Wednesday, May 22, 2024

ಭಾರತ್‌ ಜೋಡೋ ನ್ಯಾಯ ಯಾತ್ರೆ | 30ನೆಯ ದಿನ

Most read

ಹಿಂದುಸ್ತಾನದ ಯುವಜನರು ದಿನದ 8-10 ಗಂಟೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಾರೆ. ಇದೊಂದು ರೀತಿಯ ನಶೆ. ಈ ನಶೆಯನ್ನು ನಿಮ್ಮ ತಲೆಗೇರಿಸಲು ಕಾರಣವೇನೆಂದರೆ ಇದರಿಂದ ಅಂಬಾನಿ ಅದಾನಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹಣ ಸಂಪಾದಿಸುತ್ತಾರೆ. ನೀವು ಎಷ್ಟು ಮೊಬೈಲ್ ಬಳಸುತ್ತೀರೋ ಅಷ್ಟೇ ಹೆಚ್ಚು ಹಣ ಅವರು ಸಂಪಾದಿಸುತ್ತಾರೆ” – ರಾಹುಲ್‌ ಗಾಂಧಿ

ನ್ಯಾಯ ಯಾತ್ರೆಯು ಛತ್ತೀಸ್ ಗಢ ರಾಜ್ಯದಲ್ಲಿ ಮುಂದುವರಿದಿದೆ. ಇಂದಿನ (12.02.2024) ಕಾರ್ಯಕ್ರಮಗಳು ಹೀಗಿದ್ದವು.

ಬೆಳಿಗ್ಗೆ 9.00 ಛತ್ತೀಸ್ ಗಢದ ಕೋರ್ಬಾ ಸೀತಾಮನಿ ಚೌಕದಿಂದ ಯಾತ್ರೆ ಆರಂಭ. ಟ್ರಾನ್ಸ್ ಪೋರ್ಟ್ ನಗರ ಚೌಕದಲ್ಲಿ ಸಾರ್ವಜನಿಕ ಭಾಷಣ. ಕೋಸಾ ಮಾರ್ಕೆಟ್ ನ ಛುರಿಯಲ್ಲಿ ಸ್ವಾಗತ. 12.00 ಕ್ಕೆ ಮಧ‍್ಯಾಹ್ನದ ವಿರಾಮ ಕೋರ್ಬಾ ಕಟ್ಘೊರಾ ಚೌಕದಲ್ಲಿ. 2.00 ಕ್ಕೆ ಯಾತ್ರೆ ಪುನರಾರಂಭ ಛೊಟಿಯಾ ಮತ್ತು ಮೋರ್ಗಾದ ಘರ್ಸಿಯಾ ದಿಂದ. ರಾತ್ರಿ ವಾಸ್ತವ್ಯ ಛತ್ತೀಸ್ ಗಢದ ಶಿವನಗರ ಗ್ರಾಮ ಪಂಚಾಯತ್ ನಲ್ಲಿ.

ಸಾರ್ವಜನಿಕರನ್ನು ಉದ್ದೇಶಿಸಿ ಟ್ರಾನ್ಸ್ ಪೋರ್ಟ್ ನಗರ ಚೌಕದಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, “ಬಿಜೆಪಿ ಸರಕಾರ ನೋಟು ನಿಷೇಧ, ಜಿ ಎಸ್ ಟಿ ಜಾರಿಗೆ ತಂದಿತು. ಸಣ್ಣ ವ್ಯಾಪಾರಿಗಳು ನಾಶವಾದರು. ದೇಶದ ವಿದ್ಯುತ್, ರಕ್ಷಣೆ, ಆರೋಗ್ಯ, ವಿಮಾನ ನಿಲ್ದಾಣ ಹೀಗೆ ಯಾವುದೇ ಉದ್ಯಮ ತೆಗೆದುಕೊಳ್ಳಿ ಅದು ಆಯ್ದ ಕೆಲವರ ವಶದಲ್ಲಿದೆ. ಅಂದರೆ ಇಡೀ ವ್ಯವಸ್ಥೆಯನ್ನು ಮೂರು ನಾಲ್ಕು ಜನರಿಗಾಗಿ ನಡೆಸಲಾಗುತ್ತಿದೆ. ಉಳಿದ ಜನತೆ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇದು ಆರ್ಥಿಕ ಅನ್ಯಾಯ.

ಕೋಲ್ ಇಂಡಿಯಾ ಒಂದು ಪಬ್ಲಿಕ್ ಸೆಕ್ಟರ್ ಯುನಿಟ್. ಆದರೆ ನಿಧಾನವಾಗಿ ಅದರ ಕತ್ತು ಹಿಸುಕಲಾಗುತ್ತಿದೆ. ಕೋಲ್ ಇಂಡಿಯಾ ದುರ್ಬಲಗೊಳ್ಳುತ್ತಿದ್ದಂತೆ  ಹೋಗಲಿ ಬಿಡಿ, ಇದನ್ನು ಅದಾನಿಗೆ ವಹಿಸುತ್ತೇವೆ, ಆತ ಚಲಾಯಿಸುತ್ತಾನೆ ಎನ್ನುತ್ತಾರೆ. ಕೋಲ್ ಇಂಡಿಯಾದಲ್ಲಿ ಕೆಲಸ ಮಾಡುವವನ ಮಗ ತಾನು ಉದ್ಯಮ ನಡೆಸಬೇಕು ಎಂಬ ಕನಸು ಕಂಡರೆ ಬ್ಯಾಂಕ್ ಆತನಿಗೆ ಸಾಲ ಕೊಡುವುದಿಲ್ಲ. ಆದ್ದರಿಂದಲೇ ಹಿಂದುಸ್ತಾನ ಇವರ ಮಾತು ಆಲಿಸಬೇಕು, ಮಾಧ್ಯಮಗಳಲ್ಲಿ ಇವರ ಸಮಸ್ಯೆ ಚರ್ಚೆಯಾಗಬೇಕು ಎನ್ನುವುದು ನನ್ನ ಬಯಕೆ.

