಾವಣಾ ಅಧಿಕಾರಿ ಆದಿತ್ಯ ಮಾತನಾಡಿ, ಶುಕ್ರವಾರ ನಡೆದ ಚುನಾವಣೆಯ ಮುಂದುವರಿದ ಸಭೆ ಇಂದು ದು ನಡೆಯಿತು. ಅಂದು ಕೋರಂ ಕೊರತೆ ಇತ್ತು. ಇಂದು 6 ಸದಸ್ಯ ರಲ್ಲಿ 5 ಜನರು ಹಾಜರಾದರು. ವನಜಾಕ್ಷಿ ಅವರಿಗೆ ಕೋರಂ ಸಿಕ್ಕಿದ್ದು ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಹಿನ್ನೆಲೆ

ತಾಲೂಕಿನ ಹೊಂಗಡಹಳ್ಳ ಗ್ರಾ ಪಂ ನಲ್ಲಿ ಪರಿಶಿಷ್ಟ ಜಾತಿ ಮೀಸಲಾಗಿದ್ದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಮಹಿಳೆಯಾಗಿದ್ದ ವನಜಾಕ್ಷಿ ಗುರುವಾರ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು, ವನಜಾಕ್ಷಿ ಆಯ್ಕೆಯಾಗಿದ್ದರು ತಾಂತ್ರಿಕ ಅಡಚಣೆ ಕೋರಂ ಹಿನ್ನೆಲೆ ಸೋಮವಾರಕ್ಕೆ ಸಭೆ ಮುಂದೂಡಲಾಗಿತ್ತು. ವನಚಾಕ್ಷಿ, ನಾನು ದಲಿತ ಮಹಿಳೆ ಆಗಿರುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ, ಕೊಲ್ಲಹಳ್ಳಿ ಸಲೀಂ, ಗೊದ್ದು ಲೋಕೇಶ್, ಕೊಮರಯ್ಯ, ಬೈಕೇರೆ ದೇವರಾಜ್, ಗ್ರಾ ಪಂ ಸದಸ್ಯ ಸುಜಾತ, ಮಹಿಳಾ ಕಾಂಗ್ರೆಸ್ ಸದಸ್ಯೆ ಅಧ್ಯಕ್ಷೆ ಅನ್ನಪೂರ್ಣ, ಲಕ್ಷ್ಮಿ , ಹಸೀನಾ ಹುರುಡಿ, ಕಿರಣ್, ಕೃಷ್ಣೇಗೌಡ, ಮಂಜು, ವಿಜಯ್, ಚಂದ್ರು,ಪ್ರಶಾಂತ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು

More articles

Latest article