Tuesday, December 10, 2024

ಬಿಷಪ್ ಕಾಟನ್ ಶಾಲೆಗೆ ಬಾಂಬ್ ಬೆದರಿಕೆ

Most read

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಬಿಷಪ್ ಕಾಟನ್ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬೆದರಿಕೆಯ ಸಂದೇಶ ಬಂದಿದೆ. ಶಾಲೆಯ ವೆಬ್ ಸೈಟ್ ಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರತಿಷ್ಠಿತ ಶಾಲೆ ಇದೆ. ಶಾಲೆಯ ಸಿಬ್ಬಂದಿ ಕೂಡಲೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಇದೊಂದು ಹುಸಿ ಬೆದರಿಕೆ ಎನ್ನುವುದು ಕಂಡು ಬಂದಿದೆ.

More articles

Latest article