ನರೇಂದ್ರ ಮೋದಿ ಹಿಂದುಳಿದ ಜಾತಿಯಲ್ಲಿ ಹುಟ್ಟಿದವರಲ್ಲ. ಗುಜರಾತ್ ಸರಕಾರ ಅವರ ಜಾತಿಯನ್ನು ಒಬಿಸಿಗೆ ಸೇರಿಸಿತು. ಆದ್ದರಿಂದ ಇಲ್ಲಿನ ನನ್ನ ಸಹೋದರರು ಎಷ್ಟೇ ಶ್ರಮ ಪಡಲಿ, ಸೇನೆ ಅಥವಾ ಕೋಲ್ ಇಂಡಿಯಾದ ಉನ್ನತ ಸ್ಥಾನಕ್ಕೆ ಏರುವುದು ಅವರಿಗೆ ಸಾಧ‍್ಯವಾಗದಿರುವುದನ್ನು ನೋಡುವಾಗ ನನಗೆ ಈ ಅನ್ಯಾಯ ಇಷ್ಟವಾಗುವುದಿಲ್ಲ. ಇದು ನನ್ನ ಜಾಯಮಾನ.

ಹಿಂದುಸ್ತಾನದ ಯುವಜನರು ದಿನದ 8-10 ಗಂಟೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಾರೆ. ಇದೊಂದು ರೀತಿಯ ನಶೆ. ಈ ನಶೆಯನ್ನು ನಿಮ್ಮ ತಲೆಗೇರಿಸಲು ಕಾರಣವೇನೆಂದರೆ ಇದರಿಂದ ಅಂಬಾನಿ ಅದಾನಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹಣ ಸಂಪಾದಿಸುತ್ತಾರೆ. ನೀವು ಎಷ್ಟು ಮೊಬೈಲ್ ಬಳಸುತ್ತೀರೋ ಅಷ್ಟೇ ಹೆಚ್ಚು ಹಣ ಅವರು ಸಂಪಾದಿಸುತ್ತಾರೆ” ಎಂದು ಅವರು ಹೇಳಿದರು.

ನ್ಯಾಯ ಯಾತ್ರೆಯ ಇದೇ ದಿನ ಛತ್ತೀಸ್ ಗಢದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಅದರಲ್ಲಿ ಛತ್ತೀಸ್ ಗಢ ಉಸ್ತುವಾರಿ ವಹಿಸಿರುವ ಸಚಿನ್ ಪೈಲಟ್, ಕಾಂಗ್ರೆಸ್ ಹಿರಿಯ ನಾಯಕರಾದ ಜಯರಾಮ ರಮೇಶ್, ಭೂಪೇಶ‍್ ಬಗೇಲಾ ಪಾಲ್ಗೊಂಡಿದ್ದರು.

ಇದರಲ್ಲಿ ಸಚಿನ್ ಪೈಲಟ್ ಅವರು, “ಭಾರತ ಜೋಡೋ ಯಾತ್ರೆಯಿಂದ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆಯಾಯಿತು. ಇದರ ನಂತರ ಈಶಾನ್ಯ ಭಾರತದಲ್ಲಿ ಭಾರತ ಜೋಡೋ ನ್ಯಾಯ ಯಾತ್ರೆ ಆರಂಭವಾಯಿತು. ಇದರ ಮುಖ್ಯ ಉದ್ದೇಶ- ಹಿಂದಿನ ಹತ್ತು ವರ್ಷಗಳ ಕಾಲದ ಅಸಂತೋಷ, ಮತ್ತು ಅನ್ಯಾಯವನ್ನು ಕೊನೆಗೊಳಿಸಿ ವಂಚಿತ ವರ್ಗಕ್ಕೆ ಹಕ್ಕುಗಳನ್ನು ಕೊಡಿಸುವುದು. ಈ ಯಾತ್ರೆ ದೇಶವಾಸಿಗಳಲ್ಲಿ ನ್ಯಾಯದ ಉತ್ಸಾಹ ಜಾಗೃತಗೊಳಿಸಿದೆ” ಎಂದರು.

ಶ್ರೀನಿವಾಸ ಕಾರ್ಕಳ, ಮಂಗಳೂರು

ನ್ಯಾಯ ಯಾತ್ರೆ –29ನೇ ದಿನ http://ಭಾರತ್ ಜೋಡೋ ನ್ಯಾಯ ಯಾತ್ರೆ – 29ನೆಯ ದಿನ https://kannadaplanet.com/bharat-jodo-nyaya-yatra-29th-day/

More articles

Latest article