Thursday, December 12, 2024

ಮುಡಾ: 50:50 ಅನುಪಾತದಡಿ ಹಂಚಿಕೆ ಮಾಡಿದ್ದ ನಿವೇಶನ ಜಪ್ತಿಗೆ ನಿರ್ಣಯ

Most read

ಮೈಸೂರು: ಮುಡಾ ಹಗರಣ ಕೇಳಿ ಬಂದ ನಂತರ ಇದೇ ಮೊದಲ ಬಾರಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆ ನಡೆಯಿತು. ಮುಡಾ ಕಚೇರಿಯಲ್ಲೇ ನಡೆದ ಸಭೆಯಲ್ಲಿ ಶಾಸಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.


ಸುಧೀರ್ಘವಾಗಿ ನಡೆದ ಸಭೆಯಲ್ಲಿ 50:50 ಅನುಪಾತದಡಿಯಲ್ಲಿ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಭಾಗವಹಿಸದದ ಬಹುತೇಕ ಸದಸ್ಯರು ನಿವೇಶನಗಳ ಜಪ್ತಿಗೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಮುಡಾ ನಿವೇಶನ ಹಂಚಿಕೆ ಕುರಿತು ತನಿಖೆಗಾಗಿ ರಚಿಸಲಾಗಿರುವ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರ ವರದಿ ಬಂದ ನಂತರ ನಿವೇಶನ ಜಪ್ತಿ ವರದಿ ಅಂಗೀಕರಿಸಲು ತೀರ್ಮಾನಿಸಲಾಗಿದೆ. ಒಂದು ರೀತಿಯಲ್ಲಿ 50:50 ಅನುಪಾತದಡಿ ಸೈಟ್ ಪಡೆದವರಿಗೆ ಬಿಗ್ ಶಾಕ್ ಎಂದೇ ಹೇಳಬಹುದು.
ಮುಡಾ ಸ್ವಚ್ಚವಾಗಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. 2020 ರಿಂದ 50:50 ಅನುಪಾತದ ಅಡಿಯಲ್ಲಿ ಸೈಟಗಳನ್ನು ಹಂಚಿಕೆ ಮಾಡಲಾಗಿದೆ. ಕೆಲವೊಂದು ಪ್ರಕರಣದಲ್ಲಿ ಪರಿಹಾರ ಪಡೆದಿದ್ದರೂ 50:50 ಅನುಪಾತದಡಿ ನಿವೇಶನಗಳನ್ನೂ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಸಭೆಯಲ್ಲಿ ನಾನು ಮಾತನಾಡಿದ್ದೇನೆ ಎಂದು ಜೆಡಿಎಸ್ ಶಾಸಕ ಹರೀಶ್ ಗೌಡ ಹೇಳಿದ್ದಾರೆ.


ಬಿಜೆಪಿ ಶಾಸಕ ಶ್ರೀವತ್ಸ ಮಾತನಾಡಿ 50-50 ಅನುಪಾತದ ಸೈಟ್ ರದ್ದು ಮಾಡಬೇಕು ಎಂದು ಮನವಿ ಮಾಡಿದ್ಧೇನೆ. ನ್ಯಾ.ದೇಸಾಯಿ ಆಯೋಗ ತನಿಖೆ ಮಾಡುತ್ತಿದೆ. ಅವರು ವರದಿ ಏನು ಕೊಡುತ್ತಾರೆ, ಅವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದರು. ನಿವೇಶನಗಳನ್ನು ಕಾನೂನುನಾತ್ಮಕವಾಗಿ ಇರುವವರಿಗೆ ನೀಡಬೇಕು. ಮೊದಲು ಆಯೋಗದ ತನಿಖಾ ವರದಿ ಬರಲಿ. ನಂತರ ನಿರ್ಧಾರ ಮಾಡೋಣ ಎಂಬ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.

More articles

Latest article