Saturday, July 27, 2024

ಭಾರತ್ ಜೋಡೋ ನ್ಯಾಯ ಯಾತ್ರೆ – 29ನೆಯ ದಿನ

Most read

“ಮೋದಿ ಸರಕಾರ ಅಗ್ನಿಪಥ ಯೋಜನೆಯ ಮೂಲಕ 1.5 ಲಕ್ಷ ಯುವಕರ ಕನಸನ್ನು ನುಚ್ಚುನೂರು ಮಾಡಿತು. ಅವರ ಉದ್ಯೋಗ ಕಿತ್ತುಕೊಂಡಿತು. ಈ ಯುವಕರಿಗೆ ಅನ್ಯಾಯವಾಯಿತು. ಕಾಂಗ್ರೆಸ್ ಅವರ ಹಕ್ಕನ್ನು ಮರಳಿ ಕೊಟ್ಟೇ ಕೊಡುತ್ತದೆ” – ರಾಹುಲ್‌ ಗಾಂಧಿ

ಎರಡು ದಿನಗಳ ವಿರಾಮದ ಬಳಿಕ ನ್ಯಾಯ ಯಾತ್ರೆಯು ಇಂದು ಛತ್ತೀಸ್ ಗಢ ರಾಜ್ಯದಲ್ಲಿ ಮುಂದುವರಿದಿದೆ. ಇಂದಿನ (11.02.2024) ಕಾರ್ಯಕ್ರಮಗಳು ಹೀಗಿದ್ದವು. ಬೆಳಿಗ್ಗೆ 10.00 ಗಂಟೆಗೆ  ಛತ್ತೀಸ್ ಗಢ, ರಾಯಗಢದ ಗಾಂಧಿ ಪ್ರತಿಮಾ ಚೌಕದಿಂದ ಜನನಾಯಕ ರಾಮ್ ಕುಮಾರ್ ಅಗರ್ವಾಲ್ ಚೌಕದ ವರೆಗೆ ಪಾದಯಾತ್ರೆ. ಸಾರ್ವಜನಿಕ ಭಾಷಣ. ಮಧ್ಯಾಹ್ನ 20.00 ಗಂಟೆಯಿಂದ ಖಾರ್ಸಿಯಾ, ಚಾಪಲ್ ಚೌಕದಿಂದ ಯಾತ್ರೆ ಪುನರಾರಂಭ. ಸಾಕಿಯ ರಾಜಪಾರ ಚೌಕದಿಂದ ಅಗ್ರಸೇನ ಚೌಕಕ್ಕೆ ಪಾದಯಾತ್ರೆ. ಸಾರ್ವಜನಿಕ ಭಾಷಣ. ರಾತ್ರಿ ವಾಸ್ತವ್ಯ ಕೋರ್ಬಾ,  ಭಾಯಿಸ್ಮಾದ ಶಸ್ಕಿಯಾ ಮಹಾವಿದ್ಯಾಲಯ.

ಇಂದಿನ ಯಾತ್ರೆಯ ಸಾರ್ವಜನಿಕ ಭಾಷಣದಲ್ಲಿ ರಾಹುಲ್ ಗಾಂಧಿಯವರು, “ಮೋದಿ ಸರಕಾರ ಅಗ್ನಿಪಥ ಯೋಜನೆಯ ಮೂಲಕ 1.5 ಲಕ್ಷ ಯುವಕರ ಕನಸನ್ನು ನುಚ್ಚುನೂರು ಮಾಡಿತು. ಅವರ ಉದ್ಯೋಗ ಕಿತ್ತುಕೊಂಡಿತು. ಈ ಯುವಕರಿಗೆ ಅನ್ಯಾಯವಾಯಿತು. ಕಾಂಗ್ರೆಸ್ ಅವರ ಹಕ್ಕನ್ನು ಮರಳಿ ಕೊಟ್ಟೇ ಕೊಡುತ್ತದೆ. ಈವತ್ತು ದೇಶದಲ್ಲಿ ಭಾಷೆ, ಕ್ಷೇತ್ರ ಮತ್ತು ಸಮುದಾಯದ ಹೆಸರಿನಲ್ಲಿ ದ್ವೇಷ ಹರಡಲಾಗುತ್ತಿದೆ. ಆದರೆ ಇದರಿಂದ ದೇಶ ಶಕ್ತಿಶಾಲಿಯಾಗುವುದಿಲ್ಲ, ಬದಲಿಗೆ ದುರ್ಬಲವಾಗುತ್ತದೆ. ಆದ್ದರಿಂದ ನಮ್ಮ ಯಾತ್ರೆಯ ಉದ್ದೇಶ ದೇಶದ ಭವಿಷ್ಯವನ್ನು ಪ್ರೀತಿ ತುಂಬಿದ ಹಿಂದುಸ್ತಾನವನ್ನಾಗಿಸುವುದು.

