ಇನ್ ಫೋಸಿಸ್ ನಾರಾಯಣ ಮೂರ್ತಿ ಧ್ವನಿ ಬಳಸಿ ಆನ್ ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವಂಚನೆ;

Most read

ಬೆಂಗಳೂರು: ವಂಚನೆಗೆ ರಾಜಕಾರಣಿಗಳು, ಪೊಲೀಸ್ ಮತ್ತು ಅಧಿಕಾರಿಗಳ ಹೆಸರು ಬಳಸುವುದು ಸರ್ವೇ ಸಾಮಾನ್ಯ. ಆದರೆ ಈ ವಂಚಕರು ದೇಶದ ಮಹಾನ್ ಉದ್ಯಮಿಗಳಾದ ಇನ್ ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅಂಬಾನಿ ಅವರ ಹೆಸರು ಮತ್ತು ಅವರದ್ದೇ ಧ್ವನಿ ಬಳಸಿ ವಂಚಿಸಿದ್ದಾರೆ.

ಆನ್ ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಉದ್ಯಮಿಗಳ ಹೆಸರು ಹಾಗೂ ಅವರದೇ ಶೈಲಿಯ ಧ್ವನಿ ಡೀಪ್ ಫೇಕ್ ಬಳಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೈಬರ್ ವಂಚಕರು ಮಹಿಳೆ ಮತ್ತು ನಿವೃತ್ತ ನೌಕರರೊಬ್ಬರಿಗೆ 68 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಈ ಸಂಬಂಧ ಸೈಬರ್ ಅಪರಾಧ ಠಾಣೆಗಳಲ್ಲಿ
ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ
ಮೂರ್ತಿ ಹಾಗೂ ರಿಲಯನ್ಸ್ ಕಂಪನಿಯ
ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ‘ಎಫ್‌ಎಕ್ಸ್
ರೋಡ್. ಕಾಂ’ ಟ್ರೇಡಿಂಗ್ ಕುರಿತು ಮಾಹಿತಿ ನೀಡಿದಂತೆ ಫೇಸ್‌ಬುಕ್‌ ನಲ್ಲಿ ಸೈಬರ್ ವಂಚಕರು ಪೋಸ್ಟ್ ವೊಂದನ್ನು ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ನಿವೃತ್ತ ನೌಕರರೊಬ್ಬರು ಹಣ ಕಳೆದುಕೊಂಡಿದ್ದಾರೆ.

ಸೈಬರ್ ವಂಚಕನೊಬ್ಬ ಮೇ. 30ರಂದು ವ್ಯವಸ್ಥಾಪಕರೊಬ್ಬರ ಸೋಗಿನಲ್ಲಿ ಕರೆ ಮಾಡಿ ಲಿಂಕ್ ಕಳುಹಿಸಿದ್ದ. ಆ ಲಿಂಕ್ ಬಳಸಿಕೊಂಡು ನಿವೃತ್ತ
ನೌಕರರೊಬ್ಬರು ಹೂಡಿಕೆ ಖಾತೆ ತೆರೆದಿದ್ದರು. ಲಾಭದ
ಆಸೆಯಿಂದ ಅವರು ಮೂರು ಬ್ಯಾಂಕ್ ಖಾತೆಗಳಿಂದ
ಮೇ. 30 ರಿಂದ ಅಕ್ಟೋಬರ್ 3 ರ ಮಧ್ಯೆ ಒಟ್ಟು 19
ಲಕ್ಷ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಹಣಕ್ಕೆ
ಯಾವುದೇ ಲಾಭಾಂಶ ನೀಡಿಲ್ಲ. ಜೊತೆಗೆ ಅಸಲು ಹಣವನ್ನೂ ನೀಡದೇ ಮೋಸ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ಮಹಿಳೆಗೆ 67 ಲಕ್ಷ ವಂಚನೆ:
ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಸೆಪ್ಟೆಂಬರ್ 23 ರಂದು ಫೇಸ್‌ಬುಕ್‌ನಲ್ಲಿ ‘ಎಫ್‌ಎಕ್ಸ್ ರೋಡ್ ಪ್ಲಾಟ್‌ಫಾರಂ’ ಟ್ರೇಡಿಂಗ್ ಕುರಿತು ಎನ್.ಆರ್. ನಾರಾಯಣ ಮೂರ್ತಿ ಅವರು ಮಾತನಾಡಿದಂತೆಯೇ ಮಾಹಿತಿ ನೀಡಲಾಗಿತ್ತು. ನಂತರ, ಅಪರಿಚಿತ ವ್ಯಕ್ತಿಯೊಬ್ಬ ಕೆ.ಜಿ.ವೀಣಾ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿ, ಈ ಪ್ಲಾಟ್‌ಫಾರಂನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದ.
ಆತನ ಮಾತನ್ನು ನಂಬಿದ ವೀಣಾ ಅವರು
ಕೆನರಾ ಬ್ಯಾಂಕ್ ಖಾತೆಯಿಂದ 1.39 ಲಕ್ಷ ಹೂಡಿಕೆ
ಮಾಡಿದ್ದರು. ಆ ಹಣಕ್ಕೆ ಆರಂಭದಲ್ಲಿ 8,363
ಲಾಭಾಂಶವನ್ನು ವಂಚಕರು ನೀಡಿದ್ದರು. ಇದನ್ನೇ
ನಂಬಿದ್ದ ಮಹಿಳೆ ಹಂತಹಂತವಾಗಿ 67 ಲಕ್ಷ ಹೂಡಿಕೆ
ಮಾಡಿದ್ದರು. ಹೂಡಿಕೆ ಮಾಡಿದ ಹಣಕ್ಕೆ 55,997 ಮಾತ್ರ ಮರಳಿಸಿದ್ದಾರೆ ವೀಣಾ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ

More articles

Latest article