ನವದೆಹಲಿ ಸೆ.30 : ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಭಾರತದ ಹೊಸ ಐದು ತಾಣಗಳು ಸೇರಲಿವೆ.
ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ ಮಾಹಿತಿ ನೀಡಿದೆ. ಮಧ್ಯಪ್ರದೇಶದ ಉದಯಗಿರಿ ಹಾಗೂ ಬಾಗ್ ಗುಹೆಗಳು, ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿರುವ ದೇವಾಲಯಗಳ ಸಮೂಹ . ಮಹಾತ್ಮ ಗಾಂಧಿ ಅವರ ಸತ್ಯಾಗ್ರಹದ ತಾಣಗಳು. ಗಿನ್ನೋರ್‌ಗಢ್ ತಾಣಗಳು ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ ಎಂದು ಇಲಾಖೆ ಹೇಳಿದೆ.
ತಾತ್ಕಾಲಿಕ ಪಟ್ಟಿಯಲ್ಲಿರುವ ಈ ಸ್ಥಳಗಳು ಅಂತಿಮ ಪಟ್ಟಿಯಲ್ಲಿ ಪ್ರಕಟವಾಗಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

