ಸಶಕ್ತವಾದ ಪರ್ಯಾಯ ಮಾಧ್ಯಮವೊಂದರ ಅವಶ್ಯಕತೆಯನ್ನು ಮನಗಂಡು ಹರ್ಷಕುಮಾರ್ ಕುಗ್ವೆ ಸರ್ ಮತ್ತು ದಿನೇಶ್ ಸರ್ ನಿರ್ಧಾರ ಮಾಡಿ ಕನ್ನಡ ಪ್ಲಾನೆಟ್ ಎಂಬ ಹೆಸರಿನೊಂದಿಗೆ ಹೊಸ ಜಾಲತಾಣವೊಂದನ್ನು ಒಂದು ವರುಷದ ಹಿಂದೆ ಪ್ರಾರಂಭಿಸಿಯೇ ಬಿಟ್ಟರು. ಡಾ.ವಿಜಯಮ್ಮ (ಹಿರಿಯ ಪತ್ರಕರ್ತರು) ಅವರಿಂದ ಅದು ಉದ್ಘಾಟನೆ ಗೊಂಡಿತ್ತು.
ಈ ದುರಿತ ಕಾಲದಲ್ಲಿ ಒಂದು ಪರ್ಯಾಯ ಮಾಧ್ಯಮವನ್ನು ಕಟ್ಟುವುದು, ನಡೆಸುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ ಬರುವ ಕಷ್ಟಗಳನ್ನು ಮೆಟ್ಟಿ ನಿಂತು ಎದುರಿಸಿ ಮುನ್ನಡೆಯುತ್ತಿರುವ ಕನ್ನಡ ಪ್ಲಾನೆಟ್ ಬಳಗ ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಹೀಗೇ ಅದು ಮುಂದುವರಿಯಲಿ. ಪ್ರತಿದಿನ ಹತ್ತು ಜನ ಹೊಸಬರಿಗಾದರೂ ಈ ಕನ್ನಡ ಪ್ಲಾನೆಟ್ ಪರಿಚಯವಾಗಲಿ ಎಂದು ಆಶಿಸುತ್ತೇನೆ. ನನ್ನಂತಹ ಅತಿ ಕಿರಿಯರಿಗೆ ಬರೆಯಲು ಒಂದು ವೇದಿಕೆಯನ್ನು ಒದಗಿಸಿಕೊಟ್ಟು ಯುವ ಬರಹಗಾರರಿಗೆ ತುಂಬಾ ಬೆಂಬಲವಾಗಿ ನಿಂತಿರುವುದು ಅದರ ಕಾಳಜಿಗಳಲ್ಲೊಂದಾಗಿದೆ.
ಈಗಿನ ಕಾಲದ ಮುಖ್ಯ ವಾಹಿನಿಗಳು ಬೇಗ ಬೆಳೆಯಲಿ ಅಂತ ಸುಳ್ಳು ಸುದ್ದಿಗಳನ್ನು ಜನರಿಗೆ ತಲುಪಿಸುತ್ತಾರೆ. ಆದರೆ ಈ ಕನ್ನಡ ಪ್ಲಾನೆಟ್ ನಿಯತ್ತಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಯಾವುದೇ ಸುಳ್ಳು ಸುದ್ದಿ ನೀಡದೆ ಪ್ರಾಮಾಣಿಕವಾದ ನೈಜ ಸುದ್ದಿಗಳನ್ನು, ಮಾಹಿತಿಗಳನ್ನು, ಜನಾಂದೋಲನದ ಅಭಿಪ್ರಾಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಒಂದು ವರ್ಷದಲ್ಲಿ ಇದರ ಫೇಸ್ಬುಕ್ ಫಾಲೋವರ್ಸ್ ಹದಿನೆಂಟು ಸಾವಿರಕ್ಕೂ ಹೆಚ್ಚಾಗಿದ್ದಾರೆ. ಯೂಟ್ಯೂಬ್ ಚಂದಾದಾರಿಕೆ ಕೂಡ ಒಂದು ಹಂತ ತಲಪಿದೆ. ಮುಂದಿನ ದಿನಗಳಲ್ಲಿ ಸ್ಟಾರ್ ಚಾನೆಲ್‌ಗಳಲ್ಲಿ ಪ್ಲಾನೆಟ್ ಕೂಡಾ ಒಂದಾಗಲಿ ಎಂದು ಬಯಸುತ್ತೇನೆ.
ಈ ಒಂದು ವರ್ಷದ ನಡಿಗೆಯ ಸಂಭ್ರಮವನ್ನು ಹಂಚಿಕೊಳ್ಳಲು ಶನಿವಾರ ದಿ:11-01-2025 ರಂದು ಅಂಬೇಡ್ಕರೈಟ್ ಯೂತ್ ಫೆಡರೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕನ್ನಡ ಪ್ಲಾನೆಟ್ ಇನ್ನಷ್ಟೂ ಬೆಳಗಲಿ, ನಮ್ಮಂತಹವರ ಬರಹಗಳು ಹೆಚ್ಚೆಚ್ಚು ಪ್ರಕಟಗೊಂಡು ನಾವೂ ಸಮಾಜಮುಖಿ ಬರಹಗಾರ\ಗಾರ್ತಿಯಾಗಲು ಸಹಕರಿಸಲಿ ಎಂದು ಆಶಿಸುತ್ತೇನೆ. ಶುಭಾಶಯಗಳು.
ಎಸ್. ಕೆ ಉಮೇಶ್
ಪತ್ರಿಕೋದ್ಯಮದ ಪದವಿ ವಿದ್ಯಾರ್ಥಿ, ಧಾರವಾಡ
ಇದನ್ನೂ ಓದಿ- http://ಪರ್ಯಾಯ ಮಾಧ್ಯಮವೆನ್ನುವ ಜನಪಥ… https://kannadaplanet.com/alternative-media/