ಮುಂದಿನ ದಿನಗಳಲ್ಲಿ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ, ಎಚ್ಚರದಿಂದಿರಲು ಸೂಚನೆ

ಬೆಂಗಳೂರು : ಅಬ್ಬಬ್ಬಾ ಬೆಳಗ್ಗೆ 8ಗಂಟೆಗೆ ಎಂಥಾ ಬಿಸಿಲು.  11 ಗಂಟೆಗೆ ಹೊರಗೆ ಕಾಲಿಡಲು ಆಗಲ್ಲ. ಮಧ್ಯಾಹ್ನದಿಂದ ಸಂಜೆ ತನಕ  ಮನೆಯಿಂದ ಹೊರಗೆ ಬರಲೇಬಾರದು. ಹೀಗಂತ ಮಾತನಾಡಿಕೊಳ್ಳೋದು ಸಾಮಾನ್ಯ ಆಗಿದೆ. 

ಹೌದು.. ಎಚ್ಚರದಿಂದಿರಿ. ಗಾರ್ಡನ್‌ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಲ್ಲೇ  ಬಿಸಿಲು 40 ಡಿಗ್ರಿ ಅಸುಪಾಸಿನಲ್ಲಿದೆ. ಇನ್ನೂ ಉತ್ತರ ಕರ್ನಾಟಕದಲ್ಲಂತೂ ಕೇಳುವಂತೆಯೇ ಇಲ್ಲ. ಹವಾಮಾನ ಇಲಾಖೆ ನೀಡಿರುವ ಅಲರ್ಟ್‌ ಇನ್ನೂ ಮುಂದುವರೆದಿದೆ. ಕರಾವಳಿ ಭಾಗ, ಕಲ್ಯಾಣ ಕರ್ಣಾಟಕದ ಎಲ್ಲಾ ಜಿಲ್ಲೆಗಳು ರಣ ಬಿಸಿಲಿನಿಂದ ತತ್ತರಿಸಿವೆ. ಜನ ಹೊರ ಬರಲು ಹೆದರುತ್ತಿದ್ದಾರೆ. ಮಕ್ಕಳು ಮನೆಯಲ್ಲೇ ಕುಳಿತುಕೊಳ್ಳುವಂತೆ ಮಾಡಿದೆ ಈ ಬಿಸಿಲು.

45 ಡಿಗ್ರಿಗೆ ತಾಪಮಾನ ಹೆಚ್ಚಳ : ಮುಂದಿನ ದಿನಗಳಲ್ಲಿ ಬಿಸಲು 45 ಡಿಗ್ರಿಯಷ್ಟು ಆಗಲಿದ್ದು ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜನ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಅಲರ್ಟ್‌ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಹೊರ ಬಾರದಂತೆ ಸೂಚನೆ ನೀಡಿದ್ದಾರೆ.

ಹೀಟ್‌ವೇವ್‌ ಜೊತೆ ಮಳೆ :  ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೀಟ್‌ ವೇವ್‌ ಕೂಡ ಅಪ್ಪಳಿಸಲಿದೆ. ಜೊತೆಗೆ ಅಕಾಲಿಕ ಮಳೆಯೂ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಯಚೂರಿನ ಜನರೇ ಹುಷಾರಾಗಿರಿ : ಗಡಿ ಜಿಲ್ಲೆ ರಾಯಚೂರನ್ನು ಬಿಸಿಲು ನಾಡು ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ರಾಯಚೂರಿನಲ್ಲಿ ತಾಪಮಾನ ಹೆಚ್ಚಾಗಿ, ಜನರನ್ನ ಕುಗ್ಗಿಸುತ್ತಿದೆ.  ಈ ಬಾರಿ ಆಗಲೇ ಜಿಲ್ಲೆಯಲ್ಲಿ ತಾಪಮಾನ 42 ಡಿಗ್ರಿಯಷ್ಟು ದಾಖಲಾಗಿದೆ.  ಹೆಚ್ಚು ಬಿಸಿಗಾಳಿ ಕೂಡ ಅಬ್ಬರಿಸುತ್ತಿದೆ. ಇದು ತಾಪಮಾನದ ಹೊಡೆತಕ್ಕಿಂತ ಹೆಚ್ಚು ಭಯಾನಕವಾಗಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚಿಸಿದೆ. ಮಧ್ಯಾಹ್ನದ ವೇಳೆ ಹೊರಗಡೆ ಓಡಾಡದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಕೆಲವೆಡೆ ಮಳೆ : ಬಿಸಿಲಿನ ತಾಪಮಾನ ಒಂದೆಡೆಯಾದರೆ ಹಾಸನ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳಿಲ್ಲಿ ಜೋರು ಮಳೆಯಾಗಿದೆ. ಹಾಸನದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಉತ್ತರ ಒಳನಾಡಿನ ವಿಜಯಪುರ, ಕಲಬುರ್ಗಿ, ಯಾದಗಿರಿ, ಬೆಳಗಾವಿ ಮತ್ತು ಧಾರವಾಡ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  

ವೇಗದಲ್ಲಿ ಬೀಸಲಿದೆ ಗಾಳಿ : ಮಳೆಯ ತನಕ ರಾಜ್ಯದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯೊಂದಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  

More articles

Latest article

Most read