ವಾಷಿಂಗ್ಟನ್ : ತಾನು ಓದುತ್ತಿರುವ ಕಾಲೇಜಿನ ಕ್ಯಾಂಪಸ್‌ಗೆ ಬಾಂಬ್ ಹಾಕಿ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಸೂಚಿಸುವ ವಾಟ್ಸಾಪ್ ಸಂದೇಶವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯನ್ನು ಗುರುವಾರ ಬಂಧಿಸಲಾಗಿದೆ.
ಫ್ಲೋರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ 23 ವರ್ಷದ ವಿದ್ಯಾರ್ಥಿನಿ ಗೇಬ್ರಿಯೆಲಾ ಸಲ್ಡಾನಾ, ವಿಶ್ವವಿದ್ಯಾಲಯದ ವಾಟ್ಸಾಪ್ ಗುಂಪಿನಲ್ಲಿ “ನೆತನ್ಯಾಹು, ನೀವು ನನ್ನ ಮಾತು ಕೇಳಿ, ಓಷನ್ ಬ್ಯಾಂಕ್ ಘಟಿಕೋತ್ಸವ ಕೇಂದ್ರದಲ್ಲಿರುವ ನಮಗೆ ಕ್ಯಾಪ್‌ಸ್ಟೋನ್ ವಿದ್ಯಾರ್ಥಿಗಳಿಗೆ ಕೆಲವು ಬಾನ್‌ಬನ್‌ಗಳನ್ನು ನೀಡಿ” ಎಂದು ಬರೆದಿದ್ದಳು ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳು “ಬಾನ್‌ಬನ್ಸ್” ಎಂಬ ಪದವನ್ನು ಬಾಂಬ್‌ಗಳ ಉಲ್ಲೇಖವೆಂದು ಅರ್ಥೈಸಿಕೊಂಡು, ಸಲ್ಡಾನಾ ಎಫ್‌ಐಯುನ ಓಷನ್ ಬ್ಯಾಂಕ್ ಘಟಿಕೋತ್ಸವ ಕೇಂದ್ರದಲ್ಲಿ ನಡೆದ ಕ್ಯಾಪ್‌ಸ್ಟೋನ್ ಕಾರ್ಯಕ್ರಮವನ್ನು ದಾಳಿ ಮಾಡಲು ಬಯಸಿದ್ದಾಳೆ ಎಂದು ತೀರ್ಮಾನಿಸಿ ಆಕೆಯನ್ನು ಬಂಧಿಸಲಾಗಿದೆ.
ಸಲ್ಡಾನಾ ಆ ಪೋಸ್ಟನ್ನು ತಮಾಷೆಗೆ ಹಾಕಿದ್ದಾಳೆ. ಕಾರ್ಯಕ್ರಮದ ವಿಚಾರವಾಗಿ ಆವಳು ಬೇಸರ ಮಾಡಿಕೊಂಡಿದ್ದಳು. ಹೀಗಾಗಿ, ಆ ರೀತಿ ಪೋಸ್ಟ್ ಹಾಕಿದ್ದಾಳೆ ಎಂದು ಇತರೆ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದರು. ಕೊನೆಗೆ ತನ್ನ ಪೋಸ್ಟ್‌ಗೆ ವಿದ್ಯಾರ್ಥಿನಿ ಕ್ಷಮೆಯಾಚಿಸಿದಳು. ಆದರೂ, ಆಕೆಯನ್ನು ಬಂಧಿಸಲಾಯಿತು.
ಕ್ಯಾಂಪಸ್‌ನ ಪಾರ್ಕಿಂಗ್ ಗ್ಯಾರೇಜ್ ಬಳಿ ಬಂಧಿಸಿದ ನಂತರ ಆಕೆಯನ್ನು ಮಿಯಾಮಿಯ ಟರ್ನರ್ ಗಿಲ್‌ಫೋರ್ಡ್ ನೈಟ್ ತಿದ್ದುಪಡಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಆಕೆ ನ್ಯಾಯಾಧೀಶ ಮಿಂಡಿ ಎಸ್ ಗ್ಲೇಜರ್ ಮುಂದೆ ಹಾಜರಾದಳು. ಆಕೆಗೆ 5,000 ಡಾಲರ್ (4,65,391 ರೂಪಾಯಿ) ದಂಡ ವಿಧಿಸಿ ಜಾಮೀನು ನೀಡಲಾಯಿತು.
ನನ್ನ ಕಾಲೇಜಿನ ಮೇಲೆ ಬಾಂಬ್ ಹಾಕಿ ಎಂದು ನೆತನ್ಯಾಹುಗೆ ಹೇಳಿದ್ದ ಯುವತಿ ಬಂಧನ