Saturday, July 27, 2024

ಜನವರಿ 28ಕ್ಕೆ ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ

Most read

ಶೋಷಿತ ಸಮುದಾಯಗಳಿಗೆ ಜಾಗೃತಿ ಮೂಡಿಸುವ ಉದ್ದೇಶ ಹಾಗು ಕಾಂತರಾಜ್ ವರದಿ ಬಿಡುಗಡೆಗೆ ಒತ್ತಾಯ ಮಾಡಲು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದೂಳಿದ ಜಾತಿಗಳ ಒಕ್ಕೂಟ ಇದೇ ಜನವರಿ 28ರಂದು ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿ ಮಾಡಿದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಶೋಷಿತ ಸಮುದಾಯಗಳ ಶಾಸಕರು, ಸಚಿವರು, ಹಾಗು ಮುಖಂಡರುಗಳು ಭಾಗವಹಿಸಲಿದ್ದಾರೆ’ ಎಂದು ಒಕ್ಕೂಟ ತಿಳಿಸಿದೆ.

‘ಸಂವಿಧಾನ, ಸಮಾಜಿಕ ನ್ಯಾಯ, ಸಹಬಾಳ್ವೆ, ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಶೋಷಿತರ ಜಾಗೃತಿ ಮೂಡಿಸುವುದು ಇದರ ಬಹು ಮುಖ್ಯ  ಉದ್ದೇಶ ಮತ್ತುಆರ್ಥಿಕ, ಸಮಾಜಿಕ, ರಾಜಕೀಯ, ಹಾಗೂ ಶೈಕ್ಷಣಿಕವಾಗಿ ಹಿಂದೂಳಿದಿರುವ ನಮಗೆ ಕಾಂತರಾಜ್ ವರದಿ ಬಿಡುಗಡೆಗೊಳಿಸಿ, ಸಾರ್ವಜನಿಕ ಚರ್ಚೆ ಬಿಟ್ಟು ಅಂಗೀಕರಿಸಲು ಒತ್ತಾಯ ನ್ಯಾಯಯುತವಾಗಿ ಅಧಿಕಾರ ನೀಡಲು ಒತ್ತಾಯ ಮಾಡಲಾಗುವುದು’ ಎಂದು ಒಕ್ಕೂಟದ ಸಂಚಾಲಕರಾದ ಕೆ ಎಂ ರಾಮಚಂದ್ರಪ್ಪ ಹೇಳಿದರು.

‘ಕೇಂದ್ರ ಸರ್ಕಾರ ಕೇವಲ 3% ರಿಂದ 4% ಇರುವ ಸಮುದಾಯಕ್ಕೆ 10% ಮೀಸಲಾತಿಯನ್ನು ಜಾರಿ ಮಾಡಿದೆ. ಆದರೆ ಬಹುಸಂಖ್ಯಾತರಾದಂತಹ ಹಿಂದುಳಿದ ವರ್ಗಗಳಿಗೆ ಸಂವಿಧಾನ ಬದ್ದವಾದ ಹಕ್ಕುಗಳನ್ನ ನೀಡದೆ ಮೋಸ ಮಾಡಿದೆ. ಆದ್ದರಿಂದ ಸಂವಿಧಾನದ ಹಕ್ಕುಗಳನ್ನು ಪಡೆಯಲು ಈ ಸಮಾವೇಶ ಕೈಗೊಂಡಿದ್ದೇವೆ. ಸಮಾವೇಶದಲ್ಲಿ ಸುಮಾರು 12 ಹಕ್ಕೋತ್ತಾಯಗಳನ್ನು ಮಂಡಿಸಲಾಗುವುದು. ಸುಮಾರು 10 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವ ನಿರೀಕ್ಷೆ ಇದೆ. ದಲಿತ, ಹಿಂದೂಳಿ, ಆದಿವಾಸಿ, ಅಲ್ಪಸಂಖ್ಯಾತ ಮತ್ತು ಜನಪರ ಕಾಳಜಿಯುಳ್ಳತಂಹ ಸಂಘಟನೆಗಳು ಭಾಗವಹಿಸುತ್ತವೆ. ಆದ್ದರಿಂದಲೇ, ಚಿತ್ರದುರ್ಗದ ಮಾದರ ಚೆನ್ನಯ್ಯ ಮಠದ ಪಕ್ಕದ ಸುಮಾರು 150 ಎಕ್ಕರೆ ಜಾಗದಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದ್ದೆವೆ’ ಎಂದು ಸಂಘಟಕರಾದ ಮಾವಳ್ಳಿ ಶಂಕರ್ ತಿಳಿಸಿದರು.

ದೇಶ ಹಸಿವು, ನಿರುದ್ಯೋಗ, ಬೆಲೆ ಏರಿಕೆ ಅಂತಹ ಜ್ವಾಲಂತ ಸಮಸ್ಯೆಗಳನ್ನ ಎದುರಿಸುತ್ತಿರುವುದನ್ನು ಬದಿಗೊತ್ತಿ ಪ್ರಧಾನಿ ಮೋದಿಯ ಮುಖವಿಟ್ಟುಕೊಂಡು ಕೇಂದ್ರ ಸರ್ಕಾರ ಜನರ ಮುಂದೆ ಬರುತ್ತಿದೆ. ಕೇಂದ್ರ ಮೊದಲು ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಎಸ್ ಸಿ, ಎಸ್ ಟಿ, ಒಬಿಸಿ ಯ ಆದಾಯ ಮಿತಿಯನ್ನು ಹೆಚ್ಚಿಸಬೇಕು ಮತ್ತು ಹಿಂದೂಳಿದ ಜಾತಿಗಳಿಗೆ ಹಾಗು ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ನೀಡುವ ಕಾನೂನನ್ನು ರೂಪಿಸಬೇಕು ಮತ್ತು ಎಸ್ ಸಿ , ಎಸ್ ಟಿ ಜನಸಂಖ್ಯೆಗೆ ಅನುಗುಣವಾಗಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು ಮುಂತಾದ ಹಕ್ಕೋತ್ತಾಯಗಳನ್ನು ಮುಂದೆ ಇಟ್ಟುಕೊಂಡು ಈ ಸಮಾವೇಶ ನಡೆಸಲಾಗುವುದು ಎಂದು ಸಮಾವೇಶದ ಸಂಚಾಲಕರಾಧ ಎಣ್ಣೆಗೆರೆ ಆರ್ ವೆಂಕಟರಾಮಯ್ಯ ಹೇಳಿದರು.

More articles

Latest article