ಹಿಂದುಸ್ತಾನದಲ್ಲಿ ಡ್ರೋನ್ ನಿಂದ ಹಿಡಿದು ರೈಫಲ್ ವರೆಗೆ ಎಲ್ಲ ಗುತ್ತಿಗೆಗಳನ್ನು ಅದಾನಿಗೆ ಕೊಡಲಾಗುತ್ತಿದೆ. ನಾನು ಇದನ್ನು ಹೇಳಿದ್ದಕ್ಕೆ ನನ್ನ ಲೋಕಸಭಾ ಸದಸ್ಯತ್ವ ಕಿತ್ತುಕೊಳ್ಳಲಾಯಿತು. ನನ್ನ ಮನೆಯನ್ನು ಕಿತ್ತು ಕೊಳ್ಳಲಾಯಿತು. ನಾನು ಅವರಲ್ಲಿ ಹೇಳಿದೆ- ನೀವು ನನ್ನ ಮನೆಯನ್ನು ಕಿತ್ತುಕೊಳ್ಳಿ, ನನಗೇನೂ ಬೇಸರವಿಲ್ಲ, ಯಾಕೆಂದರೆ ಹಿಂದುಸ್ತಾನವೇ ನನ್ನ ಮನೆ. ನಾವು ಯಾರನ್ನು ಆದಿವಾಸಿ ಎನ್ನುತ್ತೇವೆಯೋ ಅವರನ್ನು ಬಿಜೆಪಿಯವರು ವನವಾಸಿ ಎನ್ನುತ್ತಾರೆ. ನಮಗೆ ಆದಿವಾಸಿಯೆಂದರೆ ದೇಶದ ಮೊದಲ ಮಾಲೀಕರು. ಆದರೆ ಬಿಜೆಪಿಯವರು ಅವರನ್ನು ವನವಾಸಿ ಎಂದು ಕರೆಯುತ್ತಾರೆ ಅಂದರೆ ಅವರು ಕಾಡಿನಲ್ಲಿ ವಾಸಿಸುವವರು. ಬಿಜೆಪಿಯು ಈ ರೀತಿಯಲ್ಲಿ ದೇಶದಲ್ಲಿ ಸಾಮಾಜಿಕ ಅನ್ಯಾಯ ಹರಡುತ್ತಿದೆ.

ಮಣಿಪುರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಆದರೆ ಪ್ರಧಾನಿಗಳು ಇಂದಿನ ತನಕ ಅಲ್ಲಿಗೆ ಹೋಗಿಲ್ಲ. ಬಿಜೆಪಿಯು ಎರಡು ಸಮುದಾಯಗಳ ನಡುವೆ ದ್ವೇಷ ಹರಡಿದೆ. ಸಾವಿರಾರು ಮನೆಗಳು ಸುಟ್ಟುಹೋಗಿವೆ, ಜನರು ಸತ್ತಿದ್ದಾರೆ. ಮಣಿಪುರದಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಅಲ್ಲಿ ಸರಕಾರಕ್ಕೆ ನಿಯಂತ್ರಣವೇ ಇಲ್ಲವಾಗಿದೆ. ಮಾಧ್ಯಮಗಳಲ್ಲಿ ನಿಮಗೆ ರೈತರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಬಗ್ಗೆ ಏನೂ ಕಾಣಿಸುವುದಿಲ್ಲ. ಮಾಧ‍್ಯಮಗಳಲ್ಲಿ ಅದಾನಿ, ಅಂಬಾನಿ, ವರ್ಲ್ಡ್ ಕಪ್ ಮತ್ತು ಸಿನಿಮಾ ತಾರೆಯರ ಸುದ್ದಿ ಕಾಣಿಸುತ್ತದೆ. ಮಾಧ್ಯಮಗಳು ನಮ್ಮ ಮಾತನ್ನು ವರದಿ ಮಾಡುವುದಿಲ್ಲ. ಆದ್ದರಿಂದ ನಾವು ನಿಮ್ಮ ಮುಂದೆ ಬಂದಿದ್ದೇವೆ” ಎಂದರು.


ಶ್ರೀನಿವಾಸ ಕಾರ್ಕಳ, ಮಂಗಳೂರು

ಯಾತ್ರೆ-26-ಭಾರತ್ ಜೋಡೋ ನ್ಯಾಯ ಯಾತ್ರೆ‌ | 26ನೆಯ ದಿನ

More articles

Latest article