Thursday, May 23, 2024

“ನಾಸೀರ್ ಸಾರ್ ಜಿಂದಾಬಾದ್‌” ಎಂದಿದ್ದನ್ನು “ಪಾಕಿಸ್ತಾನ್ ಜಿಂದಾಬಾದ್” ಎಂದು ಬಿಂಬಿಸುತ್ತಿರುವ ಮಾಧ್ಯಮಗಳು

Most read

ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಸಂಸತ್ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ ದೊಡ್ಡ ಸಂಭ್ರಮಾಚರಣೆ ವೇಳೆ ಕೂಗಿದ ಘೋಷಣೆಯನ್ನು ಪಾಕಿಸ್ತಾನ್ ಜಿಂದಾಬಾದ್ ಎಂಬ ಕೂಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿ ಎಲ್ಲೆಡೆ ಸುಳ್ಳು ಹರಡಿದೆ.

ಹೌದು, ಮಾಧ್ಯಮಗಳಲ್ಲಿ ಘೋಷಣೆ ಕೂಗಿದ ವೀಡಿಯೋ ವೈರಲ್ ಆಗತೊಡಗಿವೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಾಸೀರ್ ಹುಸೇನ್ ಪರ 47 ಮತಗಳು ಚಲಾವಣೆಯಾಗಿವೆ. ನಾಸಿರ್ ಹುಸೇನ್ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾಗ ಅವರ ಹಿಂದೆ ನಿಂತಿದ್ದ ಯುವಕರ ಗುಂಪು ಹಲವು ಬಾರಿ ನಾಸಿರ್ ಪರ ಘೋಷಣೆ ಕೂಗಿದೆ.

ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ , “ನಾಸೀರ್ ಸಾಬ್ ಜಿಂದಾಬಾದ್‌” ಎಂದು ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದ್ದರೂ ಮಾಧ್ಯಮಗಳು “ಪಾಕಿಸ್ತಾನ ಜಿಂದಾಬಾದ್‌” ಎಂದು ಕೂಗುತ್ತಿದ್ದಾರೆ ಎಂದು ಸುದ್ದಿ ಬಿತ್ತರಿಸಿ ಸಮಾಜದ ಸಾಮರಸ್ಯವನ್ನು ಕದಡುವ ಕೆಲಸ ಮಾಡುತ್ತಿದ್ದಾರೆ.

ನಾಸಿರ್ ಹುಸೇನ್‌ ಬೆಂಬಲಿಗರ ಘೋಷಣೆ ವಿಚಾರದ ಕುರಿತಾಗಿ ಮಾಧ್ಯಮಗಳ ಪ್ರಶ್ನೆಗೆ ನಾಸಿರ್ ಹುಸೇನ್‌, ‘ಏಯ್ ನಡಿಯೋ.. ಯಾವನೋ ಅವನು. ಹುಚ್ಚ ನ ಹಾಗೆ ಪ್ರಶ್ನೆ ಕೇಳಬೇಡ ಎಂದಿದ್ದಾರೆ.

ಈ ಕುರಿತು ಪ್ರಗತಿಪರ ಚಿಂತಕರಾದ ಡಾ.ವಾಸು ಅವರ ತಮ್ಮ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಈ ಮಾಧ್ಯಮಗಳನ್ನು ಯಾವ ಕಸದ ತೊಟ್ಟಿಗೂ ಹಾಕಬಾರದು.. ಕಸಕ್ಕೂ ಅಪಾಯ. ನಾಸಿರ್ ಸಾಬ್ ಜಿಂದಾಬಾದ್ ಅಂತ ಕೂಗ್ತಾ ಇರೋದು ಗೊತ್ತಿದ್ದರೂ, ಅವರವರ ಮನಸ್ಸಿನಲ್ಲಿ ಯಾವಾಗಲೂ ಪಾಕಿಸ್ತಾನವೇ ಇರೋದ್ರಿಂದ ಅದೇ ಕೇಳುತ್ತೆ ಎಂದು ಕಿಡಿಕಾರಿದ್ದಾರೆ.

ಮುಂದುವರೆದು, ಬಿಜೆಪಿ – ಜೆಡಿಎಸ್ ಸೋಲನ್ನ (ಅದು ಮೊದಲೇ ಸ್ಪಷ್ಟವಾಗಿತ್ತು) ಅರಗಿಸಿಕೊಳ್ಳಲಾಗದೇ ಈ ಮಟ್ಟಕ್ಕೆ ಇಳಿಯಬಾರದು. ಇನ್ನು ಇಡೀ ಬಿಜೆಪಿ ಐಟಿ ಸೆಲ್‌ಗೆ ಮೂರು ದಿನ‌ ಇದೇ ಕೆಲಸ. ಅದರ ರಾಷ್ಟ್ರೀಯ ಮುಖ್ಯಸ್ಥ ಮಾಳವೀಯ ಅಂತೂ ಅತ್ಯಂತ ನೀಚ ಮನಸ್ಥಿತಿಯವ.

ಅಭಿವೃದ್ಧಿಯ ಹೆಸರಿನಲ್ಲಿ ಗೆದ್ದು ಬರುವ ಧೈರ್ಯ ಇರುವ ಯಾರಾದರೂ ಇಂತಹ ನೀಚ ಮಟ್ಟಕ್ಕೆ ಇಳಿಯುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

More articles

Latest article