Saturday, July 27, 2024

ವಿಧಾನಮಂಡಲ ಅಧಿವೇಶನ: ಕಲಾಪ ಆರಂಭಕ್ಕು ಮುನ್ನ ಶಾಸಕರಿಗೆ ವಿಶೇಷ ಬೆಳಗಿನ ಉಪಹಾರ

Most read

ಬೆಂಗಳೂರು: ವಿಧಾನಮಂಡಲ ಅಧಿವೇಶನ ಬೆಳಗ್ಗೆ ಬೇಗ ಆರಂಭವಾಗುವ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಶಾಸಕರಿಗೆ ಸ್ಪೆಷಲ್ ಬ್ರೇಕ್ ಫಾಸ್ಟ್ ವ್ಯವಸ್ಥೆ ಮಾಡಲಾಗಿದೆ.

ಸಾಮಾನ್ಯವಾಗಿ ವಿಧಾನಸಭೆ 11 ಗಂಟೆಗೆ ಆರಂಭಗೊಳ್ಳುತ್ತದೆ. ಆದರೆ ಈ ಬಾರಿ 9.30ಕ್ಕೆ ಕಲಾಪ ಆರಂಭಗೊಳ್ಳುತ್ತಿದೆ. ಹತ್ತು ದಿನಗಳ ಕಾಲ ಇದೇ ಅವಧಿಯಲ್ಲಿ ಕಲಾಪ ಆರಂಭಗೊಳಿಸಲು ನಿರ್ಧಾರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಶಾಸಕರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಬೆಳಗ್ಗಿನ ಉಪಹಾರವನ್ನು ಉಚಿತವಾಗಿ ವಿಧಾನಸೌಧದ ಕ್ಯಾಂಟೀನ್‌ನಲ್ಲಿ ಕಲ್ಪಿಸಲಾಗಿದೆ.

ಮಂಗಳವಾರ ಶಾಸಕರು ಬೇಗನೇ ಬಂದು ಬೆಳಗಿನ ಉಪಾಹಾರವನ್ನು ಸೇವಿಸಿದರು. ಕಲಾಪ 11 ಗಂಟೆಗೆ ಆರಂಭಗೊಳ್ಳುತ್ತಿದ್ದ ಅವಧಿಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡಲು ಅವಕಾಶ ಸಿಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಶಾಸಕರು ನಮಗೆ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಈ ಬಾರಿ ಕಲಾಪವನ್ನು 11 ಗಂಟೆಯ ಬದಲಾಗಿ 9.30 ಗೆ ಆರಂಭಿಸುವ ನಿರ್ಧಾರವನ್ನು ಸ್ಪೀಕರ್ ಖಾದರ್ ಕೈಗೊಂಡಿದ್ದರು.

ಶಾಸಕರು ಕಲಾಪಕ್ಕೆ ಬೇಗ ಹಾಜರಾಗಲು ಅನುಕೂಲವಾಗುವಂತೆ ಉಚಿತವಾಗಿ ವಿಧಾನಸೌಧ ಕ್ಯಾಂಟಿನ್‌ನಲ್ಲೇ ಅವರಿಗೆ ಬೆಳಗ್ಗಿನ ಉಪಹಾರವನ್ನು ಕಲ್ಪಿಸಲಾಗಿದೆ. ಇದಕ್ಕೆ ಶಾಸಕರ ಉತ್ತಮ ಸ್ಪಂದನೆಯೂ ಸಿಕ್ಕಿದೆ.

More articles

Latest article