ತಿರುವನಂತಪುರಂ : ಕೇರಳಾದ್ಯಂತ ಸುರಿಯುತ್ತಿರುವ ನಿರಂತರ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಹೊಸದಾಗಿ ಭೂಕುಸಿತಗಳು ಸಂಭವಿಸಿದ್ದು, ಶನಿವಾರ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಪ್ರತ್ಯೇಕ ಭೂಕುಸಿತ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತದ ಪ್ರಕಾರ, ಇಡುಕ್ಕಿಯ ಕುದಯತ್ತೂರು ಸಮೀಪದ ಅಡೂರ್‌ಮಾಲಾ ಪ್ರದೇಶದ ನಿವಾಸಿ ಸುಮತಿ ಅವರು, ಶನಿವಾರ ಮುಂಜಾನೆ ಸಂಭವಿಸಿದ ಭೂಕುಸಿತದ ಅವಶೇಷಗಳು ತಮ್ಮ ಮನೆಗೆ ಅಪ್ಪಳಿಸಿದ ಪರಿಣಾಮ ಮೃತಪಟ್ಟರು.
ಗಾಯಗೊಂಡಿದ್ದ ಅವರ ಪತಿ ಮತ್ತು ಮಗನನ್ನು ನೆರೆಹೊರೆಯವರು ರಕ್ಷಿಸಿ, ತೋಡುಪುಳದ ಆಸ್ಪತ್ರೆಗೆ ದಾಖಲಿಸಿದರು. ಭೂಕುಸಿತದಲ್ಲಿ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ರಕ್ಷಣಾ ದಳ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಸುಮತಿ ಅವರ ಮೃತದೇಹವನ್ನು ಹೊರತೆಗೆಯಲಾಯಿತು.
ಕೇರಳದಲ್ಲಿ ಪಂಪಾ ನದಿ ಉಕ್ಕಿ ಹರಿಯುತ್ತಿದೆ. ಪಟ್ಟಣಂತಿಟ್ಟದ ಗ್ರಾಮದ ಮನೆಗಳು, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಇಡುಕ್ಕಿಯ ಕುಟ್ಟಿಕ್ಕನಂ – ಮುಂಡಕ್ಕಯಂ ಹೆದ್ದಾರಿ ನಡುವೆ ಹಾಗೂ ಇಡಿಕ್ಕಿಯ ಎಲಪ್ಪಾರದಲ್ಲಿಯೂ ಭೂ ಕುಸಿತ ಉಂಟಾಗಿದೆ.
ಕೇರಳದಲ್ಲಿ ಮಳೆ : ಭೂಕುಸಿತದಿಂದ ಮೂವರು ಸಾವು