Friday, December 6, 2024

ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆನಂದ್ ತೆಲ್ತುಂಬಡೆ ಆಯ್ಕೆ

Most read

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಘೋಷಣೆ ಆಗಿದ್ದು, ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆನಂದ್ ತೆಲ್ತುಂಬಡೆ ಮತ್ತು ಡಾ. ಎನ್.ಜಿ ಮಹಾದೇವಪ್ಪ ಆಯ್ಕೆಯಾಗಿದ್ದಾರೆ.

ವಿವಿಧ ಪ್ರಶಸ್ತಿಗಳ ಪ್ರಧಾನ ಜನವರಿ 31ರಂದು ನಡೆಯಲಿದೆ ಮತ್ತು ಪ್ರಶಸ್ತಿಗಳು ತಲಾ 10 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲವನ್ನು ಹೊಂದಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ – ಕೆ. ಮರುಳಸಿದ್ದಪ್ಪ, ಹಸನ್ ನಯೀಂ ಸುರಕೊಡ, ಕೆ ರಾಮಯ್ಯ, ವೀರಸಂಗಯ್ಯ

ಪಂಪ ಪ್ರಶಸ್ತಿ-  ನಾ. ಡಿಸೋಜಾ

ಬಿ.ವಿ ಕಾರಂತ ಪ್ರಶಸ್ತಿ – ಸಿ. ಬಸವಲಿಂಗಯ್ಯ ಮತ್ತು ಸದಾನಂದ ಸುವರ್ಣ

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ – ಬಾನು ಮುಷ್ತಾಕ್ ಮತ್ತು ಎಚ್ ಎಸ್ ಮುಕ್ತಾಯಕ್ಕ

ಅಕ್ಕಮಹಾದೇವಿ ಪ್ರಶಸ್ತಿ – ಮೀನಾಕ್ಷಿ ಬಾಳಿ

ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ – ಚನ್ನಬಸಯ್ಯ ಮತ್ತು ಎಲ್ ಬಿ ಶೇಖ ಮಾಸ್ತರ

ಡಾ. ಸಿದ್ದಲಿಂಗಯ್ಯ ಪ್ರಶಸ್ತಿ – ಮೊಗಳ್ಳಿ ಗಣೇಶ್, ಉತ್ತಮ ಕಾಂಬ್ಳೆ ಮತ್ತು ಟಿ. ಬಿ ಜಾಹ್ನವಿ

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ – ಜಿ ಎಲ್ ಎನ್ ಸಿಂಹ ಮತ್ತು ಬಸವರಾಜ್ ಎಲ್ ಜಾನೆ

ಜಾನಪದಶ್ರೀ ಪ್ರಶಸ್ತಿ- ವಾದನ – ಅರುವ ಕೊರಗೊಪ್ಪ ಶೆಟ್ಟಿ ಮತ್ತು ಜಿ ಪಿ ಜಗದೀಶ್

 ಜಾನಪದಶ್ರೀ ಪ್ರಶಸ್ತಿ- ಗಾಯನ – ಕಲ್ಲಪ್ಪ ಮಿರ್ಜಾಪುರ ಮತ್ತು ಹಲಗೆ ದುರ್ಗಮ್ಮ

ಅಕ್ಕಮಹಾದೇವಿ ಪ್ರಶಸ್ತಿ – ಜಗನ್ಮಾತೆ ಅಕ್ಕಮಹಾದೇವಿ ಟ್ರಸ್ಟ್, ಡಾ ಆರ್ ಸುನಂದಮ್ಮ, ಮೀನಾಕ್ಷಿ ಬಾಳಿ ಮತ್ತು ವಸುಂಧರಾ ಭೂಪತಿ

ಕನಕಶ್ರೀ ಪ್ರಶಸ್ತಿ – ಡಾ ಲಿಂಗದಹಳ್ಳಿ ಹಾಲಪ್ಪ ಮತ್ತು ಡಾ ಬಿ ಶಿವರಾಮ ಶೆಟ್ಟಿ

ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ – ಶ್ರೀ ಜಿನದತ್ತ ದೇಸಾಯಿ ಮತ್ತು ಗಾಂಧಿ ಸೇವಾಶ್ರಮ

ಟಿ ಚೌಡಯ್ಯ ಪ್ರಶಸ್ತಿ – ಶ್ರೀ ನಿತ್ಯಾನಂದ ಹಳದಿಪುರ ಮತ್ತು ಶ್ರೀ ರಾಮುಲು ಕೋಲಾರ

ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ – ಪಂ ಸೋಮನಾಥ ಮರಡೂರ ಮತ್ತು ಡಾ ನಾಗಮಣಿ ಶ್ರಿನಾಥ್

ಪ್ರೊ. ಕೆ ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ – ಡಾ ಕೆ ವಿಶ್ವನಾಥ್ ಕಾರ್ನಾಡ್ ಮತ್ತು ಚಂದ್ರಕಾಂತ ಪೋಕಳೆ

ಈ ಎಲ್ಲಾ ಪ್ರಶಸ್ತಿ ವಿಜೇತ ಗಣ್ಯರಿಗೆ ಅಭಿನಂದನೆಗಳನ್ನು ಸಿ ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ತಮ್ಮ ಸಾಧನೆ ಮತ್ತು ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

More articles

Latest article