Thursday, July 25, 2024

ರಾಜ್ಯಸಭೆ ಚುನಾವಣೆ: ಸ್ವಾಭಿಮಾನಿ ಕನ್ನಡಿಗರ ನಿರ್ಣಾಯಕ ಗೆಲುವು – ರಣದೀಪ್ ಸಿಂಗ್ ಸುರ್ಜೆವಾಲಾ

Most read

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು 6.5 ಕೋಟಿ ಸ್ವಾಭಿಮಾನಿ ಕನ್ನಡಿಗರ ನಿರ್ಣಾಯಕ ಗೆಲುವಾಗಿದೆ ಎಂದು  ಸಂಸದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲಾ ಪ್ರತಿಪಾದಿಸಿದ್ದಾರೆ.

ರಾಜ್ಯಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಹರ್ಷವ್ಯಕ್ತಪಡಿಸಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನು ಪ್ರಜಾಪ್ರಭುತ್ವದ ನಿರ್ಣಾಯಕ ಗೆಲುವು ಎಂದೂ ಹೇಳಿರುವ ಅವರು, ಸಂವಿಧಾನಾತ್ಮಕ ಚುನಾವಣಾ ಪ್ರಕ್ರಿಯೆಯಲ್ಲಿ ಶಾಸಕರ ಖರೀದಿಗೆ ಮುಂದಾಗಿ ಬ್ರಷ್ಟಾಚಾರದಲ್ಲಿ ತೊಡಗಿದ್ದವರಿಗೆ ಇದೊಂದು ನಿರ್ಣಾಯಕ ಸೋಲು ಕೂಡ ಆಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಡಿಯೂರಪ್ಪಾ, ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದ ಸುರ್ಜೆವಾಲಾ, ‘ನಿಮ್ಮಲ್ಲಿ ಅಗತ್ಯ ಶಾಸಕರ ಬಲ ಇಲ್ಲದಿದ್ದರೂ, ಒಬ್ಬ ಉದ್ಯಮಿಯನ್ನು ಕಣಕ್ಕೆ ಇಳಿಸುವ ಮೂಲಕ ಕರ್ನಾಟಕದ ಜನತೆ ಆಶೀರ್ವದಿಸಿ ಕಳಿಸಿದ ಶಾಸಕರ ನಿಷ್ಠೆಯನ್ನು ಖರೀದಿ ಮಾಡಲು ಪ್ರಯತ್ನಿಸಿದ್ದು ಯಾಕೆ ಎಂದಿದ್ದಾರೆ. ಇದು ನಿಮಗೆ ತೀರಾ ಅವಮಾನಕರ ಸಂಗತಿ. ಪ್ರಜ್ಞಾವಂತರಾದ ನಮ್ಮ ಶಾಸಕರು ಪ್ರಜಾಪ್ರಭುತ್ವಕ್ಕೆ ಕಳಂಕವನ್ನುಂಟು ಮಾಡಬಲ್ಲ ನಿಮ್ಮ ಪಿತೂರಿಗೆ ಬಲಿಯಾಗದೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದಾರೆ. ಕರ್ನಾಟಕದ ಜನತೆಯ ಅಮೂಲ್ಯ ಮತಗಳಿಂದ ಆರಿಸಿ ಬಂದಿರುವ ಎಲ್ಲ ಶಾಸಕರು ನಿಮ್ಮ ‘ಆಯಾರಾಮ ಗಯಾರಾಮ’ ರಾಜಕಾರಣ ತಳ್ಳಿಹಾಕಿ ಶಾಸಕರ ಖರೀದಿಯ ಬ್ರಷ್ಟಾಚಾರವನ್ನು ತಿರಸ್ಕರಿಸಿದ್ದಾರೆ.

ಈ ಗೆಲುವು ಕೇವಲ ಕಾಂಗ್ರೆಸ್ ಗೆಲುವಲ್ಲ. ಇದು ಕೇವಲ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಸೇರಿದಂತೆ ಶಾಸಕರ ಗೆಲುವು ಮಾತ್ರ ಆಗಿರದೆ ಸಾಮಾನ್ಯ ಕನ್ನಡಿಗನ ಗೆಲುವಾಗಿದೆ. ಪ್ರಜಾಪ್ರಭುತ್ವದ ತತ್ವಗಳಲ್ಲಿ ಬದ್ಧತೆಯನ್ನು ತೋರಿ ಈ ನಿರ್ಣಾಯಕ ಗೆಲುವಿಗೆ ಕಾರಣರಾದ ಎಲ್ಲ ಶಾಸಕರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

More articles

Latest article