Thursday, July 25, 2024

ಹೈದ್ರಾಬಾದ್‌ನಲ್ಲಿ ‘ಮಂಗನಕಾಯಿಲೆಗೆ’ ವ್ಯಾಕ್ಸಿನ್ ತಯಾರಿಕೆ : ಒಂದು ವರ್ಷದಲ್ಲಿ ಚಿಕಿತ್ಸೆ ಲಭ್ಯ : ಸಚಿವ ದಿನೇಶ್ ಗುಂಡೂರಾವ್

Most read

ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆಗೆ ಹೊಸವ್ಯಾಕ್ಸಿನ್ ತಯಾರಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜೊತೆ ಚರ್ಚೆ ನಡೆಸಲಾಗಿದ್ದು, ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್‌ಒಪ್ಪಿಗೆ ಸೂಚಿಸಿದೆ.

ಶನಿವಾರ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಕೆಎಫ್‌ಡಿ ಬಾಧಿತ ಜಿಲ್ಲೆಗಳ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಮಂಗನಕಾಯಿಲೆಗೆ ಈಗಿರುವ ವ್ಯಾಕ್ಸಿನ್ ಬಳಸದಂತೆ ಸೂಚಿಸಲಾಗಿದೆ. ಹೊಸ ವ್ಯಾಕ್ಸಿನ್‌ಗೆ ಐಸಿಎಂಆರ್‌ಒಪ್ಪಿಗೆ ನೀಡಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಉಚಿತ ಚಿಕಿತ್ಸೆಗೆ ಸೂಚಿಸಲಾಗಿದೆ ಎಂದರು.

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಆ ಭಾಗಗಳಲ್ಲಿ ಇತ್ತೀಚಿಗೆ ಮಂಗನ ಕಾಯಿಲೆ ಪ್ರಕರಣಗಳು ಬೆಳಕಿಗೆ ಬಂದಿವೆ ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಮಂಗನ ಕಾಯಿಲೆಯಿಂದ ವೃದ್ಧರು ಒಬ್ಬರು ಸಾವನ್ನಪ್ಪಿದ್ದರು.ಇದರಿಂದ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಮಂಗನ ಕಾಯಿಲೆ ತಡೆಗಟ್ಟುವ ಕುರಿತಂತೆ ಕಠಿಣ ಕ್ರಮ ಕೈಗೊಂಡಿದೆ.

More articles

Latest article