ಶಾಲೆಯಲ್ಲಿ ಕಸ ಗುಡಿಸಿದ ಏಳು ವರ್ಷದ ಬಾಲಕಿ : ಸಾರ್ವಜನಿಕರಿಂದ ಆಕ್ರೋಶ

ಕೋಲಾರ : ನಗರದ ದೇವಾಂಗ ಪೇಟೆಯಲ್ಲಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳು ವರ್ಷದ ಹೆಣ್ಣು ಮಗು ಒಂದು ಶಾಲೆ ಆವರಣದಲ್ಲಿ ಕಸ ಗುಡಿಸುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಇದನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಶನಿವಾರವಾದ್ದುದರಿಂದ ತರಗತಿ ಪ್ರಾರಂಭಗೊಂಡಾಗ ಪ್ರತ್ಯಕ್ಷದರ್ಶಿಗಳ ಪ್ರಕಾರ, ಹೆಣ್ಣು ಮಗುವೊಂದು ಪೊರಕೆ ಹಿಡಿದು ಶಾಲೆ ಸ್ವಚ್ಛಗೊಳಿಸುತ್ತಿರುವುದು ಕಂಡು ಬಂದಿದೆ. ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ಈ ರೀತಿ ಕಸಗುಡಿಸುತ್ತಿರುವುದನ್ನು ಕಂಡ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಿ ಶಾಲೆಗಳು ಮಕ್ಕಳ ಕಲಿಕೆಗೆ ಹಾಗೂ ಸುರಕ್ಷತೆಗೆ ಅನುಕೂಲಕರ ವಾತಾವರಣ ಒದಗಿಸಬೇಕಾದ ಹೊಣೆಗಾರಿಕೆಯನ್ನು ಹೊಂದಿದ್ದು ಇಂತಹ ಘಟನೆಗಳು ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವಾಸ್ತವಂಶವನ್ನು ಅರಿತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

More articles

Latest article

Most read